ನಾಡು, ನುಡಿ ಹಾಗೂ ಸಂಸ್ಕೃತಿಯ ಸಂಭ್ರಮದ ಕನ್ನಡ ರಾಜ್ಯೋತ್ಸವದ ಅಂಗವಾಗಿ ಜಿಲ್ಲಾಡಳಿತದಿಂದ ಆಯೋಜಿಸಲಾದ ಸಮಾರಂಭದಲ್ಲಿ ಮಾನ್ಯ ನಗರಾಭಿವೃದ್ಧಿ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಯತೀಂದ್ರ ಸಿದ್ದರಾಮಯ್ಯ ರವರು ಧ್ವಜಾರೋಹಣ ನೆರವೇರಿಸಿ ಗೌರವ ವಂದನೆ ಸ್ವೀಕರಿಸಿದರು.
#KannadaRajyotsava2026 #Mysuru #KannadaRajyotsava
ನಿಮ್ಮ ಒಟಿಪಿ ಹಂಚಿಕೊಳ್ಳಬೇಡಿ. ಕೆವೈಸಿ ಹೆಸರಿನಲ್ಲಿ ಬರುವ ನಕಲಿ ಕರೆಗಳಿಗೆ ಮರುಳಾಗಬೇಡಿ.
ವಂಚನೆಗೊಳಗಾದರೆ ತಕ್ಷಣ 1930ಕ್ಕೆ ಕರೆ ಮಾಡಿ.
@Rangepol_SR @KarnatakaCops
ನಾಡಿನ ಸಮಸ್ತ ಜನತೆಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು! 💛❤️
ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ!
#ಕನ್ನಡರಾಜ್ಯೋತ್ಸವ
ರಾಷ್ಟ್ರದ ಏಕತೆ ಮತ್ತು ಸಮಗ್ರತೆಗೆ ಮಹತ್ವದ ಕೊಡುಗೆ ನೀಡಿದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಸ್ಮರಣಾರ್ಥ ಆಯೋಜಿಸಲಾದ ವಿಶೇಷ ಲೈವ್ ಕಾರ್ಯಕ್ರಮವನ್ನು ಜಿಲ್ಲಾ ಪೊಲೀಸ್ ಕಚೇರಿ ಹಾಗೂ ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ವೀಕ್ಷಿಸುವ ಮೂಲಕ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರು ಭಾಗವಹಿಸಿದರು.
#NationalUnity
ಭಾರತದ ಏಕೀಕರಣದ ಶಿಲ್ಪಿ, ದೇಶದ ಮೊದಲ ಗೃಹ ಸಚಿವರಾದ ಸರ್ದಾರ್ ವಲ್ಲಭಭಾಯಿ ಪಟೇಲ್ ರವರ ಜನ್ಮದಿನದ ಸ್ಮರಣಾರ್ಥ ರಾಷ್ಟ್ರೀಯ ಏಕತಾ ದಿನವನ್ನು ಆಚರಿಸಲಾಯಿತು.
#SardarVallabhbhaiPatel. #EktaDiwas
ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ಕಚೇರಿಯ ಸಭಾಂಗಣದಲ್ಲಿ ದಕ್ಷಿಣ ವಲಯ ಕಚೇರಿ ಹಾಗೂ ಜಿಲ್ಲಾ ಪೊಲೀಸ್ ಕಚೇರಿಯ ಅಧಿಕಾರಿ ಮತ್ತು ಸಿಬ್ಬಂದಿಗಳು ರಾಷ್ಟ್ರೀಯ ಏಕತಾ ಪ್ರತಿಜ್ಞಾವಿಧಿಯನ್ನು ಸ್ವೀಕರಿಸಿದರು.
#NationalUnityDay #RashtriyaEktaDiwas
@Rangepol_SR @KarnatakaCops
ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನವಾದ ಅಕ್ಟೋಬರ್ 31 ರ "ರಾಷ್ಟ್ರೀಯ ಏಕತಾ ದಿನದ ಅಂಗವಾಗಿ" ಮೈಸೂರು ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಕವಾಯತು ಮೈದಾನದಲ್ಲಿ ಕವಾಯತು ನಡೆಸಲಾಯಿತು. ಈ ಸಂದರ್ಭದಲ್ಲಿ ಅಧಿಕಾರಿ ಮತ್ತು ಸಿಬ್ಬಂದಿಗಳು ರಾಷ್ಟ್ರೀಯ ಏಕತಾ ಪ್ರತಿಜ್ಞಾವಿಧಿಯನ್ನು ಸ್ವೀಕರಿಸಿದರು.
#NationalUnityDay #RashtriyaEktaDiwas
ಹೆಚ್.ಡಿ.ಕೋಟೆಯ ವಿಶ್ವಭಾರತಿ ಪದವಿ ಪೂರ್ವ ಕಾಲೇಜಿನಲ್ಲಿ ಮೈಸೂರು ಜಿಲ್ಲಾ ಸೈಬರ್ ಪೊಲೀಸ್ ಠಾಣೆ ವತಿಯಿಂದ ವಿದ್ಯಾರ್ಥಿಗಳಿಗೆ ಸೈಬರ್ ಅಪರಾಧಗಳು, ಸಾಮಾಜಿಕ ಜಾಲತಾಣಗಳ ಸುರಕ್ಷಿತ ಬಳಕೆ ಹಾಗೂ ಆನ್‌ಲೈನ್ ವಂಚನೆಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು.
#CyberAwareness #SocialMediaSafety #CyberSafety
ಸಾರ್ವಜನಿಕರು ಕಳೆದುಕೊಂಡಿದ್ದ ಮೊಬೈಲ್ ಫೋನ್‌ಗಳನ್ನು CEIR ಪೊರ್ಟಲ್ ಮೂಲಕ ಪತ್ತೆಹಚ್ಚಿ, ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ವತಿಯಿಂದ ವಾರಸುದಾರರಿಗೆ ಮರಳಿ ಹಸ್ತಾಂತರಿಸಲಾಗಿದೆ.
#ceirportal #lostmobile
ಪ್ರತಿ ಪ್ರಯಾಣವೂ ಒಂದು ಪಾಠ!
ದೈನಂದಿನ ಪ್ರಯಾಣದ ವೇಳೆ ಮಕ್ಕಳಿಗೆ ಸಂಚಾರ ಸಂಕೇತಗಳು, ಜೀಬ್ರಾ ಕ್ರಾಸಿಂಗ್‌ಗಳ ಬಗ್ಗೆ ತಿಳುವಳಿಕೆ ನೀಡಿ, ಪಾದಚಾರಿ ಮರ‍್ಗದಲ್ಲಿ ಸುರಕ್ಷಿತವಾಗಿ ನಡೆಯಲು ಅಭ್ಯಾಸ ಮಾಡಿಸಿ.
ಇಂದಿನ ಪುಟ್ಟ ಪುಟ್ಟ ಹೆಜ್ಜೆಗಳು –ನಾಳೆಯ ಉತ್ತಮ ಹಾದಿಯತ್ತ!
#trafficsafety
@Rangepol_SR @KarnatakaCops
ನಿಮ್ಮ ಸುತ್ತಮುತ್ತಲಿನ ಚಟುವಟಿಕೆಗಳ ಬಗ್ಗೆ ಸದಾ ಗಮನವಿರಲಿ. ಯಾವುದೇ ಸಂಶಯಾಸ್ಪದ ಚಟುವಟಿಕೆ ಕಂಡುಬಂದಲ್ಲಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿ. ಜಾಗರೂಕರಾಗಿರಿ, ಸುರಕ್ಷತೆಗೆ ಸಹಕರಿಸಿ.
#StayVigilant #BeAlert #PublicSafety
ಮೈಸೂರು ಜಿಲ್ಲಾ ಸೈಬರ್ ಪೊಲೀಸ್ ಠಾಣೆಯ ವತಿಯಿಂದ ಪಿರಿಯಾಪಟ್ಟಣದ ವಿವಿಧ ಶಾಲಾ-ಕಾಲೇಜುಗಳಲ್ಲಿ ಸೈಬರ್ ಅಪರಾಧಗಳ ಕುರಿತು ಜಾಗೃತಿ ಮೂಡಿಸಲಾಯಿತು. ವಿದ್ಯಾರ್ಥಿಗಳಿಗೆ ಆನ್‌ಲೈನ್ ವಂಚನೆ, OTP ಮತ್ತು UPI ವಂಚನೆ ಹಾಗೂ ಅಪರಿಚಿತ ಲಿಂಕ್‌ಗಳ ಅಪಾಯಗಳ ಬಗ್ಗೆ ಮಾಹಿತಿ ನೀಡಿ, ಸಾಮಾಜಿಕ ಜಾಲತಾಣಗಳ ಸುರಕ್ಷಿತ ಬಳಕೆಯ ಕುರಿತು ಜಾಗೃತಿ ಮೂಡಿಸಲಾಯಿತು
ನಿಮ್ಮ ಪ್ರಯಾಣದ ಬಗ್ಗೆ...ಯಾವುದೇ ಕಾರಣಕ್ಕೂ ಫೇಸ್ ಬುಕ್, ಇನ್ಸಾಗ್ರಾಮ್, ವಾಟ್ಸ್ ಅಪ್ ಸ್ಟೇಟಸ್ ಅಥವಾ ಇತರ ಯಾವುದೇ ಸೋಷಿಯಲ್ ಮೀಡಿಯಾಗಳಲ್ಲಿ ಅಪಡೇಟ್ ಮಾಡಬೇಡಿ, ಇದರಿಂದ ಕಳ್ಳರಿಗೆ ಮಾಹಿತಿ ಸಿಕ್ಕಿ ಮನೆಗಳ್ಳತನವಾಗಬಹುದು.
ಜಾಗರೂಕರಾಗಿರಿ!
#beawareoftheft #mysuru
@Rangepol_SR @KarnatakaCops
ಪ್ರತಿ ಕ್ಷಣವೂ ಅಮೂಲ್ಯವಾದಾಗ, ನೆನಪಿರಲಿ 112. ರಸ್ತೆ ಅಪಘಾತ, ಅಗ್ನಿ ಅವಘಡದ ತುರ್ತು ಪರಿಸ್ಥಿತಿ ಅಥವಾ ವೈಯಕ್ತಿಕ ಸುರಕ್ಷತೆಗೆ ಅಪಾಯ ಎದುರಾದಾಗ, ಸಕಾಲಿಕ ಕ್ರಮ ಜೀವಗಳನ್ನು ಉಳಿಸಬಹುದು.
#112
ಇಂದು ಜಿಲ್ಲಾ ಪೊಲೀಸ್ ಕಚೇರಿಯ ಸಭಾಂಗಣದಲ್ಲಿ ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳ ಅಪರಾಧ ಪತ್ತೆ ದಳದ ಅಧಿಕಾರಿ ಮತ್ತು ಸಿಬ್ಬಂದಿಯವರೊಂದಿಗೆ ಪ್ರಗತಿ ಪರಿಶೀಲನಾ ಸಭೆಯನ್ನು ಮಾನ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ಮಲ್ಲಿಕಾರ್ಜುನ ಬಾಲದಂಡಿ, ಐಪಿಎಸ್ ರವರು ನಡೆಸಿ,
ಅಪರಾಧ ಪತ್ತೆ ಕಾರ್ಯಗಳ ಪ್ರಗತಿಯನ್ನು ಪರಿಶೀಲಿಸಿ, ಪ್ರಕರಣಗಳ ತ್ವರಿತ ಪತ್ತೆ ಹಾಗೂ ತನಿಖೆಯ ಕುರಿತು ಅಗತ್ಯ ಸೂಚನೆಗಳನ್ನು ನೀಡಿದರು.
#CrimeDetection #Investigation #CrimePrevention
@Rangepol_SR @KarnatakaCops
ಮೈಸೂರು ಜಿಲ್ಲಾ ಸೈಬರ್ ಪೊಲೀಸ್ ಠಾಣೆ ವತಿಯಿಂದ ರಮ್ಮನಹಳ್ಳಿಯಲ್ಲಿ ಬೈಕ್ ಜಾಥಾ ನಡೆಸುವ ಮೂಲಕ ಸಾರ್ವಜನಿಕರಿಗೆ ಸೈಬರ್ ಅಪರಾಧಗಳು ಹಾಗೂ ಸಾಮಾಜಿಕ ಜಾಲತಾಣಗಳ ಸುರಕ್ಷಿತ ಬಳಕೆಯ ಕುರಿತು ಜಾಗೃತಿ ಮೂಡಿಸಲಾಯಿತು.
#CyberAwareness #SocialMediaSafety #CyberSafety








































