ಈ ವಿಭೂತಿ ಮಹತ್ವ ತಿಳಿಸಿದ ದಾವಣಗೆರೆ ಜಿಲ್ಲಾಧಿಕಾರಿ #ಶರಣ ಮಹಾಂತೇಶ ಬೀಳಗಿ ಸರ್ 🙏🙏
ವಿಶ್ವೇಶ್ವರ ಭಟ್ಟನನ್ನು ಬಂಧಿಸದ ಸರ್ಕಾರಕ್ಕೆ ಧಿಕ್ಕಾರ
ರವಿ ಹಂಜ್ ಎಂಬ ಮಾನಸಿಕ ಅಸ್ವಸ್ಥ ವ್ಯಕ್ತಿಯನ್ನು ಮುಖವಾಣಿಯಾಗಿ ಬಳಸಿ ತನ್ನ ದುಷ್ಟ ಬುದ್ಧಿಯನ್ನು ತೆರೆದು ಇಟ್ಟಿರುವ ವಿಶ್ವವಾಣಿ ಪತ್ರಿಕೆಯ ಸಂಪಾದಕ ವಿಶ್ವೇಶ್ವರ ಭಟ್ ಎಂಬ ಸೋಗಲಾಡಿಯನ್ನು ಬಂಧಿಸುವಲ್ಲಿ ರಾಜ್ಯ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದೆ ಇರುವುದು ಖಂಡನೀಯ.
ಮಾನ್ಯ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಮತ್ತು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರೇ ಬಸವ ಮಂಟಪ ಎಂಬ ಪುಸ್ತಕ ಲೇಖಕ ಈಗಗಾಲೇ ದೇಶ ಬಿಟ್ಟು ಓಡಿ ಹೋಗಿರುವ ಮಾಹಿತಿಗಳು ದೊರೆತಿವೆ. ಇನ್ನು ಪುಸ್ತಕ ಬಿಡುಗಡೆಗೆ ಕಾರಣವಾದ ವಿಶ್ವೇಶ್ವರ ಭಟ್ಟನನ್ನು ಯಾಕೆ ಬಂಧಿಸುತ್ತಿಲ್ಲ? ಇಂದು ವೇಳೆ ಬಂಧಿಸದಿದ್ದರೆ ಬಸವ ಭಕ್ತರ ಕೋಪಕ್ಕೆ ರಾಜ್ಯ ಸರ್ಕಾರ ಬಲಿಯಾಗಬೇಕಾಗುತ್ತೆ ಎಚ್ಚರ.
ಹೊರದೇಶಕ್ಕೆ ಓಡಿ ಹೋಗಿರುವ ರವಿ ಹಂಜ್ ಎಂಬ ನಾಯಿಯನ್ನು ಒದ್ದು ಎಳೆದು ತರುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡಲು ನಾವು ಆಗ್ರಹಿಸುತ್ತೇವೆ.
@PriyankKharge @DKShivakumar
@MBPatil @eshwar_khandre @brpatilmla
@S_PrakashPatil @BasanagoudaBJP
@BYVijayendra @BSYBJP @BelladArvind
@INCIndia @INCKarnataka @AmitShah
@narendramodi @kharge @KannadaPrabha @AsianetNewsSN
@tv9kannada @publictvnews
@News18Kannada @TV5kannada
@OneindiaKannada @NewsFirstKan
@airnews_kannada @Lingayata_
@VishweshwarBhat @VishwavaniNews
ಸುಳ್ಳುಗಳಿಂದಲೇ ರಚಿತವಾದ, ಬಸವಣ್ಣ ಹಾಗೂ ಶರಣರನ್ನು ಅವಮಾನಿಸುವ ದಾಟಿಯಲ್ಲಿ ಮೂಡಿಬಂದಿದ್ದ ಪುಸ್ತಕಕ್ಕೆ ನಿಷೇಧ ವಿಧಿಸುವ ಮೂಲಕ ಈ ನಾಡಿನ ಪ್ರಜ್ಞೆಗೆ ಕನ್ನಡಿಯಾಗಿ ಸರಕಾರ ನಿಂತಿರುವುದು ಸಂತಸದ ವಿಷಯ.
ಸಚಿವ ಸಂಪುಟ ಸಭೆಯಲ್ಲಿ ಪುಸ್ತಕ ಮುಟ್ಟುಗೋಲು ಹಾಗೂ ಸಂಬಂಧಪಟ್ಟವರ ಮೇಲೆ ಕಾನೂನು ಕ್ರಮಕ್ಕೆ ಸೂಚಿಸಿರುವ ಮುಖ್ಯಮಂತ್ರಿ ಶ್ರೀ ಡಿ.ಕೆ. ಶಿವಕುಮಾರ್ ಅವರಿಗೆ ಹಾಗೂ ಈ ಷಡ್ಯಂತ್ರದ ಬಗ್ಗೆ ಎಚ್ಚರಿಕೆಯ ಸಂದೇಶ ರವಾನಿಸಿ ಶರಣರ ಘನತೆಯ ರಕ್ಷಣೆಗೆ ನಿಂತ ಸಚಿವ ಶ್ರೀ ಎಂ.ಬಿ. ಪಾಟೀಲ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು.
ಈ ವಿವಾದಿತ ಕೃತಿಯ ಬಗ್ಗೆ ಒಕ್ಕೊರಲಿನ ದನಿಯಾದ ಸಚಿವರಾದ ಶ್ರೀ ಈಶ್ವರ್ ಖಂಡ್ರೆ, ಶ್ರೀ ಶರಣಪ್ರಕಾಶ್ ಪಾಟೀಲ, ಶ್ರೀ ಬಿ.ಆರ್. ಪಾಟೀಲ ಸೇರಿದಂತೆ ಬೆಂಬಲವಾಗಿ ನಿಂತ ಎಲ್ಲಾ ಸಚಿವರು; ಪಕ್ಷಾತೀತವಾಗಿ ಶಾಸಕರು ಹಾಗೂ ಅಸಂಖ್ಯಾ ಬಸವಾಭಿಮಾನಿಗಳಿಗೆ, ಸಮಾಜದ ಹಿರಿಯರಿಗೆ, ಬಂಧುಗಳಿಗೆ, ವಿಶೇಷವಾಗಿ ಸಾಮಾಜಿಕ ಜಾಲತಾಣಗಳಲ್ಲಿ ದನಿಯೆತ್ತಿದ ಯುವಜನೆತೆಗೆ ಹೃತ್ಪೂರ್ವಕ ಕೃತಜ್ಞತೆಗಳು.
ಇತಿಹಾಸ ತಿರುಚುವ, ಸಮಾಜದ ಸ್ವಾಸ್ಥ್ಯ ಹಾಳು ಮಾಡುವ ಆಲೋಚನೆಗಳಿಗೆ ಇದು ಕೊನೆಯ ಎಚ್ಚರಿಕೆ ಆಗಿರಲಿ.
@DKShivakumar @MBPatil
@eshwar_khandre @brpatilmla
@S_PrakashPatil @JarkiholiSatish
@SantoshSLadINC @PriyankKharge
@BelladArvind @BSBommai
Veerashaiva Lingayath Official retweeted
ಬೆಂಗಳೂರು: ಸಮಾಜ ಸುಧಾರಕ ಬಸವಣ್ಣನವರ ಕುರಿತು ಅವಹೇಳನಕಾರಿ ಅಂಶಗಳಿವೆ ಎಂಬ ಆರೋಪದ ಹಿನ್ನೆಲೆಯಲ್ಲಿ ಲೇಖಕ ರವಿ ಹಂಜ್ ಅವರ ‘ಬಸವ ಮಂಟಪ’ ಪುಸ್ತಕವನ್ನು ನಿಷೇಧಿಸಲು ಕರ್ನಾಟಕ ಸಚಿವ ಸಂಪುಟ ನಿರ್ಧರಿಸಿದೆ.
#Karnataka #Basavanna #BasavaMantapa #RaviHanj #VishweshwarBhat #Bengaluru #Lingayat #KarnatakaPolitics
Basavanna’s Legacy Deserves Our Unwavering Defence!
Basavanna was among humanity’s greatest voices for equality, dignity and social justice. Centuries ahead of his time, he challenged entrenched social hierarchies, rejected discrimination and envisioned a society founded on compassion, reason and the dignity of labour. His revolutionary philosophy transcends communities, faiths and generations.
The concerns raised over the portrayal of Basavanna and his philosophy in the book Basava Mantapa are deeply serious and deserve appropriate consideration.
I welcome the Karnataka Cabinet’s decision to initiate action concerning the publication, including the proposed confiscation of copies, in accordance with the law and established legal procedures.
Freedom of expression, scholarly inquiry and critical examination of history are essential to a democratic society. Equally important is the responsibility to approach the lives and teachings of great social reformers with intellectual honesty, historical rigour and respect for facts.
Basavanna belongs not to any one community, but to humanity. His teachings continue to challenge inequality, injustice and discrimination, and remain profoundly relevant to our constitutional ideals.
Our commitment to defending Basavanna’s legacy is unwavering. We will uphold his ideals with conviction, respond to misrepresentations with reason and evidence, and pursue every lawful means to preserve the dignity of his extraordinary contribution to society.
To defend Basavanna is to defend equality, human dignity and social justice.
#ಸಾಂಸ್ಕೃತಿಕನಾಯಕ
ರವಿ ಹಂಜಗಿಮಠ ಎನ್ನುವಂತವರು @VishweshwarBhat ನ ನೀಚ ಅಸ್ತ್ರಗಳಷ್ಟೆ,
ಕನ್ನಡ ಕರ್ನಾಟಕ-ರಾಯಣ್ಣ ಚೆನ್ನಮ್ಮ ಬಸವಣ್ಣ ಹೀಗೆ ಕನ್ನಡಿಗ ಮಹಾನ್ ವ್ಯಕ್ತಿಗಳ ತೆಜೋವದೆ ಮಾಡಲು ಈ ವ್ಯಕ್ತಿ ತನ್ನ ಬದಲು ತನ್ನ ಅಸ್ತ್ರಗಳನ್ನ ಬಳಸಿ ಕನ್ನಡಿಗರನ್ನ ನೋಯಿಸುವುದೇ ಇವನ ಕಾಯಕ, ಇಂತಹ ಸಮಾಜದ ಸ್ವಾಸ್ತ್ಯವನ್ನ ಕೆಡಿಸಲು ಜಗಳ ಹಚ್ಚಲು ಈ ವ್ಯಕ್ತಿ ಪತ್ರಕರ್ತನ ಸೋಗಿನಲ್ಲಿ ಹಲುವು ದಶಕಗಳಿಂದ ನಾಡನ್ನ ಕೆಟ್ಟ ರೀತಿಯಿಂದ ಆವರಿಸಿಕೊಂಡ ನಾಡಿನ ಬಹುದೊಡ್ಡ ಪಿಡುಗು ಈ ವಿಶ್ವೇಶ್ವರನನ್ನ ಮೊದಲು ನಾಡಿನಾಚೆಗೆ ಹೊರಗಟ್ಟಿದರೆ ನಾಡಿಗೆ ಶಾಂತಿ.
#ArrestVishweshwaraBhat
@MBPatil @DKShivakumar
@PriyankKharge @DCPSouthBCP
@KarnatakaCops @AsianetNewsSN
@tv9kannada @TV5kannada
@publictvnews @News18Kannada
ನಾಡಿನ ಸಾಂಸ್ಕೃತಿಕ ನಾಯಕರಾದ ವಿಶ್ವಗುರು ಬಸವಣ್ಣನವರು ಹಾಗೂ ಶಿವಶರಣರ ಘನತೆಗೆ ಧಕ್ಕೆ; ಅವಹೇಳನಕಾರಿ ಹೇಳಿಕೆ ಹಾಗೂ ನಡೆಗೆ ತೀವ್ರ ಖಂಡನೆ!
ಸಮಾನತೆ, ಕಾಯಕ, ದಾಸೋಹ ಹಾಗೂ ಮಾನವೀಯ ಮೌಲ್ಯಗಳ ಮೂಲಕ ಜಗತ್ತಿಗೆ ಸಮಸಮಾಜದ ಸಂದೇಶ ಸಾರಿದ ವಿಶ್ವಗುರು ಬಸವಣ್ಣನವರು ಮತ್ತು ಮಹಾನ್ ಶಿವಶರಣರ ಕುರಿತು ರವಿ ಹಂಜ್ ಅವರು ನೀಡಿರುವ ಅವಹೇಳನಕಾರಿ ಹೇಳಿಕೆಗಳು ಹಾಗೂ ರಚಿಸಿರುವ 'ಬಸವಮಂಟಪ: ವೀರಶೈವ ಲಿಂಗಾಯತ ಸತ್ಯದರ್ಶನ' ಕೃತಿ ಅಪಮಾನಕಾರಿಯಾಗಿದ್ದು, ಅವರ ಈ ನಡೆ ತೀವ್ರ ಖಂಡನೀಯ.
ಇದು ಕೇವಲ ವ್ಯಕ್ತಿಗಳಿಗಾದ ಅವಮಾನವಲ್ಲ; ಶರಣರ ಚಿಂತನೆ, ವಚನ ಸಾಹಿತ್ಯ ಹಾಗೂ ಕನ್ನಡ ನಾಡಿನ ಸಾಂಸ್ಕೃತಿಕ ಪರಂಪರೆಗೆ ಮಾಡಿದ ಘೋರ ಅಪಚಾರವಾಗಿದೆ.
ಈ ಕುರಿತು ಬೆಂಗಳೂರಿನ ಬಸವ ಸಮಿತಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ, ಬಸವಣ್ಣನವರು ಹಾಗೂ ಶಿವಶರಣರ ಘನತೆಗೆ ಧಕ್ಕೆ ತರುವ ಇಂತಹ ಹೇಳಿಕೆಗಳನ್ನು ತೀವ್ರವಾಗಿ ಖಂಡಿಸಿದೆ.
ಬಸವಣ್ಣನವರ ವಿಚಾರಧಾರೆ ಇಂದಿಗೂ ಸಮಾಜಕ್ಕೆ ದಾರಿದೀಪವಾಗಿದೆ. ಅವರ ಘನತೆ ಹಾಗೂ ಶರಣ ಸಂಸ್ಕೃತಿಯ ಗೌರವವನ್ನು ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.
ಈ ಹಿನ್ನೆಲೆಯಲ್ಲಿ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ. ಶಿವಕುಮಾರ್ ಅವರ ಗಮನಕ್ಕೆ ಈ ವಿಚಾರವನ್ನು ತಂದು, ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಸೂಕ್ತ ಹಾಗೂ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುತ್ತೇವೆ.
ಇಂದಿನ ಪತ್ರಿಕಾಗೋಷ್ಠಿಯಲ್ಲಿ ಬಸವ ಸಮಿತಿ ಅಧ್ಯಕ್ಷರಾದ ಶ್ರೀ ಅರವಿಂದ ಜತ್ತಿ, ಸಚಿವ ಸಂಪುಟದ ಸಹೋದ್ಯೋಗಿಗಳಾದ ಡಾ. ಶರಣಪ್ರಕಾಶ ಪಾಟೀಲರು ಹಾಗೂ ಶ್ರೀ ಬಸವರಾಜ ರಾಯರೆಡ್ಡಿ, ಹಿರಿಯ ಶಾಸಕರಾದ ಶ್ರೀ ಬಿ.ಆರ್. ಪಾಟೀಲರು, ಮಾಜಿ ಸಚಿವೆ ಶ್ರೀಮತಿ ರಾಣಿ ಸತೀಶ್, ಬೆಂಗಳೂರಿನ ಮಾಜಿ ಮೇಯರ್ ಶ್ರೀಮತಿ ಗಂಗಾಂಬಿಕಾ ಮಲ್ಲಿಕಾರ್ಜುನ್, ಉಪಮೇಯರ್ ಶ್ರೀ ಸಿ.ಎಸ್. ಪುಟ್ಟರಾಜು, ಚಿಂತಕ ಡಾ. ಜೆ.ಎಸ್. ಪಾಟೀಲರು, ಡಾ. ನೀರಜ್ ಪಾಟೀಲ್, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಸಮಾಜ ಸೇವಕಿಯವರಾದ ಎಸ್. ಜಿ. ಸುಶೀಲಮ್ಮ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
#ಸಾಂಸ್ಕೃತಿಕನಾಯಕ #ಬಸವಸಮಿತಿ
@S_PrakashPatil @brpatilmla
ಬಸವಣ್ಣನವರ ಘನತೆಯ ರಕ್ಷಣೆಗೆ ಸಚಿವ ಸಂಪುಟದ ಒಕ್ಕೊರಲಿನ ಧ್ವನಿ; ಕನ್ನಡ ನಾಡಿಗೆ ಸಂತಸದ ಬೆಳವಣಿಗೆ!
ಬಸವಣ್ಣನವರು, ಬಸವಾದಿ ಶಿವಶರಣರು, ವಚನ ಸಾಹಿತ್ಯ ಹಾಗೂ ಕನ್ನಡ ನಾಡಿನ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಘನತೆಗೆ ಧಕ್ಕೆ ತರುವ ಪ್ರಯತ್ನಗಳ ಕುರಿತು ನಮ್ಮ ಸರ್ಕಾರ ತ್ವರಿತವಾಗಿ ಸ್ಪಂದಿಸಿದೆ.
ಇಂದು ನಡೆದ ಸಚಿವ ಸಂಪುಟ ಸಭೆಯ ಆರಂಭದಲ್ಲೇ ಈ ಗಂಭೀರ ವಿಚಾರವನ್ನು ಪ್ರಸ್ತಾಪಿಸಿದೆ. ಬಸವಣ್ಣನವರ ವ್ಯಕ್ತಿತ್ವ ಹಾಗೂ ವಚನ ಪರಂಪರೆಯ ಘನತೆಗೆ ಧಕ್ಕೆ ತರುತ್ತಿರುವ ಕೃತ್ಯಗಳ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳುವ ಅಗತ್ಯವನ್ನು ಒತ್ತಾಯಿಸಿದೆ.
ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ, ಸಚಿವರಾದ ಶ್ರೀ ಕೆ.ಎಚ್. ಮುನಿಯಪ್ಪ, ಶ್ರೀ ಬಸವರಾಜ ರಾಯರೆಡ್ಡಿ, ಡಾ. ಶರಣಪ್ರಕಾಶ ಪಾಟೀಲ, ಶ್ರೀ ವಿಜಯಾನಂದ ಕಾಶಪ್ಪನವರ, ಶ್ರೀ ಎಸ್.ಎಸ್. ಮಲ್ಲಿಕಾರ್ಜುನ, ಶ್ರೀ ಈಶ್ವರ ಖಂಡ್ರೆ ಸೇರಿದಂತೆ ಸಂಪುಟದ ಸಚಿವರು ಒಕ್ಕೊರಲಿನ ಬೆಂಬಲ ವ್ಯಕ್ತಪಡಿಸಿದರು.
ವಿವಾದಿತ ಪುಸ್ತಕವನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಹಾಗೂ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ರಕರ್ತ ವಿಶ್ವೇಶ್ವರ ಭಟ್ ಅವರ ವಿರುದ್ಧವೂ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.
ಎಲ್ಲ ಸಚಿವರ ಒಗ್ಗಟ್ಟಿನ ನಿಲುವಿಗೆ ಮುಖ್ಯಮಂತ್ರಿ ಶ್ರೀ ಡಿ.ಕೆ. ಶಿವಕುಮಾರ್ ಅವರು ಸಕಾರಾತ್ಮಕವಾಗಿ ಸ್ಪಂದಿಸಿ, ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.
ಸಚಿವ ಸಂಪುಟದ ಈ ಒಗ್ಗಟ್ಟಿನ ನಿಲುವು ಕನ್ನಡ ನಾಡಿನ ಸಾಂಸ್ಕೃತಿಕ ಅಸ್ಮಿತೆ ಹಾಗೂ ಬಸವಣ್ಣನವರ ವಿಚಾರಧಾರೆಯಲ್ಲಿ ನಂಬಿಕೆಯಿಟ್ಟಿರುವ ಕೋಟ್ಯಂತರ ಜನರಲ್ಲಿ ಸಂತಸ ಮತ್ತು ಹೊಸ ಭರವಸೆ ಮೂಡಿಸಿದೆ.
ಬಸವಣ್ಣನವರು ಒಂದು ಸಮುದಾಯಕ್ಕೆ ಸೀಮಿತರಾದವರಲ್ಲ; ಅವರು ಇಡೀ ಮಾನವಕುಲದ ಬೆಳಕು. ಅವರ ಘನತೆ, ಶರಣ ಪರಂಪರೆಯ ಮೌಲ್ಯಗಳು ಹಾಗೂ ವಚನ ಸಾಹಿತ್ಯದ ಗೌರವವನ್ನು ಕಾಪಾಡುವುದು ಕನ್ನಡಿಗರೆಲ್ಲರ ಸ್ವಾಭಿಮಾನದ ಪ್ರಶ್ನೆ.
ಇಂದಿನ ಸಚಿವ ಸಂಪುಟದ ಒಗ್ಗಟ್ಟಿನ ಧ್ವನಿ ಬಸವಣ್ಣನವರ ಅನುಯಾಯಿಗಳಿಗೆ ಮಾತ್ರವಲ್ಲ, ಬಸವತತ್ವದಲ್ಲಿ ನಂಬಿಕೆಯಿಟ್ಟಿರುವ ಸಮಸ್ತ ಕನ್ನಡಿಗರಿಗೆ ಭರವಸೆಯ ಸಂದೇಶವಾಗಿದೆ.
#ಸಾಂಸ್ಕೃತಿಕನಾಯಕ #ಸಚಿವಸಂಪುಟಸಭೆ @CMofKarnataka @DKShivakumar @DrParameshwara
ವಿಶ್ವಗುರು ಬಸವಣ್ಣನವರ ಕುರಿತು ರವಿ ಹಂಜ್ ಅವರು ನೀಡಿರುವ ಹೇಳಿಕೆ ಸಂಪೂರ್ಣ ತಪ್ಪು, ಆಧಾರರಹಿತ ಹಾಗೂ ತೀವ್ರ ಖಂಡನೀಯ. ಬಸವಣ್ಣನವರನ್ನು 'ಲೂಟಿಕೋರ, ಕೊಲೆಗಡುಕ' ಎಂದು ಬಿಂಬಿಸುವುದು ಶರಣ ಪರಂಪರೆಯ ಘನತೆ ಮತ್ತು ಲಿಂಗಾಯತ ಅಸ್ಮಿತೆಗೆ ಮಾಡಿದ ಅಪಮಾನ.
ಕಾಯಕ, ದಾಸೋಹ, ಸಮಾನತೆ ಮತ್ತು ಮಾನವೀಯತೆಯ ಮೌಲ್ಯಗಳನ್ನು ಜಗತ್ತಿಗೆ ಸಾರಿದ ಬಸವಣ್ಣನವರ ಚಾರಿತ್ರ್ಯಕ್ಕೆ ಮಸಿ ಬಳಿಯುವ ಪ್ರಯತ್ನವನ್ನು ಸಹಿಸುವುದಿಲ್ಲ.
ಮಾನ್ಯ ಮುಖ್ಯಮಂತ್ರಿಗಳು ಹಾಗೂ ಗೃಹಮಂತ್ರಿಗಳು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ, ರವಿ ಹಂಜ್ ಅವರ ಹೇಳಿಕೆ ಮತ್ತು ಕೃತಿಯಲ್ಲಿನ ಆಕ್ಷೇಪಾರ್ಹ ಅಂಶಗಳ ಕುರಿತು ಸೂಕ್ತ ತನಿಖೆ ನಡೆಸಿ, ಕಾನೂನಿನ ಚೌಕಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು. ಸಂಬಂಧಪಟ್ಟವರು ತಮ್ಮ ಹೇಳಿಕೆಯನ್ನು ಹಿಂಪಡೆದು ಕ್ಷಮೆಯಾಚಿಸುವಂತೆಯೂ ಕ್ರಮವಾಗಬೇಕು ಎಂದು ಸರ್ಕಾರವನ್ನು ಆಗ್ರಹಿಸುತ್ತೇವೆ.
ಬಸವಣ್ಣನವರ ಘನತೆ ನಮ್ಮ ಸ್ವಾಭಿಮಾನ. ಶರಣ ಪರಂಪರೆಯ ಗೌರವ ನಮ್ಮೆಲ್ಲರ ಹೊಣೆ.
#ವಿಶ್ವಗುರುಬಸವಣ್ಣ #ರವಿಹಂಜ್ #ಶರಣಪರಂಪರೆ #ಲಿಂಗಾಯತಅಸ್ಮಿತೆ #ಕರ್ನಾಟಕಸರ್ಕಾರ
@MBPatil @S_PrakashPatil @brpatilmla
@neerajpatil @KannadaPrabha
@tv9kannada @AsianetNewsSN
@publictvnews @TV5kannada
@NewsFirstKan @News18Kannada
@prajavani @DKShivakumar
@PriyankKharge @VishweshwarBhat
@VishwavaniNews @BasanagoudaBJP
@BYVijayendra @BelladArvind
Veerashaiva Lingayath Official retweeted
MB Patil | 'ಬಸವ ಮಂಟಪ' ಕೃತಿ ವಿರುದ್ಧ ಆಕ್ರೋಶ, ಮುಟ್ಟುಗೋಲಿಗೆ ಬಸವ ಸಮಿತಿ ಆಗ್ರಹ
@MBPatil @neerajpatil #raviganj #basavamantapa @VL_Karnataka
youtu.be/ezxADg7p0Rk?si=asX0… via @YouTube
ಕ್ಷಮಿಸಿಬಿಡು ಬಸವಣ್ಣ…!
ಕನ್ನಡದ ಮಣ್ಣಿನಲ್ಲಿ ಹುಟ್ಟಿ,
ಕನ್ನಡಿಗರ ಎದೆಯಲ್ಲಿ ಸ್ವಾಭಿಮಾನದ ಕಿಚ್ಚು ಹೊತ್ತಿಸಿ,
ಕನ್ನಡದ ವಚನಗಳ ಮೂಲಕ ವಿಶ್ವ ಸಾಹಿತ್ಯದಲ್ಲಿ
ಅಜರಾಮರನಾದ ನಿನಗೆ…
ಕ್ಷಮಿಸಿಬಿಡು ಬಸವಣ್ಣ!
ನಿನ್ನನ್ನು ಕಾಲ್ಪನಿಕ ಎಂದರು,
ನಿನ್ನ ಅಸ್ತಿತ್ವವನ್ನೇ ಪ್ರಶ್ನಿಸಿದರು,
ಕಳ್ಳ, ಕಾಕ, ಲೂಟಿಕೋರ ಎಂದು ಹೀಯಾಳಿಸಿದರು.
ನಿನ್ನ ಇತಿಹಾಸಕ್ಕೆ ಮಸಿ ಬಳಿಯಲು ಹೊರಟರು…
ಆದರೂ ಕ್ಷಮಿಸಿಬಿಡು ಬಸವಣ್ಣ!
ಸುತ್ತೂರಿನಿಂದ ಸಿದ್ಧಗಂಗೆಯವರೆಗೆ,
ಬೀದರ್ನಿಂದ ಬೆಳಗಾವಿಯವರೆಗೆ,
ಶಿರಿಗೆರೆಯಿಂದ ಸಾಣೇಹಳ್ಳಿಯವರೆಗೆ
ಎಲ್ಲ ಮಠಗಳಲ್ಲೂ ನಿನ್ನದೇ ನಾಮಸ್ಮರಣೆ!
ಮನೆಮನೆಗಳಲ್ಲಿ ನಿನ್ನ ಫೋಟೋ,
ಪ್ರವಚನಗಳಲ್ಲಿ ನಿನ್ನ ವಚನ,
ವೇದಿಕೆಗಳಲ್ಲಿ ನಿನ್ನ ಗುಣಗಾನ…
ಆದರೆ ನಿನ್ನ ಘನತೆಗೆ ಧಕ್ಕೆ ಬಂದಾಗ
ಇವರ ಗಂಟಲುಗಳಿಗೆ ಬೀಗ!
ನಿನ್ನ ಹೆಸರು ಬೇಕು,
ನಿನ್ನ ವಚನ ಬೇಕು,
ನಿನ್ನ ಹೆಸರಿನಲ್ಲಿ ಅಧಿಕಾರ ಬೇಕು,
ಸಂಸ್ಥೆಗಳು ಬೇಕು, ವೇದಿಕೆಗಳು ಬೇಕು…
ಆದರೆ ನಿನ್ನ ಪರವಾಗಿ ನಿಲ್ಲಲು ಮಾತ್ರ
ಏಕೆ ಇಷ್ಟೊಂದು ಹಿಂಜರಿಕೆ?
ಇನ್ನು ನೋಡಿ ಬಸವಣ್ಣ…
ನಿನ್ನ ವಿಚಾರಧಾರೆಯ ರಕ್ಷಕರಾಗಬೇಕಾದವರೇ
ವಿಶ್ವವಾಣಿಯ ವಿವಾದಾತ್ಮಕ ವೇದಿಕೆಯ ವಿಚಾರದಲ್ಲಿ
ಸಮ್ಮತಿ ಸೂಚಿಸಿದರೆ,
ಸಮಾಜದ ಸ್ವಾಭಿಮಾನವನ್ನು ಕಾಯಬೇಕಾದವರೇ
ವಿವಾದದ ಅಂಗಳಕ್ಕೆ ಇಳಿದರೆ,
ನಿನ್ನ ತತ್ವಗಳಿಗಾಗಿ ಧ್ವನಿ ಎತ್ತುವವರಾರು?
ವೀರಶೈವ ಮಹಾಸಭೆಯನ್ನು ಮುನ್ನಡೆಸುವವರೇ
ಇಂತಹ ಬೆಳವಣಿಗೆಗಳಿಗೆ ಸಮ್ಮತಿಸಿದರೆ,
ಸಮಾಜದ ದಿಕ್ಕು ತೋರಿಸಬೇಕಾದವರೇ
ಗೊಂದಲದ ಭಾಗವಾದರೆ,
ಇನ್ನು ನಮ್ಮನ್ನು ಕಾಪಾಡುವವರಾರು ಬಸವಣ್ಣ?
ನಿನ್ನ ಫೋಟೋಗೆ ಹಾರ ಹಾಕುವುದರಲ್ಲಿ ಪೈಪೋಟಿ,
ನಿನ್ನ ಹೆಸರಿನಲ್ಲಿ ಭಾಷಣ ಮಾಡುವುದರಲ್ಲಿ ಸ್ಪರ್ಧೆ,
ಆದರೆ ನಿನ್ನ ಗೌರವದ ಪ್ರಶ್ನೆ ಬಂದಾಗ
ಎಲ್ಲರಲ್ಲೂ ಒಂದೇ ಒಂದು ಅದ್ಭುತ ಸಾಮ್ಯತೆ…
ಮಹಾಮೌನ!
ನಿನ್ನನ್ನು ಪೂಜಿಸುವುದಕ್ಕಿಂತ
ನಿನ್ನ ವಿಚಾರಗಳನ್ನು ಬದುಕಬೇಕಿತ್ತು.
ನಿನ್ನ ಹೆಸರನ್ನು ಜಪಿಸುವುದಕ್ಕಿಂತ
ನಿನ್ನ ಸ್ವಾಭಿಮಾನದ ಪರವಾಗಿ ನಿಲ್ಲಬೇಕಿತ್ತು.
ಕ್ಷಮಿಸಿಬಿಡು ಬಸವಣ್ಣ…!
ನಿನ್ನ ಹೆಸರಿನಲ್ಲಿ ಬದುಕುವವರು ಹಲವರು,
ನಿನ್ನ ಹೆಸರಿನಲ್ಲಿ ವೇದಿಕೆ ಕಟ್ಟುವವರು ಹಲವರು,
ಆದರೆ ನಿನ್ನ ಘನತೆಗಾಗಿ ಧ್ವನಿ ಎತ್ತುವವರು ಮಾತ್ರ ಬೆರಳೆಣಿಕೆಯಷ್ಟು!
ಈ ನೆಲದಲ್ಲಿ ಹುಟ್ಟಿದ್ದಕ್ಕಾಗಿ ಅಲ್ಲ ಬಸವಣ್ಣ,
ನಿನ್ನ ತತ್ವಗಳ ವಾರಸುದಾರರೆಂದು ಹೇಳಿಕೊಳ್ಳುತ್ತಾ
ನಿನ್ನ ಸ್ವಾಭಿಮಾನದ ಹೊಣೆಗಾರಿಕೆಯಿಂದ ನುಣುಚಿಕೊಳ್ಳುತ್ತಿರುವುದಕ್ಕಾಗಿ…
ಕ್ಷಮಿಸಿಬಿಡು ಬಸವಣ್ಣ…!
@VishweshwarBhat @VishwavaniNews
ಗೀತವ ಬಲ್ಲಾತ ಜಾಣನಲ್ಲ, ಮಾತ ಬಲ್ಲಾತ ಜಾಣನಲ್ಲ.ಜಾಣನು ಜಾಣನು, ಆತ ಜಾಣನುಲಿಂಗವ ನೆರೆ ನಂಬಿದಾತ ಜಾಣನು,ಜಂಗಮಕ್ಕೆ ಸವೆಸುವಾತ ಆತ ಜಾಣನು,ಜವನ ಬಾಯಲು ಬಾಲವ ಕೊಯ್ದುಹೋದಾತ ಆತ ಜಾಣನು,ನಮ್ಮ ಕೂಡಲಸಂಗನ ಶರಣರನು.
ಕರ್ನಾಟಕ ರಾಜ್ಯ ನೀತಿ ಹಾಗೂ ಯೋಜನಾ ಆಯೋಗದ ಉಪಾಧ್ಯಕ್ಷರು ಹಾಗೂ ಆಳಂದ ವಿಧಾನಸಭಾ ಕ್ಷೇತ್ರದ ಶಾಸಕರು ಶರಣ ಬಿ.ಆರ್ .ಪಾಟೀಲ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು.💐💐
ಶ್ರೀ ಜಗದ್ಗುರು ರೇಣುಕಾಚಾರ್ಯ ಹಾಗೂ ಬಸವಾದಿ ಶರಣರ ಆಶೀರ್ವಾದ ಸದಾ ನಿಮ್ಮ ಮೇಲೆ ಇರಲಿ ಎಂದು ಕೇಳಿಕೊಳ್ಳುತ್ತೇವೆ.
@brpatilmla
ಎಲೆ ಮಿಗಲು ಆರು ತಿಂಗಳಿರುವುದು. ವ್ರತ ಹೋಗಲು ಆ ಕ್ಷಣ, ಭ್ರಷ್ಟನೆಂದು ಕೂಡರು. ಎಲೆ ಹಳದಾದಡೆ ಶಿವಂಗರ್ಪಿತ. ವ್ರತನಷ್ಟವಾಗಲಾಕ್ಷಣ ಮರಣವಯ್ಯಾ ಅತುರೇಶ್ವರಲಿಂಗವೆ.
-ಎಲೆಗಾರ ಕಾಮಣ್ಣ
ಊರ ಸೀರೆಗೆ ಅಸಗ ತಡಬಡಗೊಂಬಂತೆ ಹೊನ್ನೆನ್ನದು, ಮಣ್ಣೆನ್ನದು ಎಂದು ನೆನನೆನದು ಬಡವಾದೆ. ನಿಮ್ಮನರಿಯದ ಕಾರಣ ಕೆಮ್ಮನೆ ಕೆಟ್ಟೆನಯ್ಯಾ ಚೆನ್ನಮಲ್ಲಿಕಾರ್ಜುನಾ.
ರಾವ್ ಬಹದ್ದೂರ್, ಧರ್ಮಪ್ರವರ್ತ ಗುಬ್ಬಿ ತೋಟದಪ್ಪನವರಿಗೆ ಭಕ್ತಿಪೂರ್ವಕ ನಮನಗಳು.
ತಮ್ಮ ಬದುಕನ್ನೇ ಸಮಾಜದ ಒಳಿತಿಗಾಗಿ ಸಮರ್ಪಿಸಿಕೊಂಡ ರಾವ್ ಬಹದ್ದೂರ್, ಧರ್ಮಪ್ರವರ್ತ ಗುಬ್ಬಿ ತೋಟದಪ್ಪನವರ ಸೇವಾ ಮನೋಭಾವ, ಧಾರ್ಮಿಕ ಶ್ರದ್ಧೆ ಹಾಗೂ ಸಮಾಜಮುಖಿ ಕಾರ್ಯಗಳು ಎಲ್ಲರಿಗೂ ಸದಾ ಮಾದರಿಯಾಗಿವೆ.
ಶಿಕ್ಷಣ ಕ್ಷೇತ್ರಕ್ಕೆ ಅವರು ನೀಡಿದ ಅಮೂಲ್ಯ ಕೊಡುಗೆಗಳು, ಲಕ್ಷಾಂತರ ವಿದ್ಯಾರ್ಥಿಗಳ ಬದುಕಿಗೆ ದಾರಿದೀಪವಾಗಿವೆ.
ವಿದ್ಯಾರ್ಥಿಗಳ ಶಿಕ್ಷಣ ಮತ್ತು ವಸತಿಗಾಗಿ ತಮ್ಮ ಸಂಪತ್ತನ್ನು ವಿನಿಯೋಗಿಸುವ ಮೂಲಕ, ಶಿಕ್ಷಣವೇ ಸಮಾಜದ ಪ್ರಗತಿಯ ಬುನಾದಿ ಎಂಬುದನ್ನು ತಮ್ಮ ಸೇವೆಯ ಮೂಲಕ ಸಾಬೀತುಪಡಿಸಿದ ಮಹನೀಯರು ಅವರು.
ಅವರು ಹಾಕಿಕೊಟ್ಟ ದಾನಧರ್ಮ, ಶಿಕ್ಷಣ ಮತ್ತು ಸೇವೆಯ ಹಾದಿ ಇಂದಿಗೂ ಅನೇಕರ ಬದುಕಿಗೆ ಸ್ಫೂರ್ತಿಯಾಗಿದೆ. ಅವರ ಆದರ್ಶಗಳು ಹಾಗೂ ಸಮಾಜಕ್ಕೆ ನೀಡಿದ ಕೊಡುಗೆಗಳು ಎಂದೆಂದಿಗೂ ಸ್ಮರಣೀಯ.
#ಗುಬ್ಬಿತೋಟದಪ್ಪ
ಕಾಮ ಕಾಡಿತು, ಕ್ರೋಧ ಕೊಂದಿತು, ಆಮಿಷವೆನ್ನನೆಳೆವುತ್ತಿದೆ. ಕರುಣ ಮಾಡಾ ಹರಹರ ಮಹಾದೇವಾ, ಕರುಣ ಮಾಡಾ ಶಿವಶಿವ ಮಹಾದೇವಾ. ಕರುಣ ಮಾಡಾ ದೆಸೆಗೆಟ್ಟ ಪಶುವಿಂಗೊಮ್ಮೆ, ಕರುಣ ಮಾಡಾ ವಶವಲ್ಲದ ಶಿಶುವಿಂಗೊಮ್ಮೆ. ಕರುಣ ಮಾಡಾ ಅನ್ಯವನು ನಾನರಿಯೆ. ನಿಮ್ಮ ಪಾದವನುರೆ ಮಚ್ಚಿದೆನು, ಎನ್ನ ಕಪಿಲಸಿದ್ಧಮಲ್ಲಿನಾಥಯ್ಯ ತಂದೆ.
ಲಂಡನ್ನಲ್ಲಿ ಉನ್ನತ ಶಿಕ್ಷಣವನ್ನು ಪೂರ್ಣಗೊಳಿಸಿ, ಹಳ್ಳಿಗಳಲ್ಲಿರುವ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಶ್ರಮಿಸುತ್ತಾ, ವಿಜಯಪುರ ಜಿಲ್ಲೆಯಲ್ಲಿ ಕ್ಷೀರ ಕ್ರಾಂತಿಗೆ ಹೊಸ ಭಾಷ್ಯ ಬರೆದಿರುವ ಯುವ ನಾಯಕರಾದ ಶರಣ ಬಸವನಗೌಡ ಎಂ. ಪಾಟೀಲ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.
ಶ್ರೀ ಜಗದ್ಗುರು ರೇಣುಕಾಚಾರ್ಯ ಹಾಗೂ ಬಸವಾದಿ ಶರಣರ ಆಶೀರ್ವಾದ ಸದಾ ನಿಮ್ಮ ಮೇಲೆ ಇರಲಿ ಎಂದು ಕೇಳಿಕೊಳ್ಳುತ್ತೇವೆ.
@MBPatil
ಕಷ್ಟ ತಾನೇ ಹೊತ್ತು ಜ್ಞಾನ ನೀಡುವ ಗುರು!
ಕೊಪ್ಪಳ ಶ್ರೀ ಗವಿಸಿದ್ದೇಶ್ವರ ಮಠದ ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳ ಹಿತನುಡಿಗಳು.
ಕನ್ನೇರಿ ಸ್ವಾಮೀಜಿಯನ್ನು ಬೆಂಬಲಿಸುತ್ತಿರುವ ಕೆಲವು ಜನರಿಗೆ ಈಗಲಾದರೂ ಈತನ ನಿಜವಾದ ಅಜೆಂಡಾ ಅರ್ಥವಾಗಿದೆಯೇ?
ಈತನಿಗೆ ಬಸವಣ್ಣನವರ ವಚನ ಸಾಹಿತ್ಯ ಅಥವಾ ಭಾರತದ ಸಂವಿಧಾನದ ಮೇಲೆ ನಂಬಿಕೆಯಿಲ್ಲ; ಬದಲಾಗಿ, ಬ್ರಾಹ್ಮಣಶಾಹಿ ಆಳ್ವಿಕೆಯನ್ನು ಪ್ರತಿಪಾದಿಸುವ ಮನುಸ್ಮೃತಿಯೇ ಬೇಕಾಗಿದೆ.
ಭಾರತವನ್ನು ಮತ್ತೆ ಬ್ರಾಹ್ಮಣಶಾಹಿ ವ್ಯವಸ್ಥೆಯ ಹಿಡಿತಕ್ಕೆ ತಂದು, ಲಿಂಗಾಯತರನ್ನು ಶೂದ್ರರ ಸ್ಥಾನಕ್ಕೆ ತಳ್ಳುವ ಉದ್ದೇಶದಿಂದ ಆರ್ಎಸ್ಎಸ್ನ ಕೈಗೊಂಬೆಯಾಗಿ ಈತ ಕೆಲಸ ಮಾಡುತ್ತಿದ್ದಾನೆ.
ಈ ವ್ಯಕ್ತಿಯಲ್ಲಿ ಲಿಂಗಾಯತ ಸ್ವಾಮೀಜಿಯ ಕನಿಷ್ಠ ಲಕ್ಷಣಗಳು ಇಲ್ಲ. ಹಣೆಯಲ್ಲಿ ವಿಭೂತಿ ಇಲ್ಲ, ಅಲ್ಲದೆ ಈತನ ಮಠದಲ್ಲಿ ಓದುವ ವಿದ್ಯಾರ್ಥಿಗಳಿಗೆ ಇಷ್ಟಲಿಂಗದ ಬದಲು ಜನಿವಾರ ಹಾಕಿಸಿದ್ದಾನೆ. ಈಗಲಾದರೂ ಈತನಿಂದ ಲಿಂಗಾಯತ ಸಮುದಾಯ ಅಂತರ ಕಾಯ್ದುಕೊಂಡರೆ ಉತ್ತಮ.
@CPatilbjp @BYVijayendra
@BelladArvind @JagadishShettar
@VSOMANNA_BJP @BJP4Karnataka
@eshwar_khandre @MBPatil
@narendramodi @AmitShah
@publictvnews @AsianetNewsSN
@tv9kannada @KannadaPrabha
@blsanthosh @BasanagoudaBJP






















