ಇಂದು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕರ್ನಾಟಕ ಬಿಜೆಪಿ ರಾಜ್ಯ ಉಸ್ತುವಾರಿಗಳಾದ
ಶ್ರೀ @HarishD_BJP ಅವರನ್ನು ರಾಜ್ಯಾಧ್ಯಕ್ಷರಾದ ಶ್ರೀ @BYVijayendra ಅವರೊಂದಿಗೆ ಆತ್ಮೀಯವಾಗಿ ಸ್ವಾಗತಿಸಲಾಯಿತು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರಾದ
ಶ್ರೀ @NswamyChalavadi ಅವರು,
ಮಾಜಿ ಸಚಿವರಾದ ಶ್ರೀ @MurugeshNirani ಅವರು, ಶಾಸಕರಾದ ಶ್ರೀ @dheerajmuniraj ಅವರು, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ನಂದೀಶ್ ರೆಡ್ಡಿ ಅವರು ಸೇರಿದಂತೆ ಪಕ್ಷದ ಪ್ರಮುಖರು ಹಾಗೂ ಮುಖಂಡರು ಉಪಸ್ಥಿತರಿದ್ದರು.
#BJPkarnataka #harishdwivedi #ckramamurthy
ನಾಡಿನ ಸಮಸ್ತ ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು❤️💛
ಕನ್ನಡ ನಮ್ಮ ಹೆಮ್ಮೆ, ಕನ್ನಡ ನಮ್ಮ ಅಸ್ಮಿತೆ, ಕನ್ನಡವೇ ನಮ್ಮ ಉಸಿರು. ಕನ್ನಡ ನಾಡಿನ ಇತಿಹಾಸ, ಸಂಸ್ಕೃತಿ, ಪರಂಪರೆ ಹಾಗೂ ಭಾಷೆಯ ಶ್ರೀಮಂತಿಕೆಯನ್ನು ಉಳಿಸಿ ಬೆಳೆಸುವ ಸಂಕಲ್ಪ ನಮ್ಮೆಲ್ಲರದ್ದಾಗಲಿ.
ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ🚩
ಇಂದು ತಿಲಕ್ ನಗರದಲ್ಲಿ ನಡೆಯುತ್ತಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಸ್ಥಳದಲ್ಲಿಯೇ ಪರಿಶೀಲಿಸುವುದರೊಂದಿಗೆ ಪಾದಚಾರಿಗಳ ಸುರಕ್ಷತೆ ಹಾಗೂ ಸಾರ್ವಜನಿಕರ ಅನುಕೂಲವನ್ನು ಗಮನದಲ್ಲಿಟ್ಟುಕೊಂಡು, ಫುಟ್‌ಪಾತ್‌ಗಳನ್ನು ಒತ್ತುವರಿ ಮುಕ್ತಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಅಗತ್ಯ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ತಿಳಿಸಿದೆನು.
ರಾಷ್ಟ್ರೀಯ ಏಕತಾ ದಿನದ ಹಾರ್ದಿಕ ಶುಭಾಶಯಗಳು🇮🇳
ಭಾರತದ ಏಕತೆಯ ಶಿಲ್ಪಿ, ಉಕ್ಕಿನ ಮನುಷ್ಯ, ಭಾರತ ರತ್ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನದ ಸ್ಮರಣಾರ್ಥ ಗೌರವಪೂರ್ವಕ ನಮನಗಳು.
ಭಾರತದ ಸಂಸ್ಥಾನಗಳನ್ನು ಒಗ್ಗೂಡಿಸಿ, ಅಖಂಡ ಭಾರತದ ನಿರ್ಮಾಣಕ್ಕೆ ಮಹತ್ವದ ಕೊಡುಗೆ ನೀಡಿದ ಮಹಾನ್ ನಾಯಕನ ಆದರ್ಶಗಳು ಸದಾ ನಮಗೆ ಪ್ರೇರಣೆಯಾಗಲಿ.
ನನ್ನ ಮಾರ್ಗದರ್ಶಕರೂ, ಮಾಜಿ ಶಾಸಕರೂ ಆದ ದಿವಂಗತ ಶ್ರೀ ಬಿ.ಎನ್. ವಿಜಯಕುಮಾರ್ ಅವರ ಜನ್ಮದಿನದಂದು ಗೌರವಪೂರ್ವಕ ನಮನಗಳು. 🙏
ಅವರ ಆದರ್ಶಗಳು, ಮಾರ್ಗದರ್ಶನ ಹಾಗೂ ಜನಸೇವೆಯ ಸ್ಮರಣೆಗಳು ಸದಾ ಪ್ರೇರಣೆಯಾಗಿರಲಿ.
ಬೆಂಗಳೂರು ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯಲ್ಲಿ ವಿಜಯ ಸಾಧಿಸಿದ ಎನ್‌ಡಿಎ ಅಭ್ಯರ್ಥಿ ಶ್ರೀ ಎ.ಪಿ. ರಂಗನಾಥ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು
ಈ ವಿಜಯವು ಕಾರ್ಯಕರ್ತರ ಅವಿರತ ಪರಿಶ್ರಮ, ಮತದಾರರ ವಿಶ್ವಾಸ ಹಾಗೂ ಸಂಘಟನೆಯ ಒಗ್ಗಟ್ಟಿನ ಶಕ್ತಿಗೆ ಸಾಕ್ಷಿಯಾಗಿದೆ.
ಶಿಕ್ಷಕರ ಆಶಯಗಳಿಗೆ ಸ್ಪಂದಿಸುತ್ತಾ, ಅವರ ಹಿತಾಸಕ್ತಿ ಮತ್ತು
ಶೈಕ್ಷಣಿಕ ಕ್ಷೇತ್ರದ ಅಭಿವೃದ್ಧಿಗೆ ತಮ್ಮ ಸೇವೆಯನ್ನು ಸಮರ್ಪಿಸಲಿ ಎಂದು ಹಾರೈಸುತ್ತೇನೆ.
ಈ ಗೆಲುವಿಗೆ ಶ್ರಮಿಸಿದ ಸಮಸ್ತ ಎನ್‌ಡಿಎ ಮುಖಂಡರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರಿಗೆ ಅನಂತ ಅನಂತ ಧನ್ಯವಾದಗಳು.
ಮತ ಚಲಾಯಿಸಿದ ಎಲ್ಲ ಶಿಕ್ಷಕರಿಗೆ ಹೃದಯಪೂರ್ವಕ ಧನ್ಯವಾದಗಳು.
#NDA
ಇಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ, ನಮ್ಮ ನೆಚ್ಚಿನ ಪ್ರಧಾನಮಂತ್ರಿ ಶ್ರೀ @narendramodi ಜೀ ಅವರ ತಂದೆಯವರ ಕುರಿತು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಖರ್ಗೆ ಅವರು ನೀಡಿದ ಅವಹೇಳನಕಾರಿ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿ, ಮಾನ್ಯ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಶ್ರೀ @RAshokaBJP ಅವರೊಂದಿಗೆ
ಪ್ರತಿಭಟನೆ ಮಾಡಲಾಯಿತು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರಾದ ಶ್ರೀ @NswamyChalavadi ಅವರು, ಶಾಸಕರಾದ ಶ್ರೀ @drashwathcn ಅವರು, ಶ್ರೀ @ravisubramanya_mla ಅವರು, ವಿಧಾನ ಪರಿಷತ್ ಸದಸ್ಯರಾದ ಶ್ರೀ ರವಿಕುಮಾರ್ ಅವರು ಹಾಗೂ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.
#BJP #NarendraModi
ಸಮಸ್ತ ಜನತೆಗೆ ಮಹರ್ಷಿ ವಾಲ್ಮೀಕಿ ಜಯಂತಿಯ ಭಕ್ತಿಪೂರ್ವಕ ಹಾರ್ದಿಕ ಶುಭಾಶಯಗಳು
ಮಹರ್ಷಿ ವಾಲ್ಮೀಕಿಯವರ ಜ್ಞಾನ, ಆದರ್ಶಗಳು ಹಾಗೂ ರಾಮಾಯಣದ ಮಹೋನ್ನತ ಸಂದೇಶಗಳು ನಮ್ಮೆಲ್ಲರ ಬದುಕಿಗೆ ಸದಾ ಸ್ಫೂರ್ತಿಯಾಗಲಿ.
ಇಂದು ರಾಷ್ಟೀಯ ಸ್ವಯಂ ಸೇವಕ ಸಂಘ ಜಯನಗರ ವಸತಿಯಿಂದ ಜಯನಗರ 7ನೇ ಬ್ಲಾಕ್ ನಲ್ಲಿ ನೆಡೆದ ವಿಜಯದಶಮಿ ಪಥಸಂಚಲನದಲ್ಲಿ ಪಾಲ್ಗೊಂಡೆನು.🇮🇳🚩
ಈ ಸಂದರ್ಭದಲ್ಲಿ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಶ್ರೀ @RAshokaBJP ರವರು, ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರಾದ ಶ್ರೀ @NswamyChalavadi ರವರು,
ಮಂಡಲ ಅಧ್ಯಕ್ಷರಾದ ಶ್ರೀ ಲಕ್ಷ್ಮೀಕಾಂತ್ ರವರು ಸೇರಿದಂತೆ ಪ್ರಮುಖರು ಹಾಗೂ ಸ್ವಯಂಸೇವಕರು ಉಪಸ್ಥಿತರಿದ್ದರು.
ರಾಷ್ಟ್ರಭಕ್ತಿ, ಶಿಸ್ತು ಮತ್ತು ಸಂಘಟನೆಯ ಸಂಕೇತ — ರಾಷ್ಟ್ರೀಯ ಸ್ವಯಂಸೇವಕ ಸಂಘ.
#RSS4Nation #RSS #Vijayadashami #rashtriyaswayamsevaksangh #ckramamurthy
ಆತ್ಮೀಯರು ಹಾಗೂ ಕೇಂದ್ರ ಸಚಿವರಾದ ಸನ್ಮಾನ್ಯ ಕು. @ShobhaBJP ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು
ದೇವರು ತಮಗೆ ಉತ್ತಮ ಆರೋಗ್ಯ, ದೀರ್ಘಾಯುಷ್ಯ ಹಾಗೂ ಜನಸೇವೆಯಲ್ಲಿ ಇನ್ನಷ್ಟು ಯಶಸ್ಸು ಮತ್ತು ಶಕ್ತಿಯನ್ನು ಕರುಣಿಸಲಿ.
#ShobhaKarandlaje #HappyBirthday #ಜನಸೇವೆ #ckramamurthy
ಚಿನ್ನದ ಅಂಬಾರಿಯಲ್ಲಿ ವಿರಾಜಮಾನಳಾದ ನಾಡದೇವತೆ ತಾಯಿ ಶ್ರೀ ಚಾಮುಂಡೇಶ್ವರಿಯ ದಿವ್ಯ ದರ್ಶನವು ಮನಸ್ಸಿಗೆ ಭಕ್ತಿ, ಭಾವ ಮತ್ತು ಆಧ್ಯಾತ್ಮಿಕ ಆನಂದವನ್ನು ತುಂಬುತ್ತದೆ. 🙏
ತಾಯಿಯ ಈ ದಿವ್ಯ ಸ್ವರೂಪವನ್ನು ಕಣ್ತುಂಬಿಕೊಳ್ಳುವುದೇ ಭಕ್ತರ ಪಾಲಿನ ಪುಣ್ಯ ಕ್ಷಣ. ಜಗನ್ಮಾತೆ ತಾಯಿ ಶ್ರೀ ಚಾಮುಂಡೇಶ್ವರಿಯು ನಾಡಿನ ಸಮಸ್ತ ಜನತೆಗೆ ಸುಖ, ಶಾಂತಿ,
ಸಮೃದ್ಧಿ, ಆರೋಗ್ಯ ಹಾಗೂ ಸಕಲ ಮಂಗಳವನ್ನು ಕರುಣಿಸಿ, ಎಲ್ಲರ ಬದುಕಿನಲ್ಲಿ ನೆಮ್ಮದಿ ಮತ್ತು ಸಂತೋಷವನ್ನು ತುಂಬಲಿ ಎಂದು ಭಕ್ತಿಪೂರ್ವಕವಾಗಿ ಪ್ರಾರ್ಥಿಸುತ್ತೇನೆ. 🙏
ಜೈ ತಾಯಿ ಚಾಮುಂಡೇಶ್ವರಿ🚩
#ಶ್ರೀಚಾಮುಂಡೇಶ್ವರಿ #ನಾಡದೇವತೆ #ಮೈಸೂರುದಸರಾ #ದೇವಿದರ್ಶನ
#ckramamurthy
🏆ಜಯನಗರದ ಹೆಮ್ಮೆಯ ಕುವರಿ ಸೌಮ್ಯ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು🇮🇳
ಜಯನಗರದ ಪ್ರತಿಭಾವಂತ ಕ್ರೀಡಾಪಟು ಸೌಮ್ಯ ಅವರು, ತಮ್ಮ ದೃಷ್ಟಿದೋಷವನ್ನು ಮೆಟ್ಟಿ ನಿಂತು ಕ್ರೀಡಾ ಕ್ಷೇತ್ರದಲ್ಲಿ ಸಾಧನೆಯ ಹೆಜ್ಜೆ ಗುರುತು ಮೂಡಿಸುತ್ತಿರುವುದು ಅತ್ಯಂತ ಹೆಮ್ಮೆಯ ವಿಷಯ.
ಜಪಾನ್‌ನ ಐಚಿ–ನಗೋಯಾದಲ್ಲಿ ನಡೆಯುತ್ತಿರುವ ಏಷ್ಯನ್ ಪ್ಯಾರಾ ಗೇಮ್ಸ್ 2026
ಕ್ರೀಡಾಕೂಟದ ಮಹಿಳೆಯರ 1500 ಮೀಟರ್ T12/13 ವಿಭಾಗದಲ್ಲಿ *ಚಿನ್ನದ ಪದಕ* ಗೆದ್ದು ದೇಶದ ಕೀರ್ತಿಯನ್ನು ಹೆಚ್ಚಿಸಿರುವ ಸೌಮ್ಯ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು🥇🇮🇳
ಅವರ ಈ ಸಾಧನೆ ಅಸಂಖ್ಯಾತ ಯುವ ಪ್ರತಿಭೆಗಳಿಗೆ ಸ್ಫೂರ್ತಿಯಾಗಲಿ. ಅವರ ಕ್ರೀಡಾ ಪಯಣ ಇನ್ನಷ್ಟು ಯಶಸ್ಸಿನ ಶಿಖರಗಳನ್ನು ತಲುಪಲಿ ಎಂದು ಹಾರೈಸುತ್ತೇನೆ.
ಸೌಮ್ಯ ಅವರ ಸಾಧನೆ ನಮ್ಮ ಜಯನಗರದ ಹೆಮ್ಮೆ, ನಮ್ಮ ನಾಡಿನ ಹೆಮ್ಮೆ, ನಮ್ಮ ದೇಶದ ಹೆಮ್ಮೆ💐
#Soumya #JayanagarPride #AsianParaGames2026 #indianpride #ckramamurthy




































