Dr.C.N.Manjunath (@DrCNManjunath) header
Dr.C.N.Manjunath (@DrCNManjunath) profile picture

ಆರೋಗ್ಯ-ಜನಸೇವೆ| Public Health| Ex Director, Jayadeva Institute of Cardiovascular Sciences & Research| Padma Shri Awardee|MP-Bengaluru Rural PC

Bengaluru
Joined March 2024
Photo by Dr.C.N.Manjunath (@DrCNManjunath)Photo by Dr.C.N.Manjunath (@DrCNManjunath)Photo by Dr.C.N.Manjunath (@DrCNManjunath)Photo by Dr.C.N.Manjunath (@DrCNManjunath)Photo by Dr.C.N.Manjunath (@DrCNManjunath)Photo by Dr.C.N.Manjunath (@DrCNManjunath)Photo by Dr.C.N.Manjunath (@DrCNManjunath)Photo by Dr.C.N.Manjunath (@DrCNManjunath)Photo by Dr.C.N.Manjunath (@DrCNManjunath)Photo by Dr.C.N.Manjunath (@DrCNManjunath)
Today, I personally visited Cloudnine Hospital in Nagarbhavi, Bengaluru, where baby Shayan is undergoing treatment. Shayan had sustained an injury to his ear, following which he was taken to the hospital for a surgical procedure. Unfortunately, he developed serious complications during the administration of anaesthesia, resulting in severe brain injury. He is currently undergoing treatment at the hospital. During my visit, I interacted with the doctors treating the child and enquired about his present health condition and the progress of treatment. I instructed the hospital authorities to ensure that all necessary medical care and treatment are provided free of cost, with utmost attention and care. I also met Shayan’s parents, spoke to them and urged them not to lose hope and to remain strong during this difficult time. Since learning about this incident, I have been in constant touch with the treating doctors and the parents over the phone, closely monitoring the child’s health and progress. Today, I personally visited the hospital to understand the situation and extend my support. I sincerely hope and pray that baby Shayan makes a full recovery and returns to a healthy and happy life.
3
33
2,391
ಆಶಾ ಕಾರ್ಯಕರ್ತೆಯರ ಸೇವೆಗೆ ತಕ್ಕ ಗೌರವ ಮತ್ತು ನ್ಯಾಯಯುತ ಗೌರವಧನ ದೊರೆಯಬೇಕು. ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಜನರ ಆರೋಗ್ಯ ರಕ್ಷಣೆಯಲ್ಲಿ ಆಶಾ ಕಾರ್ಯಕರ್ತೆಯರ ಪಾತ್ರ ಅತ್ಯಂತ ಮಹತ್ವದ್ದು. ತಳಮಟ್ಟದಲ್ಲಿ ಆರೋಗ್ಯ ಸೇವೆ ತಲುಪಿಸುವುದರ ಜೊತೆಗೆ ತಾಯಿ ಮತ್ತು ಶಿಶು ಆರೋಗ್ಯ ಸುಧಾರಣೆಯಲ್ಲಿ ಅವರು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಇಂದಿನ ಜೀವನ ವೆಚ್ಚಕ್ಕೆ ಹೋಲಿಸಿದರೆ ತಿಂಗಳಿಗೆ ₹7,500 ಗೌರವಧನ ಯಾವುದಕ್ಕೂ ಸಾಲದು. ₹15,000 ಗೌರವಧನ ಸೇರಿದಂತೆ ತಮ್ಮ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಆಶಾ ಕಾರ್ಯಕರ್ತೆಯರು ನಡೆಸುತ್ತಿರುವ ಹೋರಾಟವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಮೈಕೊರೆಯುವ ಚಳಿಯನ್ನೂ ಲೆಕ್ಕಿಸದೆ, ಹಸುಗೂಸುಗಳೊಂದಿಗೆ ಅಹೋರಾತ್ರಿ ಧರಣಿ ನಡೆಸುತ್ತಿರುವ ಆಶಾ ತಾಯಂದಿರ ಪರಿಸ್ಥಿತಿ ಕಳವಳಕಾರಿಯಾಗಿದೆ. ಜನರ ಆರೋಗ್ಯಕ್ಕಾಗಿ ಹಗಲಿರುಳು ಶ್ರಮಿಸುವ ಈ ಕಾರ್ಯಕರ್ತೆಯರ ಸಂಕಷ್ಟವನ್ನು ಕಡೆಗಣಿಸುವುದು ಸರಿಯಲ್ಲ. ಈ ವಿಚಾರವಾಗಿ ಕೇಂದ್ರ ಸರ್ಕಾರದ ಸಂಬಂಧಪಟ್ಟವರೊಂದಿಗೆ ಮಾತನಾಡಿ, ಆಶಾ ಕಾರ್ಯಕರ್ತೆಯರ ಸಮಸ್ಯೆಗಳು ಮತ್ತು ನ್ಯಾಯಯುತ ಬೇಡಿಕೆಗಳನ್ನು ಗಮನಕ್ಕೆ ತಂದಿದ್ದೇನೆ. ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಜಂಟಿಯಾಗಿ ಕಾರ್ಯಕರ್ತೆಯರ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿ, ಈ ಸಮಸ್ಯೆಗೆ ಶೀಘ್ರ ಪರಿಹಾರ ಒದಗಿಸಬೇಕು. ಸರ್ಕಾರ ಕೂಡಲೇ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ, ಅವರ ಅಹವಾಲು ಆಲಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು. ಆಶಾ ಕಾರ್ಯಕರ್ತೆಯರ ಸೇವೆಗೆ ನ್ಯಾಯಯುತ ಮನ್ನಣೆ, ಗೌರವ ಮತ್ತು ಸೌಲಭ್ಯಗಳು ದೊರೆಯಲಿ ಎಂಬುದು ನನ್ನ ಆಶಯ. #ASHAWorkersProtest #ASHAWorkers #CommunityHealth #DrCNManjunath
1
19
461
ಇಂದು ಆನೇಕಲ್ ತಾಲ್ಲೂಕಿನ ಚಂದಾಪುರದಲ್ಲಿ ನಿರ್ಮಾಣವಾಗುತ್ತಿರುವ ESIC ಆಸ್ಪತ್ರೆಯ ಕಟ್ಟಡ ಕಾಮಗಾರಿಗೆ ಭೇಟಿ ನೀಡಿ ಪ್ರಗತಿಯನ್ನು ಪರಿಶೀಲಿಸಿದೆ. ಕೇಂದ್ರ ಸರ್ಕಾರದ ಸುಮಾರು ₹220 ಕೋಟಿ ವೆಚ್ಚದಲ್ಲಿ 200 ಹಾಸಿಗೆಗಳ ಸಾಮರ್ಥ್ಯದ ಅತ್ಯಾಧುನಿಕ ESIC ಆಸ್ಪತ್ರೆ ನಿರ್ಮಾಣವಾಗುತ್ತಿರುವುದು ಈ ಭಾಗದ ಜನತೆಗೆ ಅತ್ಯಂತ ಸಂತಸದ ಸಂಗತಿಯಾಗಿದೆ. ಕಾಮಗಾರಿಯ ಗುಣಮಟ್ಟ ಮತ್ತು ಪ್ರಗತಿಯ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡೆ. ಈ ಆಸ್ಪತ್ರೆ ಕಾರ್ಯಾರಂಭ ಮಾಡಿದ ಬಳಿಕ ಆನೇಕಲ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಕಾರ್ಮಿಕರು, ಅವರ ಕುಟುಂಬದವರು ಮತ್ತು ಸಾರ್ವಜನಿಕರಿಗೆ ಸುಸಜ್ಜಿತ ವೈದ್ಯಕೀಯ ಸೌಲಭ್ಯಗಳು ಸ್ಥಳೀಯವಾಗಿಯೇ ದೊರೆಯಲಿವೆ. ವಿಶೇಷವಾಗಿ ಕಾರ್ಮಿಕ ವರ್ಗದ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ಈ ಆಸ್ಪತ್ರೆ ಮಹತ್ವದ ಪಾತ್ರ ವಹಿಸಲಿದೆ. ಆರೋಗ್ಯ ಸೇವೆಗಳು ಪ್ರತಿಯೊಬ್ಬರಿಗೂ ಸುಲಭವಾಗಿ ಮತ್ತು ಕೈಗೆಟುಕುವ ದರದಲ್ಲಿ ದೊರೆಯಬೇಕು ಎಂಬುದು ನನ್ನ ಆಶಯ. ಈ ನಿಟ್ಟಿನಲ್ಲಿ ಆಸ್ಪತ್ರೆಯ ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸಿ ಸಾರ್ವಜನಿಕರ ಸೇವೆಗೆ ಮುಕ್ತಗೊಳಿಸುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ. ಈ ಆಸ್ಪತ್ರೆಯು ಈ ಭಾಗದ ಜನರ ಆರೋಗ್ಯ ಮತ್ತು ಕಲ್ಯಾಣಕ್ಕೆ ಮಹತ್ವದ ಕೊಡುಗೆಯಾಗಲಿದೆ ಎಂಬ ವಿಶ್ವಾಸವಿದೆ.
3
28
710
Warm birthday wishes to Shri @Tejasvi_Surya , Member of Parliament from Bengaluru South. May you continue to serve the people with the same energy, dedication and commitment, and achieve greater heights in public life. Wishing you good health, happiness and many more years of success. Happy Birthday!
3
5
1
107
2,911
₹70 ಕೋಟಿ ವೆಚ್ಚದಲ್ಲಿ ಆನೇಕಲ್ ಟೌನ್ ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಕೇಂದ್ರದ ಅನುಮೋದನೆ! ಇಂದು ಆನೇಕಲ್ ರಸ್ತೆ ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿ, ನಿಲ್ದಾಣದ ಅಭಿವೃದ್ಧಿ ಹಾಗೂ ಪ್ರಯಾಣಿಕರಿಗೆ ಅಗತ್ಯವಿರುವ ಮೂಲಸೌಕರ್ಯಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ ಸ್ಥಳ ಪರಿಶೀಲನೆ ನಡೆಸಲಾಯಿತು. ಸ್ಥಳೀಯ ಜನರ ಬಹುದಿನಗಳ ಬೇಡಿಕೆಯಾಗಿದ್ದ LC-112 ರೈಲ್ವೆ ಲೆವೆಲ್ ಕ್ರಾಸಿಂಗ್‌ನಲ್ಲಿ ಸುಮಾರು ₹70 ಕೋಟಿ ವೆಚ್ಚದಲ್ಲಿ ರೈಲ್ವೆ ಮೇಲ್ಸೇತುವೆ (ROB) ನಿರ್ಮಿಸಲು ರೈಲ್ವೆ ಇಲಾಖೆಯಿಂದ ಅನುಮೋದನೆ ದೊರೆತಿರುವುದು ಸಂತಸದ ಸಂಗತಿ. ಈ ಯೋಜನೆ ಜಾರಿಯಾದ ಬಳಿಕ ಈ ಭಾಗದ ಜನರು ಪ್ರತಿನಿತ್ಯ ಎದುರಿಸುತ್ತಿರುವ ಸಂಚಾರದ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯಲಿದೆ. ಸುಗಮ ಸಂಚಾರಕ್ಕೆ ಅನುಕೂಲವಾಗುವುದರ ಜೊತೆಗೆ ಸಾರ್ವಜನಿಕರ ಸಮಯವೂ ಉಳಿತಾಯವಾಗಲಿದೆ. ಜನರ ಅಗತ್ಯಗಳಿಗೆ ಸ್ಪಂದಿಸಿ, ಬಹುದಿನಗಳ ಬೇಡಿಕೆಗೆ ಮನ್ನಣೆ ದೊರೆತಿರುವುದು ಆನೇಕಲ್ ಪ್ರದೇಶದ ಅಭಿವೃದ್ಧಿಯ ದೃಷ್ಟಿಯಿಂದ ಮಹತ್ವದ ಹೆಜ್ಜೆಯಾಗಿದೆ. ಇದೇ ಸಂದರ್ಭದಲ್ಲಿ ರೈಲ್ವೆ ನಿಲ್ದಾಣದ ಸಮಗ್ರ ಅಭಿವೃದ್ಧಿ, ಪ್ರಯಾಣಿಕರ ಸೌಲಭ್ಯಗಳ ಹೆಚ್ಚಳ ಹಾಗೂ ಅಗತ್ಯ ಮೂಲಸೌಕರ್ಯಗಳ ಸುಧಾರಣೆ ಕುರಿತು ಅಧಿಕಾರಿಗಳಿಗೆ ಸೂಕ್ತ ಸಲಹೆ ಮತ್ತು ಸೂಚನೆಗಳನ್ನು ನೀಡಲಾಯಿತು. ಜನರ ನಿರೀಕ್ಷೆಗಳಿಗೆ ಸ್ಪಂದಿಸುವ ಅಭಿವೃದ್ಧಿ ಕಾರ್ಯಗಳಿಗೆ ಸದಾ ನಮ್ಮ ಆದ್ಯತೆ. ಈ ಸಂದರ್ಭದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮುಖಂಡರು, ರೈಲ್ವೆ ಹಾಗೂ ರಸ್ತೆ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು, ಸ್ಥಳೀಯ ಮುಖಂಡರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.
2
7
2
39
1,612
ರಾಮನಗರ ಜಿಲ್ಲೆಯ ಹಾರೋಹಳ್ಳಿ ತಾಲ್ಲೂಕಿನ ದೊಡ್ಡಕುರುಬರಹಳ್ಳಿಯ ಶ್ರೀ ಬಿಸಿಲು ಮಾರಮ್ಮ ದೇವಾಲಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷರಾದ ಶ್ರೀ @Nikhil_Kumar_k ಅವರಿಗೆ ದೇವರ ದರ್ಶನ ಪಡೆಯಲು ಅವಕಾಶ ನೀಡದೆ, ದೇವಾಲಯದ ಬಾಗಿಲಿಗೆ ಬೀಗ ಹಾಕಿರುವುದು ಅತ್ಯಂತ ಬೇಸರದ ಸಂಗತಿ. ದೇವಸ್ಥಾನವೆಂದರೆ ಪ್ರತಿಯೊಬ್ಬರಿಗೂ ಸಮಾನವಾದ ಭಕ್ತಿಯ ತಾಣ. ಅಲ್ಲಿ ರಾಜಕೀಯ ಪಕ್ಷ, ಅಧಿಕಾರ, ಸ್ಥಾನಮಾನ ಅಥವಾ ವೈಯಕ್ತಿಕ ಭಿನ್ನಾಭಿಪ್ರಾಯಗಳಿಗೆ ಯಾವುದೇ ಸ್ಥಾನವಿರಬಾರದು. ರಾಜಕೀಯ ಕಾರಣಗಳಿಗಾಗಿ ದೇವಾಲಯದ ಬಾಗಿಲು ಮುಚ್ಚುವಂತಹ ಘಟನೆಗಳು ಸಮಾಜಕ್ಕೆ ತಪ್ಪು ಸಂದೇಶ ನೀಡುತ್ತವೆ. ಭಿನ್ನಾಭಿಪ್ರಾಯವಿದ್ದರೆ ಅದನ್ನು ರಾಜಕೀಯ ವೇದಿಕೆಯಲ್ಲಿ ವ್ಯಕ್ತಪಡಿಸಲಿ. ಆದರೆ ಧಾರ್ಮಿಕ ಆಚರಣೆಗಳಿಗೆ ಅಡ್ಡಿಪಡಿಸುವುದು ಮತ್ತು ದೇವರ ದರ್ಶನದ ವಿಚಾರದಲ್ಲಿ ರಾಜಕೀಯ ತಾರತಮ್ಯ ತೋರುವುದು ಖಂಡನೀಯ. ಈ ಘಟನೆಗೆ ಸಂಬಂಧಿಸಿದಂತೆ ಸರ್ಕಾರ ತಕ್ಷಣ ಗಮನಹರಿಸಿ, ಜವಾಬ್ದಾರರ ವಿರುದ್ಧ ಕಾನೂನುಬದ್ಧ ಕ್ರಮ ಕೈಗೊಳ್ಳಬೇಕು. ಜನರ ಧಾರ್ಮಿಕ ಭಾವನೆ ಮತ್ತು ನಂಬಿಕೆಗಳಿಗೆ ಗೌರವ ನೀಡುವುದು ಆಡಳಿತದ ಕರ್ತವ್ಯವಾಗಿದೆ.
14
155
3,649
Some moments speak louder than words! ❤️ A little girl perched on her father’s shoulders, eagerly catching a glimpse of Prime Minister Shri @narendramodi during his visit to Bengaluru today. For the father, it was a moment of pride; for the daughter, perhaps a memory she will cherish for a lifetime. And for everyone watching, it was a beautiful glimpse of the love, faith and admiration that Shri Narendra Modi inspires among people across generations. The father’s shoulders gave her a better view, but it was the bond between father and daughter that made this moment truly special. A little girl, a father’s love, and a leader who inspires millions. ❤️ #NarendraModi #Bengaluru #PeopleWithModi #ModiInKarnataka
3
25
141
2,188
I had the privilege of participating in the Golden Jubilee Celebrations of Prashanti Kutiram and the Birth Centenary Commemoration of the revered Shri H. V. Sheshadriji, in the august presence of the Hon’ble Prime Minister of India, Shri @narendramodi . The programme was graced by RSS Sarkaryavah Shri Dattatreya Hosabale, Karnataka Governor Dr. Sudha Yadav, Mayor of Miryang City, South Korea, Shri Ahn Byeong-Gu, along with several other distinguished dignitaries and office-bearers of S-VYASA. The Prime Minister paid tribute to the life and contributions of Shri H. V. Sheshadriji, highlighting his commitment to nation-building and the creation of dedicated and disciplined citizens. He also spoke about Swami Vivekananda’s vision, India’s rich spiritual heritage, the global recognition of Yoga, the promotion of Ayurveda and the importance of integrating traditional knowledge with modern scientific research. His call for Prashanti Kutiram to contribute to the vision of Viksit Bharat over the next 25 years was particularly inspiring. It was a memorable occasion celebrating India’s timeless wisdom, service-oriented values and commitment to holistic health and well-being. My best wishes to Prashanti Kutiram and the entire S-VYASA family for their continued contributions to society and the nation. #PrashantiKutiram #GoldenJubilee #HVSheshadri #NarendraModi #DattatreyaHosabale #Yoga #Ayurveda #ViksitBharat
1
4
33
788
ಕತಾರ್‌ನ ಕರ್ನಾಟಕ ಕತಾರ್ ಸಂಘದ ವತಿಯಿಂದ ಆಯೋಜಿಸಲಾಗಿದ್ದ “ಕರುನಾಡ ವೈಭವ – ೨೦೨೬” ಅದ್ದೂರಿ ಸಾಂಸ್ಕೃತಿಕ ಸಮ್ಮೇಳನದಲ್ಲಿ ನನ್ನ ಧರ್ಮಪತ್ನಿಯೊಂದಿಗೆ ಭಾಗವಹಿಸಿದ್ದು ಅತ್ಯಂತ ಸಂತೋಷದ ಕ್ಷಣವಾಗಿತ್ತು. ವಿದೇಶಿ ನೆಲದಲ್ಲಿ ಕನ್ನಡ ಭಾಷೆ, ನಾಡು, ನುಡಿ, ಕಲೆ, ಸಂಸ್ಕೃತಿ ಹಾಗೂ ಪರಂಪರೆಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಆಯೋಜಿಸಲಾಗಿದ್ದ ಈ ಸಮ್ಮೇಳನವು ಕನ್ನಡಿಗರ ಒಗ್ಗಟ್ಟು ಮತ್ತು ಕನ್ನಡಾಭಿಮಾನಕ್ಕೆ ಸಾಕ್ಷಿಯಾಯಿತು. ದೂರದ ಕತಾರ್‌ನಲ್ಲಿಯೂ ಕನ್ನಡದ ಕಂಪನ್ನು ಪಸರಿಸುತ್ತಾ, ನಮ್ಮ ನಾಡಿನ ಸಂಸ್ಕೃತಿ ಮತ್ತು ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುತ್ತಿರುವ ಕರ್ನಾಟಕ ಕತಾರ್ ಸಂಘದ ಪದಾಧಿಕಾರಿಗಳು ಹಾಗೂ ಪ್ರತಿಯೊಬ್ಬ ಕನ್ನಡಿಗರ ಪ್ರಯತ್ನವನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ. ಈ ಸಂದರ್ಭದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ನಾನು ಸಲ್ಲಿಸಿರುವ ಸೇವೆಯನ್ನು ಸ್ಮರಿಸಿ ಗೌರವಿಸಿದ್ದು ನನಗೆ ಅಪಾರ ಸಂತಸ ಮತ್ತು ಹೆಮ್ಮೆ ತಂದಿತು. ಕಾರ್ಯಕ್ರಮದ ಆಯೋಜಕರು ತೋರಿದ ಆತ್ಮೀಯ ಸ್ವಾಗತ, ಪ್ರೀತಿ, ವಿಶ್ವಾಸ ಹಾಗೂ ಗೌರವಕ್ಕೆ ನನ್ನ ಹೃತ್ಪೂರ್ವಕ ಧನ್ಯವಾದಗಳು. ವಿದೇಶಿ ನೆಲದಲ್ಲಿದ್ದರೂ ತಮ್ಮ ಆತ್ಮೀಯತೆಯಿಂದ ನಮ್ಮನ್ನು ಸ್ವದೇಶದಲ್ಲಿರುವ ಅನುಭವ ನೀಡಿದ ಎಲ್ಲರ ಪ್ರೀತಿಗೆ ಮನಸೋತಿದ್ದೇನೆ. ಕನ್ನಡ ಎಲ್ಲಿದ್ದರೂ ಕನ್ನಡಿಗರೆಲ್ಲರೂ ಒಂದೇ ಎಂಬ ಭಾವನೆಯನ್ನು ಮತ್ತೊಮ್ಮೆ ಸಾರಿದ ಈ ಸುಂದರ ಸಮ್ಮೇಳನ ನನ್ನ ಮನದಲ್ಲಿ ಸದಾ ಸ್ಮರಣೀಯವಾಗಿರಲಿದೆ. ಜೈ ಕರ್ನಾಟಕ! ಜೈ ಕನ್ನಡಾಂಬೆ!
1
5
51
1,147
ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು. ಈ ಬೆಳಕಿನ ಹಬ್ಬವು ಎಲ್ಲರ ದುಃಖ, ಸಂಕಷ್ಟಗಳ ಕತ್ತಲನ್ನು ಕಳೆದು, ಸಂತೋಷ, ಯಶಸ್ಸುಗಳ ಬೆಳಕನ್ನು ಹೊತ್ತು ತರಲಿ ಎಂದು ಹಾರೈಸುತ್ತೇನೆ.
1
19
521
ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷರಾದ ಶ್ರೀ ಬಿ. ವೈ. ವಿಜಯೇಂದ್ರ ಯಡಿಯೂರಪ್ಪ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ಪಕ್ಷದ ಸಂಘಟನೆಯನ್ನು ಬಲಪಡಿಸುವ ನಿಮ್ಮ ಪ್ರಯತ್ನಗಳು ಹಾಗೂ ಸಾರ್ವಜನಿಕ ಜೀವನದಲ್ಲಿ ಜನರ ಆಶೋತ್ತರಗಳಿಗೆ ಸ್ಪಂದಿಸುವ ನಿಮ್ಮ ಕಾಳಜಿ ಮುಂದಿನ ದಿನಗಳಲ್ಲಿಯೂ ಹಲವು ಸಮಾಜಮುಖಿ ಕಾರ್ಯಗಳಿಗೆ ಪ್ರೇರಣೆಯಾಗಲಿ. ಭಗವಂತ ನಿಮಗೆ ಉತ್ತಮ ಆರೋಗ್ಯ, ದೀರ್ಘಾಯುಷ್ಯ, ಸುಖ-ಶಾಂತಿ ಹಾಗೂ ಇನ್ನಷ್ಟು ಜನಸೇವೆಯಲ್ಲಿ ತೊಡಗಿಸಿಕೊಳ್ಳುವ ಶಕ್ತಿಯನ್ನು ಕರುಣಿಸಲಿ ಎಂದು ಹಾರೈಸುತ್ತೇನೆ. @BYVijayendra
4
3
56
673
ಮಂತ್ರಾಲಯದಲ್ಲಿ ರಾಘವ ಸರೋವರ ಪ್ರತಿಷ್ಠಾನದ ವತಿಯಿಂದ ಆಯೋಜಿಸಲಾಗಿದ್ದ ರಾಘವ ಸರೋವರದ ಶಂಕುಸ್ಥಾಪನಾ ಸಮಾರಂಭದಲ್ಲಿ ಭಾಗವಹಿಸಿ, ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಆಶೀರ್ವಾದ ಪಡೆಯಲಾಯಿತು. ಈ ಸಂದರ್ಭದಲ್ಲಿ ಪರಿಸರ ಸಂರಕ್ಷಣೆ ಮತ್ತು ಜಲಸಂರಕ್ಷಣೆಯ ಮಹತ್ವದ ಕುರಿತು ಮಾತನಾಡಿದೆ. ನೀರು ಮತ್ತು ಆಮ್ಲಜನಕ ಪ್ರಕೃತಿ ನಮಗೆ ಉಚಿತವಾಗಿ ನೀಡಿರುವ ಅಮೂಲ್ಯ ಸಂಪತ್ತು. ಆದರೆ ಅವುಗಳ ಕೊರತೆ ಎದುರಾದಾಗ ಮಾತ್ರ ಅವುಗಳ ನಿಜವಾದ ಬೆಲೆ ನಮಗೆ ಅರ್ಥವಾಗುತ್ತದೆ. ಇಂದು ಕೈಗಾರಿಕೀಕರಣ ಮತ್ತು ನಗರೀಕರಣದಿಂದ ವಾಯುಮಾಲಿನ್ಯ, ಜಲಮಾಲಿನ್ಯ ಹಾಗೂ ಪರಿಸರದ ಮೇಲಿನ ಒತ್ತಡ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೆರೆಗಳ ಸಂರಕ್ಷಣೆ, ಮಳೆನೀರು ಕೊಯ್ಲು, ಅಂತರ್ಜಲ ವೃದ್ಧಿ ಮತ್ತು ಗಿಡಮರಗಳನ್ನು ಬೆಳೆಸುವುದು ನಮ್ಮೆಲ್ಲರ ಆದ್ಯತೆಯಾಗಬೇಕು. ನೀರನ್ನು ಭವಿಷ್ಯದ ಬಿಳಿ ಚಿನ್ನವೆಂದು ಪರಿಗಣಿಸಿ ಉಳಿಸಬೇಕು. ಇಂದು ನಾವು ನೀರನ್ನು ಸಂರಕ್ಷಿಸಿದರೆ ಮಾತ್ರ ಮುಂದಿನ ಪೀಳಿಗೆಗೆ ನೀರು ಮತ್ತು ಹಸಿರು ಪರಿಸರವನ್ನು ಉಳಿಸಿಕೊಡಲು ಸಾಧ್ಯ. ರಾಘವ ಸರೋವರ ಯೋಜನೆಗೆ ₹25 ಲಕ್ಷ ದೇಣಿಗೆ ನೀಡಿರುವ ಖ್ಯಾತ ನಟ ಹಾಗೂ ನಿರ್ಮಾಪಕ ಮದನ್ ಪಾಟೀಲ್ ಅವರ ಸಮಾಜಮುಖಿ ಕಾರ್ಯವನ್ನು ಅಭಿನಂದಿಸಿದೆ. ಹಣಕ್ಕಿಂತ ಮುಖ್ಯವಾದದ್ದು ಸಮಾಜದ ಬಗ್ಗೆ ಇರುವ ಕಾಳಜಿ ಮತ್ತು ದಾನ ಮಾಡುವ ಹೃದಯವಂತಿಕೆ. ಆಧ್ಯಾತ್ಮಿಕ ಕ್ಷೇತ್ರದ ಪವಿತ್ರ ಸಾನ್ನಿಧ್ಯದಲ್ಲಿ ಪರಿಸರ ಮತ್ತು ಜಲಸಂರಕ್ಷಣೆಯಂತಹ ಸಮಾಜಮುಖಿ ಕಾರ್ಯಗಳು ನಡೆಯುತ್ತಿರುವುದು ಸಂತಸದ ಸಂಗತಿ. ಈ ಯೋಜನೆ ಯಶಸ್ವಿಯಾಗಿ ಪೂರ್ಣಗೊಂಡು ಈ ಭಾಗದ ಜನರಿಗೆ ಕುಡಿಯುವ ನೀರು, ಅಂತರ್ಜಲ ವೃದ್ಧಿ ಹಾಗೂ ಪರಿಸರ ಸಂರಕ್ಷಣೆಗೆ ಸಹಕಾರಿಯಾಗಲಿ ಎಂದು ಹಾರೈಸಿದೆ. ಈ ಸಂದರ್ಭದಲ್ಲಿ ಶ್ರೀಮಠದ ಪೀಠಾಧಿಪತಿಗಳಾದ ಶ್ರೀ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು, ಮದನ್ ಪಾಟೀಲ್, HAL ಸಂಸ್ಥೆಯ CMD ಶ್ರೀ ರಂಗನಾಥ್, ಡಾ. ರಾಮಚಂದ್ರ, ಶ್ರೀ ಧನಂಜಯ, ಪರಿಸರ ಪ್ರೇಮಿ ಶ್ರೀ ರವೀಂದ್ರ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
1
5
62
1,207
Bengaluru is set to achieve another significant milestone in its urban infrastructure journey with the inauguration of the elevated stretch of #NammaMetro Pink Line by Hon’ble Prime Minister Shri @narendramodi avaru on November 13. The 7.5-km elevated corridor, connecting Kalena Agrahara to Tavarekere via Bannerghatta Road, will bring metro connectivity to several important locations, including Hulimavu, IIM Bengaluru, JP Nagar 4th Phase and Jayadeva Hospital. The Pink Line, spanning 21.26 km from Kalena Agrahara in South Bengaluru to Nagawara in North Bengaluru, comprises both elevated and underground sections. The remaining 13.76-km underground stretch will further strengthen connectivity across the city. With the opening of this elevated section, Bengaluru’s operational metro network will cross the 100-km milestone, expanding to approximately 103.6 km. This will provide much-needed relief to thousands of daily commuters, particularly those travelling along Bannerghatta Road and adjoining areas, while reducing traffic congestion and travel time. I sincerely congratulate Hon’ble Prime Minister Shri Narendra Modi Ji and the Government of India for their continued commitment towards strengthening Bengaluru’s urban infrastructure and modernising public transportation. My appreciation also goes to the Karnataka Government, BMRCL officials, engineers and everyone who has worked tirelessly to make this important project a reality. A stronger metro network means better connectivity, less congestion, cleaner mobility and a better quality of life for the people of Bengaluru. #NammaMetro #PinkLine #NarendraModi #Bengaluru #InfrastructureDevelopment #UrbanMobility
8
9
103
3,644
It was a privilege to participate in the Brahmasthanam Mahotsavam at Mata Amritanandamayi Mutt in Mysuru and receive the blessings of Pujya Mata Amritanandamayi Amma. On this occasion, I digitally inaugurated the newly constructed 100-bed block of Amritakripa Multi-Speciality Hospital at Roopanagar, Mysuru. Amma is a divine ambassador of humanity. Her contributions to spirituality, education and healthcare are truly remarkable. Through her selfless service, she has been working to make quality healthcare accessible to the underprivileged and middle-class sections of society. I firmly believe that education must go beyond literacy and instil values and samskara. The younger generation must focus on responsible communication, healthy relationships and physical well-being through yoga and exercise. As I said during the programme, “The power to protect is mightier than the power to destroy.” Let us all contribute to society through small acts of kindness and dedicate ourselves to the greater good. #MataAmritanandamayi #Amma #DrCNManjunath #Healthcare #Humanity #Mysuru
4
76
2,387
Dr.C.N.Manjunath retweeted
ಕನ್ನಡ ರಾಜ್ಯೋತ್ಸವದ ಶುಭ ಸಂದರ್ಭದಲ್ಲಿ ಕರ್ನಾಟಕದ ಜನತೆಗೆ ಹೃತ್ಪೂರ್ವಕ ಶುಭಾಶಯಗಳು! ಕರ್ನಾಟಕವು ಶ್ರೀಮಂತ ಪರಂಪರೆ, ಗಮನಾರ್ಹ ಸಾಧನೆಗಳು ಮತ್ತು ಅಪಾರ ಸಾಧ್ಯತೆಗಳ ನಾಡಾಗಿದೆ. ಇದರ ವೈಭವೋಪೇತ ಪಾರಂಪರಿಕ ಶ್ರೇಷ್ಠತೆ ಹಾಗೂ ಸಾರ್ವಕಾಲಿಕ ಆಚಾರ, ವಿಚಾರಗಳು ನಮ್ಮ ದೇಶದ ಸಾಂಸ್ಕೃತಿಕ ಭವ್ಯತೆಯನ್ನು ಮತ್ತಷ್ಟು ಶ್ರೀಮಂತಗೊಳಿಸಿವೆ. ಕರ್ನಾಟಕದ ಜನರು ತಮ್ಮ ಕಠಿಣ ಪರಿಶ್ರಮ, ಉದ್ಯಮಶೀಲತೆ ಮತ್ತು ವಿಶೇಷವಾಗಿ ಭವಿಷ್ಯದ ವಲಯಗಳಲ್ಲಿನ ಅದ್ಭುತ ಕೌಶಲ್ಯಗಳ ಮೂಲಕ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿದ್ದಾರೆ. ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ಬಾಹ್ಯಾಕಾಶ ಕ್ಷೇತ್ರದಿಂದ ಹಿಡಿದು ಕೃತಕ ಬುದ್ಧಿಮತ್ತೆ, ಸುಧಾರಿತ ಉತ್ಪಾದನೆ ಹಾಗೂ ಸ್ಟಾರ್ಟ್‌ಅಪ್‌ಗಳವರೆಗೆ, ಕರ್ನಾಟಕದ ಜನರು ತಮ್ಮ ಚಾಣಾಕ್ಷತೆ ಹಾಗೂ ನೈಪುಣ್ಯತೆಯನ್ನು ಪದೇ ಪದೇ ಪ್ರದರ್ಶಿಸಿದ್ದಾರೆ. ಅವರು ಜಾಗತಿಕ ಮಟ್ಟದ ಜಟಿಲ ಸವಾಲುಗಳಿಗೆ ಪರಿಹಾರಗಳನ್ನು ಒದಗಿಸುವಲ್ಲಿ ಮುಂಚೂಣಿಯಲ್ಲಿದ್ದಾರೆ. ಈ ವಿಶೇಷ ಸಂದರ್ಭವು ಜನರ ಜೀವನದಲ್ಲಿ ಸಂತಸ ಮತ್ತು ಸಮೃದ್ಧಿಯನ್ನು ತರಲಿ ಎಂದು ಹಾರೈಸುತ್ತೇನೆ.
33
446
6
4,142
47,781
ಕರ್ನಾಟಕ ರಾಜ್ಯೋತ್ಸವದ ಶುಭ ಸಂದರ್ಭದಲ್ಲಿ ಬೆಂಗಳೂರು–ಮುಂಬೈ ವಂದೇ ಭಾರತ್ ಸ್ಲೀಪರ್ ರೈಲು ಸೇವೆಗೆ ಹಸಿರು ನಿಶಾನೆ ತೋರಿಸಿರುವುದು ಸಂತಸದ ಸಂಗತಿ. ಮಾನ್ಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತೀಯ ರೈಲ್ವೆ ಆಧುನಿಕ ತಂತ್ರಜ್ಞಾನದೊಂದಿಗೆ ಹೊಸ ರೂಪ ಪಡೆಯುತ್ತಿದೆ. 2026–27ನೇ ಸಾಲಿನಲ್ಲಿ ಕರ್ನಾಟಕಕ್ಕೆ ₹7,748 ಕೋಟಿ ರೈಲ್ವೆ ಅನುದಾನ ಮೀಸಲಿಟ್ಟಿರುವುದು ರಾಜ್ಯದ ರೈಲ್ವೆ ಅಭಿವೃದ್ಧಿಗೆ ದೊರೆತಿರುವ ಮಹತ್ವದ ಕೊಡುಗೆಯಾಗಿದೆ. ಇಂದು ಕೇಂದ್ರ ಸಚಿವರಾದ ಶ್ರೀ ಪ್ರಹ್ಲಾದ್ ಜೋಶಿ, ಶ್ರೀ ಅಶ್ವಿನಿ ವೈಷ್ಣವ್, ಶ್ರೀ ಎಚ್. ಡಿ. ಕುಮಾರಸ್ವಾಮಿ, ಶ್ರೀ ವಿ. ಸೋಮಣ್ಣ, ಕೇಂದ್ರ ಸಚಿವೆ ಕುಮಾರಿ ಶೋಭಾ ಕರಂದ್ಲಾಜೆ, ಲೋಕಸಭಾ ಸದಸ್ಯರಾದ ಶ್ರೀ ಪಿ. ಸಿ. ಮೋಹನ್, ಶ್ರೀ ತೇಜಸ್ವಿ ಸೂರ್ಯ, ರಾಜ್ಯಸಭಾ ಸದಸ್ಯರಾದ ಶ್ರೀ ಲೇಹರ್ ಸಿಂಗ್ ಸಿರೋಯಾ ಹಾಗೂ ಶ್ರೀ ಜಗ್ಗೇಶ್ ಸೇರಿದಂತೆ ಹಲವು ಗಣ್ಯರು ಮತ್ತು ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಬೆಂಗಳೂರು–ಮುಂಬೈ ವಂದೇ ಭಾರತ್ ಸ್ಲೀಪರ್ ರೈಲು ಸೇವೆಗೆ ಹಸಿರು ನಿಶಾನೆ ತೋರಿಸಿ ಶುಭಾರಂಭದಲ್ಲಿ ಭಾಗವಹಿಸಿದೆ. ಅತ್ಯಾಧುನಿಕ ಸೌಲಭ್ಯಗಳು, ಸುರಕ್ಷತೆ ಮತ್ತು ಆರಾಮದಾಯಕ ಪ್ರಯಾಣವನ್ನು ಒಳಗೊಂಡಿರುವ ಈ ರೈಲು ಸೇವೆಯು ಬೆಂಗಳೂರು ಮತ್ತು ಮುಂಬೈ ನಡುವಿನ ಸಂಪರ್ಕವನ್ನು ಮತ್ತಷ್ಟು ಸುಗಮಗೊಳಿಸಲಿದೆ. ಉದ್ಯೋಗ, ವ್ಯಾಪಾರ, ಪ್ರವಾಸೋದ್ಯಮ ಸೇರಿದಂತೆ ಹಲವು ಕ್ಷೇತ್ರಗಳ ಬೆಳವಣಿಗೆಗೆ ಸಹಕಾರಿಯಾಗಲಿದೆ. ಕನ್ನಡ ರಾಜ್ಯೋತ್ಸವದಂದು ಕನ್ನಡ ನಾಡಿಗೆ ದೊರೆತ ಈ ರೈಲ್ವೆ ಕೊಡುಗೆ ರಾಜ್ಯದ ಅಭಿವೃದ್ಧಿಯ ಪಯಣದಲ್ಲಿ ಮತ್ತೊಂದು ಮಹತ್ವದ ಹೆಜ್ಜೆಯಾಗಲಿ. ನಾಡಿನ ಸಮಸ್ತ ಜನತೆಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. #KannadaRajyotsava #VandeBharatSleeper #IndianRailways #BengaluruMumbai #KarnatakaDevelopment
17
706
ಉತ್ತರಾಖಂಡದಲ್ಲಿ ಸಂಭವಿಸಿದ ಹೆಲಿಕಾಪ್ಟರ್ ಅಪಘಾತದಲ್ಲಿ ಚಾರ್‌ಧಾಮ್ ಯಾತ್ರೆಗೆ ತೆರಳಿದ್ದ ಕರ್ನಾಟಕದ ಐವರು ಸೇರಿದಂತೆ ಒಟ್ಟು ಆರು ಮಂದಿ ದುರಂತ ಅಂತ್ಯ ಕಂಡಿರುವ ಸುದ್ದಿ ಮನಸ್ಸಿಗೆ ಅಪಾರ ನೋವುಂಟುಮಾಡಿದೆ. ದೇವರ ದರ್ಶನಕ್ಕಾಗಿ ಭಕ್ತಿಯಿಂದ ತೆರಳಿದ್ದವರು ಹೀಗೆ ದುರಂತಕ್ಕೆ ಬಲಿಯಾಗಿರುವುದು ದುರದೃಷ್ಟಕರ. ಅಗಲಿದ ಎಲ್ಲರಿಗೂ ಭಾವಪೂರ್ಣ ಶ್ರದ್ಧಾಂಜಲಿಗಳನ್ನು ಸಲ್ಲಿಸುತ್ತೇನೆ. ಅವರ ಕುಟುಂಬಗಳ ದುಃಖದಲ್ಲಿ ನಾನೂ ಭಾಗಿಯಾಗಿದ್ದೇನೆ. ಈ ಕಠಿಣ ಸಮಯದಲ್ಲಿ ಕುಟುಂಬಸ್ಥರಿಗೆ ದುಃಖವನ್ನು ಸಹಿಸುವ ಧೈರ್ಯ ಮತ್ತು ಮನೋಬಲ ದೊರೆಯಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಓಂ ಶಾಂತಿ.
4
413
ಇಂದು ರಾಮನಗರದ ಆರ್‌ವಿಸಿಎಸ್ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ “ಪ್ರಜಾಪ್ರಭುತ್ವವನ್ನು ಉಳಿಸಿ, ಅರಾಜಕತೆಯನ್ನು ಅಳಿಸಿ” ಎಂಬ ವಿಷಯದ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದೆ. S.I.R. ಪ್ರಕ್ರಿಯೆಯನ್ನು ಅನಗತ್ಯವಾಗಿ ವಿವಾದಕ್ಕೀಡು ಮಾಡದೆ, ಚುನಾವಣಾ ಆಯೋಗದ ನಿರ್ಧಾರವನ್ನು ಗೌರವಿಸಬೇಕು. ಸುಳ್ಳು ಪ್ರಚಾರ ಮತ್ತು ರಾಜಕೀಯ ಲಾಭಕ್ಕಾಗಿ ಜನರಲ್ಲಿ ಗೊಂದಲ ಮೂಡಿಸುವ ಪ್ರಯತ್ನಗಳನ್ನು ತಡೆಯಬೇಕು. ಪ್ರಜಾಪ್ರಭುತ್ವದಲ್ಲಿ ಭಿನ್ನಾಭಿಪ್ರಾಯಗಳಿಗೆ ಅವಕಾಶವಿದೆ. ಆದರೆ, ಅವು ಸಮಾಜದಲ್ಲಿ ದ್ವೇಷ ಮತ್ತು ಅರಾಜಕತೆಗೆ ಕಾರಣವಾಗಬಾರದು. ಸತ್ಯಕ್ಕೆ ಆದ್ಯತೆ ನೀಡಿ, ಸಂವಿಧಾನದ ಆಶಯಗಳನ್ನು ಗೌರವಿಸಿ, ದೇಶದ ಏಕತೆ, ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರು, ಕಾರ್ಯಕರ್ತರು ಹಾಗೂ ಪತ್ರಿಕಾ ಪ್ರತಿನಿಧಿಗಳು ಉಪಸ್ಥಿತರಿದ್ದರು. #CNManjunath #SIR #SaveDemocracy #Democracy #BJP
5
37
605