Basavaraj S Bommai (@BSBommai) header
Basavaraj S Bommai (@BSBommai) profile picture

Member of Parliament, Haveri - Gadag Constituency and Former Chief Minister of Karnataka.

Karnataka, India
Joined January 2015
Photo by Basavaraj S Bommai (@BSBommai)Photo by Basavaraj S Bommai (@BSBommai)Photo by Basavaraj S Bommai (@BSBommai)Photo by Basavaraj S Bommai (@BSBommai)Photo by Basavaraj S Bommai (@BSBommai)Photo by Basavaraj S Bommai (@BSBommai)Photo by Basavaraj S Bommai (@BSBommai)Photo by Basavaraj S Bommai (@BSBommai)Photo by Basavaraj S Bommai (@BSBommai)Photo by Basavaraj S Bommai (@BSBommai)
ಕೇಂದ್ರ ಸಚಿವರು ಹಾಗೂ ಆತ್ಮೀಯರಾದ ಶ್ರೀ ಪ್ರಹ್ಲಾದ ಜೋಶಿ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ತಾಯಿ ಶ್ರೀ ರೇಣುಕಾ ಯಲ್ಲಮ್ಮ ದೇವಿಯ ದಿವ್ಯ ಕೃಪಾಶೀರ್ವಾದ ಸದಾ ತಮ್ಮ ಮೇಲಿರಲಿ. ಉತ್ತಮ ಆರೋಗ್ಯ, ದೀರ್ಘಾಯುಷ್ಯ ಹಾಗೂ ಜನಸೇವೆಯಲ್ಲಿ ಇನ್ನಷ್ಟು ಯಶಸ್ಸು ಮತ್ತು ಶಕ್ತಿ ದೊರೆಯಲಿ ಎಂದು ಹಾರೈಸುತ್ತೇನೆ. @JoshiPralhad
1
14
1,276
ದಾಸ ಸಾಹಿತ್ಯದ ಮೂಲಕ ಭಕ್ತಿಯ ಮಹಿಮೆಯನ್ನು ಸಾರಿದ, ತಮ್ಮ ತತ್ವಪದಗಳ ಮೂಲಕ ಸಮಾಜದ ಮನಸ್ಸುಗಳನ್ನು ಪರಿವರ್ತಿಸಿದ ಹಾಗೂ ಮಾನವೀಯತೆಯ ಮೌಲ್ಯಗಳಿಗೆ ವಿಶೇಷ ಮಹತ್ವ ನೀಡಿದ ಮಹಾನ್ ಸಂತ ಶ್ರೀ ಕನಕದಾಸರು ನಮ್ಮ ನಾಡಿನ ಅಮೂಲ್ಯ ಆಧ್ಯಾತ್ಮಿಕ ಸಂಪತ್ತು. ಸಮಾನತೆ, ಸಹೋದರತ್ವ, ಸತ್ಯ ಮತ್ತು ಧರ್ಮದ ಹಾದಿಯಲ್ಲಿ ಸಾಗುವಂತೆ ಸಮಾಜಕ್ಕೆ ಮಾರ್ಗದರ್ಶನ ನೀಡಿದ ಅವರ ಜೀವನ ಸಂದೇಶಗಳು ಎಂದೆಂದಿಗೂ ಪ್ರೇರಣಾದಾಯಕ. ಅವರ ಸಾಹಿತ್ಯದ ಬೆಳಕು ಪ್ರತಿಯೊಬ್ಬರ ಬದುಕಿನಲ್ಲೂ ಜ್ಞಾನದ ಜ್ಯೋತಿಯನ್ನು ಬೆಳಗಿಸಲಿ. ನಾಡಿನ ಸಮಸ್ತ ಜನತೆಗೆ ದಾಸಶ್ರೇಷ್ಠ ಶ್ರೀ ಕನಕದಾಸರ ಜಯಂತಿಯ ಹಾರ್ದಿಕ ಶುಭಾಶಯಗಳು. #KanakaJayanthi
3
883
26/11 ಮುಂಬೈ ಉಗ್ರ ದಾಳಿ ಭಾರತದ ಇತಿಹಾಸದ ಕರಾಳ ಅಧ್ಯಾಯ. ದೇಶದ ಏಕತೆ, ಶಾಂತಿ ಮತ್ತು ಸಾರ್ವಭೌಮತ್ವದ ಮೇಲೆ ನಡೆದ ಈ ಭಯೋತ್ಪಾದಕ ದಾಳಿಯನ್ನು ನಾವೆಂದಿಗೂ ಮರೆಯಲಾರೆವು, ದುಷ್ಕರ್ಮಿಗಳನ್ನು ಎಂದಿಗೂ ಕ್ಷಮಿಸಲಾರೆವು! ಮಾತೃಭೂಮಿಯ ರಕ್ಷಣೆಗಾಗಿ ಪ್ರಾಣವನ್ನೇ ಅರ್ಪಿಸಿದ ವೀರ ಯೋಧರ, ಪೊಲೀಸ್ ಸಿಬ್ಬಂದಿಯ ಹಾಗೂ ಅಮಾಯಕ ನಾಗರಿಕರ ತ್ಯಾಗ ಮತ್ತು ಬಲಿದಾನ ಸದಾ ನಮ್ಮ ಸ್ಮರಣೆಯಲ್ಲಿ ಅಚ್ಚಳಿಯದೆ ಉಳಿಯಲಿದೆ. ಭಯೋತ್ಪಾದನೆ ವಿರುದ್ಧ ಭಾರತದ ಸಂಕಲ್ಪ ಎಂದೆಂದಿಗೂ ಅಚಲ. ದೇಶದ ಭದ್ರತೆ ಮತ್ತು ಏಕತೆಗಾಗಿ ನಾವೆಲ್ಲರೂ ಒಂದಾಗಿ ನಿಲ್ಲೋಣ. ವೀರ ಹುತಾತ್ಮರಿಗೆ ಶತಶತ ನಮನಗಳು! 🇮🇳 #MumbaiTerrorAttack #NeverForget2611
4
10
1,328
ಭಾರತ ಸಂವಿಧಾನ ಗೌರವ ದಿನದ ಹಾರ್ದಿಕ ಶುಭಾಶಯಗಳು! ಸಂವಿಧಾನದ ಮೌಲ್ಯಗಳು ಮತ್ತು ಆಶಯಗಳನ್ನು ಗೌರವಿಸುವುದರ ಜೊತೆಗೆ, ಅವುಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಬಲಿಷ್ಠ, ಸಮೃದ್ಧ ಹಾಗೂ ಅಭಿವೃದ್ಧಿ ಹೊಂದಿದ ಭಾರತ ನಿರ್ಮಾಣಕ್ಕೆ ನಾವೆಲ್ಲರೂ ಸಂಕಲ್ಪ ಮಾಡೋಣ. ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಸೇರಿದಂತೆ ಸಂವಿಧಾನ ರಚನೆಯಲ್ಲಿ ಕೊಡುಗೆ ನೀಡಿದ ಮಹನೀಯರಿಗೆ ಗೌರವಪೂರ್ವಕ ನಮನಗಳು. ಸಂವಿಧಾನದ ಗೌರವವೇ ಪ್ರಜಾಪ್ರಭುತ್ವದ ಗೌರವ! #ConstitutionDay #SamvidhanDiwas
2
6
1,254
ಕೇವಲ ಒಂದು ದಶಕದಲ್ಲಿ ಸುಮಾರು 50 ಕೋಟಿ ಭಾರತೀಯರು ಬಡತನ ರೇಖೆಗಿಂತ ಹೊರಗೆ! ವಿಶ್ವಬ್ಯಾಂಕ್ ದತ್ತಾಂಶವೇ ಈ ಐತಿಹಾಸಿಕ ಬದಲಾವಣೆಗೆ ಸಾಕ್ಷಿ. 👉🏼 ತೀವ್ರ ಬಡತನ 27.1% ರಿಂದ 2.6% ಕ್ಕೆ ಕುಸಿತ 👉🏼 49.6 ಕೋಟಿ ಜನರು ಬಡತನದಿಂದ ಮುಕ್ತ 👉🏼 13.4 ಕೋಟಿ ಹೊಸ ಉದ್ಯೋಗ ಸೃಷ್ಟಿ ಪ್ರಧಾನಿ ಶ್ರೀ @narendramodi ಅವರ ನೇತೃತ್ವದಲ್ಲಿ ಅಂತ್ಯೋದಯ ಮತ್ತು ಗರೀಬ್ ಕಲ್ಯಾಣ ಮಂತ್ರದೊಂದಿಗೆ ನವಭಾರತ ಮುನ್ನಡೆಯುತ್ತಿದೆ. #GaribKalyan #NewIndia #PovertyReduction
1
3
14
1,784
ಭಾರತೀಯ ಸಶಸ್ತ್ರ ಪಡೆಗಳಿಗೆ 'ಪ್ರಳಯ್' ಬಲ! 🚀 DRDO ನಡೆಸಿದ ಅಂತಿಮ ಹಂತದ ಬಳಕೆದಾರರ ಪರೀಕ್ಷೆ ಯಶಸ್ವಿಯಾಗಿದ್ದು, ಸ್ವದೇಶಿ ನಿರ್ಮಿತ ಕ್ವಾಸಿ-ಬ್ಯಾಲಿಸ್ಟಿಕ್ ಕ್ಷಿಪಣಿ 'ಪ್ರಳಯ್' ಶೀಘ್ರದಲ್ಲೇ ಭೂಸೇನೆ ಮತ್ತು ವಾಯುಪಡೆಗೆ ಸೇರ್ಪಡೆಯಾಗಲಿದೆ. ಭಾರತೀಯ ಸೇನೆಯ ಯುದ್ಧ ತಂತ್ರಗಾರಿಕೆಯಲ್ಲಿ 'ಪ್ರಳಯ್' ಕ್ಷಿಪಣಿ ಹೊಸ ಅಧ್ಯಾಯವಾಗಲಿದೆ. #PralayMissile #atmanirbharbharat
3
19
1,547
ವಿಶ್ವ ಮಹಿಳಾ ದೌರ್ಜನ್ಯ ವಿರೋಧಿ ದಿನದಂದು ಮಹಿಳಾ ಸುರಕ್ಷತೆ, ಸಮಾನತೆ ಮತ್ತು ಸಬಲೀಕರಣಕ್ಕಾಗಿ ನಾವೆಲ್ಲರೂ ಕೈಜೋಡಿಸೋಣ.
3
16
1,276
ರಾಜ್ಯಸಭಾ ಸದಸ್ಯರು, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು ಹಾಗೂ ಪದ್ಮವಿಭೂಷಣ ಪುರಸ್ಕೃತರಾದ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಧರ್ಮ, ಸಂಸ್ಕೃತಿ, ಶಿಕ್ಷಣ, ಆರೋಗ್ಯ ಹಾಗೂ ಸಮಾಜಸೇವೆಯ ಮೂಲಕ ನಾಡಿನ ಜನಮಾನಸದಲ್ಲಿ ವಿಶಿಷ್ಟ ಸ್ಥಾನ ಪಡೆದಿರುವ ತಮ್ಮ ಸೇವಾ ಪಯಣವು ಸದಾ ಸ್ಫೂರ್ತಿದಾಯಕ. ಸಮಾಜದ ಒಳಿತಿಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿರುವ ತಮಗೆ ಭಗವಂತನು ಉತ್ತಮ ಆರೋಗ್ಯ, ದೀರ್ಘಾಯುಷ್ಯ ಹಾಗೂ ನಿರಂತರ ಜನಸೇವೆಯ ಶಕ್ತಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ. ಜನಸೇವೆಯೇ ಜನಾರ್ದನ ಸೇವೆ ಎಂಬ ಧ್ಯೇಯದೊಂದಿಗೆ ತಮ್ಮ ಸೇವೆ ಹೀಗೆಯೇ ಮುಂದುವರಿಯಲಿ. #DVeerendraHeggade
1
4
26
1,496
ಕರ್ನಾಟಕದ ಅಭಿವೃದ್ಧಿಗೆ ಪ್ರಧಾನಿ ಶ್ರೀ @narendramodi ಅವರ ನೇತೃತ್ವದ ಕೇಂದ್ರ ಸರ್ಕಾರದ ಮತ್ತೊಂದು ಮಹತ್ವದ ಕೊಡುಗೆ! PM e-Drive ಯೋಜನೆಯಡಿ ದೇಶದಲ್ಲೇ ಅತಿ ಹೆಚ್ಚು 1,243 ಇವಿ ಚಾರ್ಜರ್‌ಗಳು ಕರ್ನಾಟಕಕ್ಕೆ ಮಂಜೂರಾಗಿವೆ. ಕೇಂದ್ರ ಸರ್ಕಾರ ಇವಿ ಕ್ರಾಂತಿಗೆ ಸಾವಿರಾರು ಕೋಟಿ ರೂಪಾಯಿಗಳ ಪ್ರೋತ್ಸಾಹ ನೀಡುತ್ತಾ ಭವಿಷ್ಯದ ಸಾರಿಗೆ ವ್ಯವಸ್ಥೆಗೆ ಭದ್ರ ಬುನಾದಿ ಹಾಕುತ್ತಿದೆ. ಆದರೆ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸಬ್ಸಿಡಿ ಮತ್ತು ತೆರಿಗೆ ವಿನಾಯಿತಿಗಳನ್ನು ಹಿಂಪಡೆಯುವ ಮೂಲಕ ಇವಿ ಕ್ಷೇತ್ರದ ಬೆಳವಣಿಗೆಗೆ ಹಿನ್ನಡೆ ಉಂಟುಮಾಡುತ್ತಿದೆ. #PMeDrive #EVRevolution
2
4
1,375
ಸೇವೆ ಮತ್ತು ಸಮರ್ಪಣೆಯೇ ನಿಜವಾದ ಧರ್ಮ, ಮಾನವೀಯತೆಯೇ ಶ್ರೇಷ್ಠ ಮೌಲ್ಯ ಎಂಬ ಸಂದೇಶವನ್ನು ಜಗತ್ತಿಗೆ ಸಾರಿದ ಮಹಾನ್ ಸಂತ ಶ್ರೀ ಗುರು ನಾನಕ್ ದೇವ್ ಜೀ ಅವರ ಜಯಂತಿಯಂದು ಗೌರವಪೂರ್ವಕ ನಮನಗಳು. ಅವರ ತತ್ವಾದರ್ಶಗಳು ಪ್ರತಿಯೊಬ್ಬರಲ್ಲೂ ಪರಸ್ಪರ ಗೌರವ, ಪ್ರೀತಿ, ಸಹಬಾಳ್ವೆ ಹಾಗೂ ಸೇವಾ ಮನೋಭಾವವನ್ನು ಬೆಳೆಸಲಿ. ಸರ್ವರಿಗೂ ಒಳಿತಾಗಲಿ, ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದತೆ ನೆಲೆಸಲಿ. ನಾಡಿನ ಸಮಸ್ತ ಜನತೆಗೆ ಗುರು ನಾನಕ್ ಜಯಂತಿಯ ಹಾರ್ದಿಕ ಶುಭಾಶಯಗಳು. #GuruNanakJayanti #GuruNanakDevJi
🤖 Made with AI
1
19
1,303
A spiritual and divine evening as Hon’ble Prime Minister Shri @narendramodi Ji attended the Shabad Kirtan programme on the sacred occasion of Parkash Purab of Sri Guru Nanak Dev Ji.
1
11
1,220
ಕನ್ನಡ ಚಿತ್ರರಂಗದ ಧ್ರುವತಾರೆ, ತಮ್ಮ ಅದ್ಭುತ ಅಭಿನಯ, ವಿಶಿಷ್ಟ ವ್ಯಕ್ತಿತ್ವ ಹಾಗೂ ದಿಟ್ಟ ನಿಲುವುಗಳಿಂದ ಕೋಟ್ಯಂತರ ಅಭಿಮಾನಿಗಳ ಮನಗೆದ್ದ ಅಭಿಮಾನಿಗಳ ಪ್ರೀತಿಯ 'ರೆಬಲ್ ಸ್ಟಾರ್' ಶ್ರೀ ಅಂಬರೀಶ್ ಅವರ ಪುಣ್ಯಸ್ಮರಣೆಯಂದು ಹೃದಯಪೂರ್ವಕ ಗೌರವ ನಮನಗಳು. ತಮ್ಮ ಕಲಾಸೇವೆ, ಸ್ನೇಹಪರ ಗುಣ, ಸರಳ ಜೀವನಶೈಲಿ ಹಾಗೂ ಜನರೊಂದಿಗಿನ ಆತ್ಮೀಯ ಒಡನಾಟದ ಮೂಲಕ ಕನ್ನಡಿಗರ ಹೃದಯದಲ್ಲಿ ಶಾಶ್ವತ ಸ್ಥಾನ ಪಡೆದ ಮಹಾನ್ ವ್ಯಕ್ತಿತ್ವ ಅವರದು. ಅವರು ನೀಡಿದ ಕೊಡುಗೆಗಳು ಕನ್ನಡ ನಾಡು ಮತ್ತು ಚಿತ್ರರಂಗದ ಇತಿಹಾಸದಲ್ಲಿ ಸದಾ ಚಿರಸ್ಮರಣೀಯ. #RebelStarAmbarish
1
13
1,311
ಅನ್ನದಾತರ ಬೆವರಿನ ಹನಿಗಳಿಗೆ ಸಿಕ್ಕ ಐತಿಹಾಸಿಕ ಯಶಸ್ಸು! 🌾 ಪ್ರಧಾನಿ ಶ್ರೀ @narendramodi ಅವರ ರೈತಪರ ದೂರದೃಷ್ಟಿ ಮತ್ತು ಅನ್ನದಾತರ ಅವಿರತ ಪರಿಶ್ರಮದಿಂದ ಭಾರತವು 2024-25ರಲ್ಲಿ 35.7 ಕೋಟಿ ಟನ್‌ಗಳಿಗೂ ಅಧಿಕ ಆಹಾರಧಾನ್ಯ ಉತ್ಪಾದಿಸಿ ಹೊಸ ದಾಖಲೆ ನಿರ್ಮಿಸಿದೆ. ರೈತರು ಬಲಿಷ್ಠರಾದರೆ ದೇಶ ಬಲಿಷ್ಠವಾಗುತ್ತದೆ ಎಂಬ ಸಂಕಲ್ಪದೊಂದಿಗೆ ಭಾರತ ಇಂದು ಜಾಗತಿಕ ಕೃಷಿ ಶಕ್ತಿಯಾಗಿ ಮುನ್ನಡೆಯುತ್ತಿದೆ. 🇮🇳 #ModiWithFarmers #ViksitBharat
8
1,361
Basavaraj S Bommai retweeted
A significant milestone in our journey towards preventive healthcare. Every dose is a step towards protecting girls from cervical cancer and ensuring a healthier future for them. I commend all the stakeholders whose efforts have ensured this remarkable feat.
𝗜𝗻𝗱𝗶𝗮 𝗖𝗿𝗼𝘀𝘀𝗲𝘀 𝟭 𝗖𝗿𝗼𝗿𝗲 𝗛𝗣𝗩 𝗩𝗮𝗰𝗰𝗶𝗻𝗲 𝗗𝗼𝘀𝗲𝘀, 𝗖𝗼𝘃𝗲𝗿𝘀 𝗡𝗲𝗮𝗿𝗹𝘆 𝟴𝟳% 𝗼𝗳 𝗔𝗻𝗻𝘂𝗮𝗹 𝗖𝗼𝗵𝗼𝗿𝘁 𝗼𝗳 𝗘𝗹𝗶𝗴𝗶𝗯𝗹𝗲 𝗚𝗶𝗿𝗹𝘀! In less than nine months since its launch by Hon’ble PM Shri @narendramodi Ji, the National HPV Vaccination Campaign has achieved this historic milestone in protecting India’s daughters against cervical cancer. Congratulations to Gujarat, Uttar Pradesh, Andhra Pradesh, Mizoram, Madhya Pradesh and Bihar for achieving 100% coverage, with 12 States surpassing 80%. This remarkable progress reflects the collective commitment of States/UTs, healthcare professionals, frontline health workers and parents across the country. With free, safe and effective single-dose HPV vaccination available for eligible 14-year-old girls through Government health facilities and U-WIN, India is moving closer to a future free from cervical cancer.
416
1,694
54
7,129
452,953
Warm birthday greetings to the Hon’ble Speaker of the Lok Sabha, Shri @ombirlakota Ji! May you be blessed with good health, happiness, and a long, fulfilling life. Wishing you continued strength and success in your service to the nation. @loksabhaspeaker @LokSabhaSectt
1
23
1,684
ಕೇವಲ 12-13 ವರ್ಷಗಳಲ್ಲಿ 50 ಕೋಟಿ ಭಾರತೀಯರು ಬಡತನವನ್ನು ಸೋಲಿಸಿದ್ದಾರೆ ಎಂಬ ವಿಶ್ವಬ್ಯಾಂಕ್‌ನ ಇತ್ತೀಚಿನ ವರದಿ ಪ್ರತಿಯೊಬ್ಬರಿಗೂ ಹೆಮ್ಮೆಯ ವಿಷಯ! 70ರ ದಶಕದಲ್ಲಿ ದೇಶದ ಜನಸಂಖ್ಯೆ 50 ಕೋಟಿ ಇದ್ದಾಗ ಬಡತನ ತೊಲಗಿಸಿ ಎಂಬ ಘೋಷಣೆ ನೀಡಲಾಗಿತ್ತು. ಆಗಲೂ ಇದನ್ನು ಸಾಧಿಸಬಹುದಿತ್ತು, ಆದರೆ ಅಂದಿನ ನೀತಿ ಮತ್ತು ನಿಯತ್ತಿನ ಕೊರತೆಯಿಂದ ಅದು ಸಾಧ್ಯವಾಗಲಿಲ್ಲ. - ಪ್ರಧಾನಿ ಶ್ರೀ @narendramodi #ViksitBharat
3
27
3,646
ಪ್ರಧಾನಮಂತ್ರಿ ಶ್ರೀ @narendramodi ಜಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ ದೇಶದ ವಾಯುಯಾನ ಕ್ಷೇತ್ರದಲ್ಲಿ ಮಹತ್ವದ ಪ್ರಗತಿ ಸಾಧಿಸಲಾಗಿದೆ. 2014ರಲ್ಲಿ ದೇಶದಲ್ಲಿದ್ದ 74 ವಿಮಾನ ನಿಲ್ದಾಣಗಳ ಸಂಖ್ಯೆ 2026ರಲ್ಲಿ 166ಕ್ಕೆ ಏರಿಕೆಯಾಗಿದ್ದು, ವಿಮಾನ ನಿಲ್ದಾಣಗಳ ಸಂಖ್ಯೆ ಎರಡು ಪಟ್ಟು ಹೆಚ್ಚಾಗಿದೆ. ಉಡಾನ್ (UDAN) ಯೋಜನೆಯ ಮೂಲಕ ಸಾಮಾನ್ಯ ಜನರಿಗೂ ವಿಮಾನ ಪ್ರಯಾಣದ ಕನಸು ನನಸಾಗುತ್ತಿದೆ. ಸಣ್ಣ ನಗರಗಳನ್ನು ಪ್ರಮುಖ ಆರ್ಥಿಕ ಮತ್ತು ಪ್ರವಾಸಿ ಕೇಂದ್ರಗಳೊಂದಿಗೆ ಸಂಪರ್ಕಿಸುವ ಮೂಲಕ ಸಮಯದ ಉಳಿತಾಯದ ಜೊತೆಗೆ ವ್ಯಾಪಾರ, ಪ್ರವಾಸೋದ್ಯಮ ಮತ್ತು ಉದ್ಯೋಗಾವಕಾಶಗಳಿಗೂ ಹೊಸ ದಾರಿಗಳು ತೆರೆದಿವೆ. ಸಂಪರ್ಕದಿಂದ ಸಮೃದ್ಧಿಯತ್ತ, ಅಭಿವೃದ್ಧಿಯಿಂದ ವಿಕಸಿತ ಭಾರತದತ್ತ.🛫 #UDAN #ViksitBharat
3
7
1,892
ಬಿಜೆಪಿ ಒಬಿಸಿ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿರುವ ಮಾಜಿ ಸಚಿವರು ಹಾಗೂ ಆತ್ಮೀಯರಾದ ಶ್ರೀ ಪ್ರಮೋದ್ ಮಧ್ವರಾಜ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ತಮ್ಮ ಅಪಾರ ಸಂಘಟನಾತ್ಮಕ ಅನುಭವ, ಬದ್ಧತೆ ಹಾಗೂ ಕ್ರಿಯಾಶೀಲತೆಯ ಮೂಲಕ ಹಿಂದುಳಿದ ವರ್ಗಗಳ ಸಬಲೀಕರಣಕ್ಕೆ ಮತ್ತು ಪಕ್ಷದ ಸಂಘಟನೆಯನ್ನು ಇನ್ನಷ್ಟು ಬಲಪಡಿಸಲು ಮಹತ್ವದ ಕೊಡುಗೆ ನೀಡಲಿದ್ದೀರಿ ಎಂಬ ವಿಶ್ವಾಸವಿದೆ. ತಮಗೆ ಲಭಿಸಿರುವ ಈ ಹೊಸ ಜವಾಬ್ದಾರಿಯಲ್ಲಿ ಯಶಸ್ಸು ದೊರೆಯಲಿ ಹಾಗೂ ತಮ್ಮ ಸೇವೆ ಪಕ್ಷ ಮತ್ತು ಸಮಾಜಕ್ಕೆ ಮತ್ತಷ್ಟು ಶಕ್ತಿ ತುಂಬಲಿ ಎಂದು ಹಾರೈಸುತ್ತೇನೆ. @BJP4Karnataka @PMadhwaraj @BJP4OBCMorcha @BJP4India
1
1
49
16,228
ಅನ್ನದಾತರಿಗೆ ಪ್ರಧಾನಿ ಶ್ರೀ @narendramodi ಅವರ ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್! ಜಾಗತಿಕ ಯುದ್ಧದ ನಡುವೆಯೂ ರಸಗೊಬ್ಬರ ಪೂರೈಕೆಯಲ್ಲಿ ರೈತರಿಗೆ ತೊಂದರೆಯಾಗದಂತೆ ಕೇಂದ್ರ ಸರ್ಕಾರ ಐತಿಹಾಸಿಕ ಹೆಜ್ಜೆ ಇಟ್ಟಿದೆ. ರೈತರ ಬೆನ್ನಿಗೆ ಮೋದಿ ಸರ್ಕಾರ ಸದಾ ನಿಲ್ಲುತ್ತದೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ರಸಗೊಬ್ಬರ ವಿತರಣೆಯಲ್ಲಿ ಸಂಪೂರ್ಣ ಪಾರದರ್ಶಕತೆ ತರಲು ಕೇಂದ್ರ ಸರ್ಕಾರ ಹೊಸ ಆ್ಯಪ್ ಬಿಡುಗಡೆ ಮಾಡಿದೆ. ಎಂತಹದ್ದೇ ಸಂಕಷ್ಟ ಬಂದರೂ ರೈತರ ಹಿತಕಾಯಲು ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಸರ್ಕಾರ ಸದಾ ಸಿದ್ಧವಿದೆ ಎಂಬುದಕ್ಕೆ ಇದೇ ಸಾಕ್ಷಿ. #FarmersFirst #FertilizerApp
2
8
1,293
ನಾಡಿನ ಸಮಸ್ತ ಜನತೆಗೆ ತುಳಸಿ ಹಬ್ಬದ ಹಾರ್ದಿಕ ಶುಭಾಶಯಗಳು. ಸಂಸ್ಕೃತಿಯ ಸಂರಕ್ಷಣೆ, ಸಂಪ್ರದಾಯಗಳ ಗೌರವ ಮತ್ತು ಆಧ್ಯಾತ್ಮಿಕ ಮೌಲ್ಯಗಳ ಪಾಲನೆಯೇ ನಮ್ಮ ಸಮಾಜದ ನಿಜವಾದ ಶಕ್ತಿ. ತುಳಸಿ ಮಾತೆಯ ದಿವ್ಯ ಆಶೀರ್ವಾದದಿಂದ ಪ್ರತಿಯೊಬ್ಬರ ಬದುಕಿನಲ್ಲಿ ಆರೋಗ್ಯ, ನೆಮ್ಮದಿ, ಸುಖ-ಸಮೃದ್ಧಿ ನೆಲೆಸಲಿ. #tulasipooja
1
1
32
1,473