ಜಿಲ್ಲಾಧಿಕಾರಿಗಳು ರಾಯಚೂರುರವರ ಆದೇಶದಂತೆ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನಲ್ಲಿ ಬಾ/ ಕಿಕಾರ ತಪಾಸಣೆ/ಹಠಾತ್ ದಾಳಿ ಹಮ್ಮಿಕೊಳ್ಳಲಾಯಿತು. ಮಕ್ಕಳನ್ನು ಶಾಲೆ ಬಿಡಿಸಿ ಕೃಷಿ ಕೆಲಸಕ್ಕಾಗಿ ವಾಹನಗಳಲ್ಲಿ ಕರೆದುಕೊಂಡು ಹೋಗಿತ್ತಿದ್ದ 03 ಸರಕು ಸಾಗಾಣಿಕೆ ವಾಹನಗಳನ್ನುತಡೆದು ಒಟ್ಟು 11 ಮಕ್ಕಳನ್ನು ರಕ್ಷಣೆ ಮಾಡಲಾಯಿತು.
ಜಿಲ್ಲಾಧಿಕಾರಿಗಳು ರಾಯಚೂರುರವರ ಆದೇಶದಂತೆ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನಲ್ಲಿ ಬಾ/ ಕಿಕಾರ ತಪಾಸಣೆ/ಹಠಾತ್ ದಾಳಿ ಹಮ್ಮಿಕೊಳ್ಳಲಾಯಿತು. ಮಕ್ಕಳನ್ನು ಶಾಲೆ ಬಿಡಿಸಿ ಕೃಷಿ ಕೆಲಸಕ್ಕಾಗಿ ವಾಹನಗಳಲ್ಲಿ ಕರೆದುಕೊಂಡು ಹೋಗಿತ್ತಿದ್ದ 03 ಸರಕು ಸಾಗಾಣಿಕೆ ವಾಹನಗಳನ್ನುತಡೆದು ಒಟ್ಟು 11 ಮಕ್ಕಳನ್ನು ರಕ್ಷಣೆ ಮಾಡಲಾಯಿತು.
ಅಜ್ಜಂಪುರ ತಾಲ್ಲೂಕು ವ್ಯಾಪ್ತಿಯಲ್ಲಿ ಈರುಳ್ಳಿ ಕಟಾವು ಮಾಡುವ ಕೆಲಸಕ್ಕೆ ಮಕ್ಕಳನ್ನು ಬಳಸಿಕೊಳ್ಳುವ ಕುರಿತ ದೂರಿನ ಅನ್ವಯ ತತಂಡವು ಈರುಳ್ಳಿ ಹೊಲಗಳಿಗೆ ಭೇಟಿ ನೀಡಿ ಕಾರ್ಮಿಕರಿಗೆ ಮತ್ತು ಜಮೀನು ಮಾಲೀಕರಿಗೆ ಅರಿವು ಮೂಡಿಸುವ ಕಾರ್ಯ ಮಾಡಲಾಯಿತು.
ಅಜ್ಜಂಪುರ ತಾಲ್ಲೂಕು ತಹಶೀಲ್ದಾರ್ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಈರುಳ್ಳಿ ಕಟಾವು ಮಾಡುವ ಕೆಲಸದಲ್ಲಿ ಬಾಲ ಮತ್ತು ಕಿಶೋರ ಕಾರ್ಮಿಕರ ಬಳಕೆ ಕುರಿತು ಸಾರ್ವಜನಿಕರಿಂದ ಬಂದಂತಹ ದೂರಿನ ಅನ್ವಯ ತಾಲೂಕು ಮಟ್ಟದ ಕಾರ್ಯಪಡೆ ವಿವಿಧ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಜಮೀನು ಮಾಲೀಕರಿಗೆ ಹಾಗೂ ಕಾರ್ಮಿಕರಿಗೆ ಅರಿವು ಮೂಡಿಸಲಾಯಿತು.
ಪಾಣೆ ಮಂಗಳೂರು ಹೋಬಳಿ ಏರಿಯಾ ದಲ್ಲಿರುವ ಫ್ಯಾಕ್ಟ್ರಿ, ಅಂಗಡಿ ಸಂಸ್ಥೆ ಗಳನ್ನು ಬಾಲಕಾರ್ಮಿಕ ಹಾಗೂ ಕಿಶೋರಾವಸ್ಥೆಯ ಕಾರ್ಮಿಕ ( ನಿಷೇಧ ಮತ್ತು ನಿಯಂತ್ರಣ) ಕಾಯ್ದೆಯಡಿ ಅನಿರೀಕ್ಷಿತ ತಪಾಸಣೆಯನ್ನು ನಡೆಸಲಾಯಿತು .ತಪಾಸಣೆ ಸಮಯದಲ್ಲಿ ಕಿಶೋರಾವಸ್ಥೆಯ ಕಾರ್ಮಿಕನನ್ನು ಕೆಲಸದಿಂದ ಬಿಡುಗಡೆಗೊಳಿಸಿ CWC ಮುಂದೆ ಪುನರವಸತಿ ಗಾಗಿ ಹಾಜರುಪಡಿಸಲಾಯಿತು.
ಯಲ್ಲಾಪುರ ತಾಲೂಕಿನಲ್ಲಿ ವಿವಿಧ ಅಂಗಡಿ ವಾಣಿಜ್ಯ ಸಂಸ್ಥೆಗಳ ತಪಾಸಣೆ ನಡೆಸಿ ಬಾ/ಕಿಕಾರನ್ನು ಕೆಲಸಕ್ಕೆ ನೇಮಿಸಿ ಕೊಳ್ಳದಂತೆ ಕರಪತ್ರ ಗಳನ್ನು ನೀಡಿ ಜಾಗ್ರತಿ ಮೂಡಿಸಲಾಯಿತು.
ಬ್ಯಾಡಗಿ ತಾಲ್ಲೂಕಿನಲ್ಲಿ ನಗರದ ವಿವಿಧ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳಿಗೆ, ಹೋಟೆಲ್ಗಳಿಗೆ ಹಾಗೂ ಭೇಟಿ ನೀಡಿತಪಾಸಣೆ ಕೈಗೊಳ್ಳಲಾಯಿತು. 18 ವರ್ಷದೊಳಗಿನ ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ ಮಕ್ಕಳು ಕೆಲಸ ಮಾಡುತ್ತಿರುವುದು ಕಂಡು ಬಂದಿರುವುದಿಲ್ಲ. ಮಕ್ಕಳ್ಳನ್ನು ಕೆಲಸಕ್ಕೆ ನೇಮಿಸಿಕೊಳ್ಳದಂತೆ ಮಾಲೀಕರಿಗೆ ಜಾಗೃತಿ ಮೂಡಿಸಲಾಯಿತು.
ಧಾರವಾಡ ಶಹರ ವ್ಯಾಪ್ತಿಯಲ್ಲಿ ವಿವಿಧ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳಿಗೆ, ಹೋಟೆಲ್, ಗ್ಯಾರೇಜ್ ಗಳಿಗೆ, ಕಟ್ಟಡ ನಿರ್ಮಾಣ ಸ್ಥಳಗಳಿಗೆ ಭೇಟಿ ನೀಡಿ 18 ವರ್ಷದೊಳಗಿನ ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ ಮಕ್ಕಳನ್ನು ಕೆಲಸಕ್ಕೆ ನೇಮಿಸಿಕೊಳ್ಳದಂತೆ ಜಾಗೃತಿ ಮೂಡಿಸಿ ಕರಪತ್ರ ಹಂಚುವುದರ ಮೂಲಕ ಅರಿವು ಮೂಡಿಸಲಾಯಿತು.
ಕಿಶೋರ ಕಾರ್ಮಿಕನಾಗಿ ಕೆಲಸ ನಿರ್ವಹಿಸುತ್ತಿದ್ದು ಪುನರ್ವಸತಿಗೊಳಿಸಿದ ಮಗುವಿಗೆ ಇಂದು ಟಿ ಎಸ್ ಪಿ ಮತ್ತು ಎಸ್ ಸಿ ಪಿ ಯೋಜನೆಯಡಿ ದಿನಸಿ ಸಾಮಗ್ರಿಗಳನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಮಿಕ ಅಧಿಕಾರಿಗಳು ಯೋಜನಾ ನಿರ್ದೇಶಕರು ಹಾಜರಿದ್ದರು.
ಮುಡಿಪು ಪ್ರದೇಶದಲ್ಲಿರುವ ಒಟ್ಟು 16ಅಂಗಡಿ/ಹಾಗೂ ವಾಣಿಜ್ಯ ಸಂಸ್ಥೆಗಳನ್ನು ಬಾಲಕಾರ್ಮಿಕ ಹಾಗೂ ಕಿಶೋರಾವಸ್ಥೆಯ ಕಾರ್ಮಿಕ ( ನಿಷೇಧ ಮತ್ತು ನಿಯಂತ್ರಣ) ಕಾಯ್ದೆಯಡಿ, ಹಿರಿಯ ಕಾರ್ಮಿಕ ನಿರೀಕ್ಷಕರು 3ನೇ ವೃತ್ತ ಮಂಗಳೂರು ಹಾಗು ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿಯ ಯೋಜನಾ ನಿರ್ದೇಶಕರ ತಂಡದೊಂದಿಗೆ ಅನಿರೀಕ್ಷಿತ ತಪಾಸಣೆಯನ್ನು ನಡೆಸಲಾಯಿತು .
ಗಜೇಂದ್ರಗಡ ಪಟ್ಟಣದಲ್ಲಿ ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ ದಾಳಿಯನ್ನು ಕೈಗೊಳ್ಳಲಾಗಿತ್ತು. ಸದರಿ ದಾಳಿಯಲ್ಲಿ ಇಬ್ಬರು ಕಿಶೋರ ಕಾರ್ಮಿಕರನ್ನು ಪತ್ತೆ ಹಚ್ಚಲಾಗಿದ್ದು ದಾಖಲಾತಿ ಪಡೆದು ಪ್ರಕರಣ ದಾಖಲಿಸಲಾಗುವುದು.
ಚಿತ್ತಾಪೂರ ತಾಲ್ಲೂಕಿನ ವಾಡಿಯಲ್ಲಿ ಬಾಲ ಭಿಕ್ಷಟನೆ ಹಾಗೂ ಬಾಲ ಕಾರ್ಮಿಕತೆ ಕುರಿತು ಅರಿವು ಹಾಗೂ ರಕ್ಷಣಾ ಕಾರ್ಯಚರಣೆ ನಡೆಸಲಾಯಿತು .ಸದರಿ ಕಾರ್ಯಾಚರಣೆಯಲ್ಲಿ ಪೋಲಿಸ್ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಕ್ಕಳ ಸಹಾಯವಾಣಿ -1098, ಡಾನ್ ಬಾಸ್ಕೋ ಮತ್ತು ಮಾರ್ಗದರ್ಶಿ ಸಂಸ್ಥೆ ಸಿಬ್ಬಂದಿಗಳು ಹಾಜರಿದ್ದರು.
HBR layout and ಕಾಚನಾಯಕನಹಳ್ಳಿ ಬೆಂಗಳೂರು ವ್ಯಾಪ್ತಿಯಲ್ಲಿ ಬಾಲ ಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ ನಿಷೇಧ ಮತ್ತು ನಿಯಂತ್ರಣ ಕಾಯ್ದೆ ಕುರಿತು ಜಾಥಾ ಕಾರ್ಯಕ್ರಮದ ಮೂಲಕ ಹಾಗೂ ಕರಪತ್ರ ಹಾಗೂ ಭಿತ್ತಿಪತ್ರಗಳನ್ನು ಹಂಚುವುದರ ಮೂಲಕ ಜನ ಜಾಗೃತಿ ಮೂಡಿಸಲಾಯಿತು.
ರಟ್ಟೀಹಳ್ಳಿ ತಾಲ್ಲೂಕಿನ ಪಟ್ಟಣ ಪಂಚಾಯತಿ, ಬಸ್ ನಿಲ್ದಾಣ ಹಾಗೂ ಆಟೋ ನಿಲ್ದಾಣದಲ್ಲಿ ಬಾಲ್ಯ ವಿವಾಹ ನಿಷೇಧ ಕಾಯ್ದೆ -2006 ಹಾಗೂ ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ಪದ್ಧತಿ ( ನಿಷೇಧ ಮತ್ತು ನಿಯಂತ್ರಣ ) ಕಾಯ್ದೆ -1986 ರ ಕುರಿತು ಜಾಗೃತಿ ಮೂಡಿಸಲಾಯಿತು.
ಸಾರ್ವಜನಿಕರಿಂದ ಬಂದ ದೂರಿನನ್ವಯ ಹಾವೇರಿ ಜಿಲ್ಲೆಯ ರಟ್ಟೀಹಳ್ಳಿ ಶಹರದಲ್ಲಿ ತರಳಬಾಳು ನಗರದಲ್ಲಿ 24/7 ನಲ್ಲಿ ನೀರಿನ ಪೈಪ್ ಲೈನ್ ಅಳವಡಿಕೆ ಕೆಲಸದಲ್ಲಿ ಮಕ್ಕಳು ಕೆಲಸ ಮಾಡುತ್ತಿದ್ದಾರೆ ಎಂಬ ದೂರು ಆಧರಿಸಿ ಅಲ್ಲಿಗೆ ಭೇಟಿ ನೀಡಿ ತಪಾಸಣೆ ಮಾಡಲಾಯಿತು ಹಾಗೂ ತಂದೆ ತಾಯಿಯವರಿಗೆ ಕಾಯ್ದೆ -1986 ರ ಕುರಿತು ಅರಿವು ಮೂಡಿಸಲಾಯಿತು.
ಯಾದಗಿರಿ ಜಿಲ್ಲೆಯಲ್ಲಿ 2026-27ನೇ ಸಾಲಿನ SCSP/TSP ಯೋಜನೆಯಡಿ ಆಟೋ ಪ್ರಚಾರ ಕಾರ್ಯಕ್ರಮಕ್ಕೆ ಮಾನ್ಯ ಕಾರ್ಮಿಕ ಅಧಿಕಾರಿಗಳು, ಯಾದಗಿರಿ ರವರು ಚಾಲನೆ ನೀಡಿದರು.
ರಾಣೇಬೆನ್ನೂರ ತಾಲ್ಲೂಕಿನಲ್ಲಿ ಮಾನ್ಯ ತಹಶೀಲ್ದಾರರ ನೇತೃತ್ವದಲ್ಲಿ ರಾಣೇಬೆನ್ನೂರ ನಗರದ ವಿವಿಧ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳಿಗೆ, ಹೋಟೆಲ್ಗಳಿಗೆ ಭೇಟಿ ನೀಡಿತಪಾಸಣೆ ಕೈಗೊಂಡು 18 ವರ್ಷದೊಳಗಿನ ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ ಮಕ್ಕಳನ್ನು ಕೆಲಸಕ್ಕೆ ನೇಮಿಸಿಕೊಳ್ಳದಂತೆ ಜಾಗೃತಿ ಮೂಡಿಸಲಾಯಿತು.
ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕರ ತಪಾಸಣೆ ಸಂದರ್ಭದಲ್ಲಿ ಕಂಡುಬಂದ ಮಗುವಿಗೆ,SCSP/TSP ಅನುದಾನದ ಅಡಿ ಮಾನ್ಯ ಸಹಾಯಕ ಕಾರ್ಮಿಕ ಆಯುಕ್ತರು, ಹುಬ್ಬಳ್ಳಿ ವಿಭಾಗ ಧಾರವಾಡ ಇವರಿಂದ ಶೈಕ್ಷಣಿಕ ಕಿಟ್ ಹಾಗೂ ಆಹಾರ ಕಿಟ್ಟನ್ನು ವಿತರಣೆ ಮಾಡಲಾಯಿತು
1098 ಕರೆ ಮೇರೆಗೆ ಔರಾದ ತಾಲೂಕಿನಲ್ಲಿರುವ ಮೂರ್ಕಿಯಲ್ಲಿರುವ ವಿದ್ಯುತ್ ಪವರ ಗ್ರೇಡ್ hero future energy ಗೆ child line ಸಿಬoದಿ ಯೋಜನಾ ನಿರ್ದೇಶಕರು ASI Kamalnagar P.D.O ಮೂರ್ಕಿ ಜಂಟಿಯಾಗಿ ಬಾಲ ಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ ಮಕ್ಕಳ ತಪಾಶಣೆ ಮಾಡಲಾಯಿತು.












































