ಕಾಂಗ್ರೆಸ್ ಸರಕಾರದಿಂದ ಹೈನುಗಾರರಿಗೆ 7 ರೂ. ಪ್ರೋತ್ಸಾಹಧನ ಘೋಷಣೆಯಾದ ಬಳಿಕ ಗ್ರಾಮೀಣ ಯುವಕರು ಹೈನುಗಾರಿಕೆಯತ್ತ ಹೆಚ್ಚಿನ ಆಸಕ್ತಿ ವಹಿಸುತ್ತಿದ್ದು, ಮುಂದಿನ ವರ್ಷದಿಂದ 25 ಲಕ್ಷ ಲೀಟರ್ ಹಾಲು ಉತ್ಪಾದನೆ ಹೆಚ್ಚಾಗುವ ನಿರೀಕ್ಷೆ ಇದೆ.
ಹಾಲಿನ ದರ ಏರಿಕೆಯಾದ ಬಳಿಕ ನಿತ್ಯ 10 ಲಕ್ಷ ಲೀಟರ್ ಹಾಲು ಉತ್ಪಾದನೆ ಏರಿಕೆಯಾಗಿದ್ದು, ಗ್ರಾಮೀಣ ಭಾಗದಲ್ಲಿ ಸಾವಿರಾರು ಉದ್ಯೋಗಗಳು ಸೃಷ್ಟಿಯಾಗಲಿವೆ.
LIVE: ಶ್ರೀಮತಿ ಇಂದಿರಾ ಗಾಂಧಿ ಅವರ ಜನ್ಮದಿನಾಚರಣೆ. nitter.gq/i/broadcasts/2evOnXlvZ…
ದ್ವಿಚಕ್ರ ವಾಹನ ಚಾಲಕರು ಹಾಗೂ ಸಹ ಪ್ರಯಾಣಿಕರ ಸುರಕ್ಷತೆಯ ಉದ್ದೇಶದಿಂದ ಹಾಫ್ ಹೆಲ್ಮೆಟ್ ಬಳಕೆ ನಿಷೇಧಿಸಲು ಕಾಂಗ್ರೆಸ್ ಸರ್ಕಾರ ನಿರ್ಧರಿಸಿದೆ.
ಈ ಸಂಬಂಧ ಶೀಘ್ರವೇ ಕಾನೂನು ಜಾರಿಯಾಗಲಿದ್ದು, ಜತೆಗೆ ಫುಟ್ಪಾತ್ ನಲ್ಲಿ ವಾಹನಗಳನ್ನು ಚಲಾಯಿಸುವವರ ವಿರುದ್ಧವೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸರ್ಕಾರ ನಿರ್ಧರಿಸಿದೆ.
Remembering Bharat Ratna Smt. Indira Gandhi Ji, India's first woman Prime Minister, on her birth anniversary.
A symbol of courage, visionary leadership and unwavering determination, she shaped a stronger, self-reliant and united India.
ಬ್ರಿಟಿಷರ ವಿರುದ್ಧ ಮೊದಲ ಸ್ವಾತಂತ್ರ್ಯ ಹೋರಾಟದ ಕಿಚ್ಚು ಹೊತ್ತಿಸಿದ ವೀರ ವನಿತೆ ಝಾನ್ಸಿರಾಣಿ ಲಕ್ಷ್ಮೀಬಾಯಿ ಅವರ ಪುಣ್ಯಸ್ಮರಣೆಯಂದು ನಮ್ಮ ಶತಕೋಟಿ ನಮನಗಳು.
ಭಾರತದ ಮೊದಲ ಮಹಿಳಾ ಪ್ರಧಾನಮಂತ್ರಿ ದಿವಂಗತ ಶ್ರೀಮತಿ ಇಂದಿರಾ ಗಾಂಧಿ ಅವರ ಜನ್ಮದಿನದಂದು ನಮ್ಮ ಗೌರವಪೂರ್ವಕ ನಮನಗಳು.
ಭಾರತದ ಆತ್ಮಗೌರವ, ಸ್ವಾವಲಂಬನೆ ಮತ್ತು ಶಕ್ತಿಯ ಸಂಕೇತವಾಗಿ ಇಂದಿರಾ ಗಾಂಧಿ ಅವರು ಎಂದೆಂದಿಗೂ ಜನಮಾನಸದಲ್ಲಿ ಅಜರಾಮರ. ಬಲಿಷ್ಠ ಭಾರತದ ನಿರ್ಮಾಣಕ್ಕೆ ಅವರು ನೀಡಿದ ಕೊಡುಗೆಗಳು ಸದಾ ಸ್ಮರಣೀಯ.
ಕರ್ನಾಟಕಕ್ಕೆ ಕೈಗಾರಿಕೆ ತರಲು ರಾಜ್ಯ ಸರ್ಕಾರ ಭೂಮಿ ನೀಡುತ್ತಿಲ್ಲ ಎಂದು ಸುಳ್ಳು ಅರೋಪ ಮಾಡಿದ್ದ ಕೇಂದ್ರ ತು(ಉ)ಕ್ಕು ಸಚಿವರು, ಈಗ ರಾಜ್ಯಕ್ಕೆ ಕೈಗಾರಿಕೆ ತರುವುದು ತನ್ನಿಂದ ಸಾಧ್ಯವಿಲ್ಲ ಎಂದು ಪರೋಕ್ಷವಾಗಿ ಒಪ್ಪಿಕೊಂಡು ತಾವೊಬ್ಬ ನಾಲಾಯಕ್ ಮಂತ್ರಿ ಎಂಬುದನ್ನು ಸಾಬೀತುಪಡಿಸಿದ್ದಾರೆ.
ಋತುಬಂಧದ (Menopause) ಸಂದರ್ಭದಲ್ಲಿ ಮಹಿಳೆಯರಲ್ಲಿ ಉಂಟಾಗುವ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳ ಕುರಿತು ಅರಿವು ಮೂಡಿಸಲು ಹಾಗೂ ಸೂಕ್ತ ಚಿಕಿತ್ಸೆ ಒದಗಿಸಲು ಕಾಂಗ್ರೆಸ್ ಸರ್ಕಾರ ʻಋತುತಾರೆʼ ಎಂಬ ವಿನೂತನ ಯೋಜನೆಯನ್ನು ಜಾರಿಗೊಳಿಸಿದೆ.
ಈ ಯೋಜನೆಯಡಿ ಪ್ರತಿ ಬುಧವಾರ ಜಿಲ್ಲಾ ಹಾಗೂ ತಾಲೂಕು ಆರೋಗ್ಯ ಕೇಂದ್ರಗಳಲ್ಲಿ ವಿಶೇಷ ʻಆರೋಗ್ಯ ಶಿಬಿರʼ ನಡೆಯಲಿದ್ದು, ಆಶಾ ಕಾರ್ಯಕರ್ತೆಯರು ಋತುಬಂಧದ ಸಮಸ್ಯೆಗಳ ಕುರಿತು ಮಾಹಿತಿ ಹಾಗೂ ಮಾರ್ಗದರ್ಶನ ನೀಡುತ್ತಾರೆ.
ಸೋನಿಯಾ ಗಾಂಧಿ ಅವರು 2004ರಲ್ಲಿ ಪ್ರಧಾನಿ ಆಗಬೇಕು. ಹೀಗಾಗಿ ನೀವೇ ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕರಾಗಿ ಎಂದು ನಾನು ಹಠ ಮಾಡಿದೆ. ಆದರೆ ಸೋನಿಯಾ ಗಾಂಧಿ ಅವರು ಮನಮೋಹನ್ ಸಿಂಗ್ ಅವರ ಹೆಸರು ಸೂಚಿಸಿದರು.
@KHMuniyappaklr
ಸಮಾಜ ಕಲ್ಯಾಣ ಸಚಿವರು.
ಬೆಂಗಳೂರಿನಲ್ಲಿ ಮಳೆನೀರಿನ ಹರಿವು ಸುಧಾರಣೆ ಮತ್ತು ಪ್ರವಾಹ ತಡೆಗೆ ಕಾಂಗ್ರೆಸ್ ಸರ್ಕಾರ 2 ಸಾವಿರ ಕೋಟಿ ರೂ. ಬೃಹತ್ ಯೋಜನೆ ರೂಪಿಸಿದೆ.
174 ಕಿ.ಮೀ. ರಾಜಕಾಲುವೆಗಳ ವೈಜ್ಞಾನಿಕ ಪುನರ್ ನಿರ್ಮಾಣದ ಗುರಿಯೊಂದಿಗೆ ಒಟ್ಟು 351 ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಿದೆ.
ಇದು ಬ್ರಾಂಡ್ ಬೆಂಗಳೂರು ನಿರ್ಮಾಣದತ್ತ ನಮ್ಮ ದೃಢ ಹಾಗೂ ದಿಟ್ಟ ಹೆಜ್ಜೆ.
ಕೃತಕ ಬುದ್ಧಿಮತ್ತೆ ವಿಶ್ವವಿದ್ಯಾಲಯ (AI University) ಸ್ಥಾಪನೆಯ ಪೂರ್ವಭಾವಿಯಾಗಿ ಕಾಂಗ್ರೆಸ್ ಸರ್ಕಾರ, ₹35 ಕೋಟಿ ವೆಚ್ಚದಲ್ಲಿ 'ಕರ್ನಾಟಕ AI ಹಬ್' ಸ್ಥಾಪನೆಗೆ ಚಾಲನೆ ನೀಡಿದೆ.
ವಿದ್ಯಾರ್ಥಿಗಳು, ಪದವೀಧರರು, ಉದ್ಯೋಗಿಗಳು ಮತ್ತು ಸಂಶೋಧಕರಿಗಾಗಿ ಬೆಂಗಳೂರಿನ IIIT, 3 ಹಂತದ ಕೋರ್ಸ್‌ಗಳನ್ನು ವಿನ್ಯಾಸಗೊಳಿಸಿದೆ.
ನವೋದ್ಯಮಿಗಳಿಗೆ ಮಾರ್ಗದರ್ಶನ ಮತ್ತು ಮಾರುಕಟ್ಟೆ ಸಂಪರ್ಕ ಒದಗಿಸಲು ಪ್ರತ್ಯೇಕ AI ಸ್ಟಾರ್ಟ್‌ಅಪ್ ಹಬ್ ಸಹ ಇರಲಿದೆ.
ರಾಜ್ಯದಲ್ಲಿ ಹೈನುಗಾರಿಕೆಗೆ ಉತ್ತೇಜನ ನೀಡುವ ಮಹತ್ವಾಕಾಂಕ್ಷಿ ಗುರಿ ಹೊಂದಲಾಗಿದೆ.
ಮುಂದಿನ ವರ್ಷ ರಾಜ್ಯದಲ್ಲಿ 25 ಲಕ್ಷ ಲೀಟರ್ ಹಾಲು ಉತ್ಪಾದನೆ ಹೆಚ್ಚಳವಾಗುವ ಹಾಗೂ ಈ ಕ್ಷೇತ್ರದಲ್ಲಿ 50 ಸಾವಿರ ಉದ್ಯೋಗಳು ಸೃಷ್ಟಿಯಾಗುವ ನಿರೀಕ್ಷೆ ಇದೆ.
SSLC ಮತ್ತು ದ್ವಿತೀಯ ಪಿಯುಸಿ ಫಲಿತಾಂಶ ಸುಧಾರಣೆಗಾಗಿ ಕಾಂಗ್ರೆಸ್ ಸರ್ಕಾರ ʻಮಿಷನ್ 60+ʼ ವಿಶೇಷ ಅಭಿಯಾನ ಆರಂಭಿಸಿದೆ.
ಪ್ರತಿ ವಿದ್ಯಾರ್ಥಿಯೂ ಶೇ.60ಕ್ಕಿಂತ ಹೆಚ್ಚಿನ ಅಂಕ ಗಳಿಸಲು ಉತ್ತೇಜಿಸುವುದು ಮತ್ತು ಶಾಲಾ-ಕಾಲೇಜುಗಳಲ್ಲಿ ಶೇ.100ರಷ್ಟು ಫಲಿತಾಂಶ ಸಾಧಿಸುವುದು ಈ ಅಭಿಯಾನದ ಉದ್ದೇಶ.
2015: Space-tech roads 🚀
2018: Tea from sewer gas ☕
2019: Clouds beat radar ☁️
2024: Non-biological 😇
2026: Soil scan on a smartphone 📱
The streak continues. Nobel committee, are you taking notes?
ವಿಶ್ವದಲ್ಲೇ ಬೆರಗು ಮೂಡಿಸುವಂತಹ ಕೆಲಸ ಮಾಡಿರುವ ರಾಷ್ಟ್ರದ ಮಹಾನ್ ನಾಯಕಿ ಶ್ರೀಮತಿ ಸೋನಿಯಾ ಗಾಂಧಿ ಅವರ ಆತ್ಮಚರಿತ್ರೆಯನ್ನು ಬೆಂಗಳೂರಿನಲ್ಲಿ ಬಿಡುಗಡೆ ಮಾಡಿರುವುದು ನಮ್ಮ ಹೆಮ್ಮೆಯ ವಿಚಾರ. 1999ರ ಚುನಾವಣೆಯಲ್ಲಿ ಸೋತ ಬಳಿಕ ಸೋನಿಯಾ ಗಾಂಧಿ ಅವರು ದೇಶದಲ್ಲಿ ರೈತರ ಆತ್ಮಹತ್ಯೆ ಎಲ್ಲೆಲ್ಲಿ ಆಗುತ್ತಿತ್ತೋ ಅಲ್ಲೆಲ್ಲ ಪ್ರವಾಸ ಮಾಡಿ ರೈತರ ಕುಟುಂಬಗಳನ್ನು ಭೇಟಿ ಮಾಡಿ ಅವರ ಕಷ್ಟಸುಖ ಆಲಿಸುತ್ತಿದ್ದರು. ಗಂಡನಿಗೆ ಯಾವ ರೀತಿ ಮಡದಿಯಾಗಿರಬೇಕು, ಅತ್ತೆಗೆ ಯಾವ ರೀತಿ ಸೊಸೆಯಾಗಿರಬೇಕು, ಮಕ್ಕಳಿಗೆ ಯಾವ ರೀತಿ ತಾಯಿಯಾಗಿರಬೇಕು, ಪಕ್ಷದ ಕಾರ್ಯಕರ್ತರನ್ನು ಯಾವ ರೀತಿ ನೋಡಿಕೊಳ್ಳಬೇಕು ಎಂಬುದನ್ನು ಸೋನಿಯಾ ಗಾಂಧಿ ಅವರಿಂದ ಕಲಿಯಬೇಕು.
@HariprasadBK2
ಕೆಪಿಸಿಸಿ ಅಧ್ಯಕ್ಷರು.
ಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷರಾದ ಶ್ರೀಮತಿ ಸೋನಿಯಾ ಗಾಂಧಿ ಅವರ ಆತ್ಮಚರಿತ್ರೆ ಪುಸ್ತಕವನ್ನು ಭಾರತ ಜೋಡೋ ಸಭಾಂಗಣದಲ್ಲಿ ಕೆಪಿಸಿಸಿ ಅಧ್ಯಕ್ಷರಾದ @HariprasadBK2 ಅವರು ಬಿಡುಗಡೆಗೊಳಿಸಿದರು.
ಕಾರ್ಯಾಧ್ಯಕ್ಷರಾದ ವಸಂತಕುಮಾರ್, ಸಚಿವರಾದ ಕೆ ಜೆ ಜಾರ್ಜ್, ರಾಮಲಿಂಗಾ ರೆಡ್ಡಿ, ಕೆ ಎಚ್ ಮುನಿಯಪ್ಪ, ಈಶ್ವರ್ ಖಂಡ್ರೆ, ಎಐಸಿಸಿ ಕಾರ್ಯದರ್ಶಿ ಗೋಪಿನಾಥ್ ಪಳನಿಯಪ್ಪನ್, ಮಾಜಿ ಸಿಎಂ ವೀರಪ್ಪ ಮೋಯ್ಲಿ, ಮತ್ತಿತರರು ಉಪಸ್ಥಿತರಿದ್ದರು.















