ಕಾಪಿ ಚಿರಾಯು... (@SocialSlack) header
ಕಾಪಿ ಚಿರಾಯು... (@SocialSlack) profile picture

हिमालयं समारभ्य यावत् इंदु सरेावरम् | तं देवनिर्मितं देशं हिंदुस्थानं प्रचक्षते||..... ಅಹಿಂಸಾ ಪರಮೋ ಧರ್ಮಃ! ಧರ್ಮ ಹಿಂಸಾ ತಥೈವ ಚ !

ಅಖಂಡ ಭಾರತ
Joined February 2010
Photo by ಕಾಪಿ ಚಿರಾಯು... (@SocialSlack)Photo by ಕಾಪಿ ಚಿರಾಯು... (@SocialSlack)Photo by ಕಾಪಿ ಚಿರಾಯು... (@SocialSlack)Photo by ಕಾಪಿ ಚಿರಾಯು... (@SocialSlack)Photo by ಕಾಪಿ ಚಿರಾಯು... (@SocialSlack)Photo by ಕಾಪಿ ಚಿರಾಯು... (@SocialSlack)Photo by ಕಾಪಿ ಚಿರಾಯು... (@SocialSlack)Photo by ಕಾಪಿ ಚಿರಾಯು... (@SocialSlack)Photo by ಕಾಪಿ ಚಿರಾಯು... (@SocialSlack)
ಕನ್ನಡ ಅಂಕಿ - ಇಂಗ್ಲೀಷ್ ಅಂಕಿ ? ರೋಹಿತ್ ಚಕ್ರತೀರ್ಥ ಅವರ ಬರಹದ ಒಂದು ಭಾಗ - ಆಸಕ್ತರಿಗೆಂದು ಇಲ್ಲಿ ಕತ್ತರಿಸಿ ಅಂಟಿಸಿದ್ದೇನೆ. "ಕೆಲ ವರ್ಷಗಳ ಹಿಂದೆ ನಾನು ಸದಸ್ಯನಾಗಿದ್ದ ಒಂದು ಸರಕಾರೀ ಸಂಸ್ಥೆಯಲ್ಲಿ ರಾಜ್ಯೋತ್ಸವದ ಸಮಯದಲ್ಲಿ 'ಕನ್ನಡ ಅಂಕಿಗಳಿರುವ ಗಡಿಯಾರ'ಗಳನ್ನು ಮಾಡಬೇಕೆಂಬ ಯೋಜನೆ ಹಾಕಲಾಯಿತು. ಆಗ ಆ ಸಂಸ್ಥೆಯ ಅಧ್ಯಕ್ಷರು 'ನಾವು ಇನ್ನೂ ಇಂಗ್ಲೀಷ್ ಅಂಕೆಗಳನ್ನು ಬಳಸಬೇಕೆ? ಕನ್ನಡ ಅಂಕೆಗಳನ್ನು ಬಳಸೋಣ' ಎಂದರು. ಅದಕ್ಕೆ ನಾನು ಸೌಮ್ಯವಾಗಿ ಆಕ್ಷೇಪಿಸಿದೆ. 'ಮಾನ್ಯರೆ, ಕನ್ನಡ ಅಂಕೆಗಳನ್ನು ಬಳಸಬೇಕೆಂಬ ನಿಮ್ಮ ಆಶಯಕ್ಕೆ ನನ್ನ ಬೆಂಬಲ ಇದೆ. ಆದರೆ ಅದಕ್ಕಾಗಿ ನೀವು ಹೇಳುವ 'ಇಂಗ್ಲೀಷ್ ಅಂಕೆ'ಗಳನ್ನು ತುಚ್ಛೀಕರಿಸಬೇಕಾಗಿಲ್ಲ. ಯಾಕೆಂದರೆ ಅವು ಮೂಲತಃ ಇಂಗ್ಲೀಷ್ ಅಂಕೆಗಳಲ್ಲ. ಅವನ್ನು ಸೃಷ್ಟಿಸಿದವರು ಭಾರತೀಯರೇ. ನಾವು ಎಲ್ಲೆಲ್ಲೂ ಬಳಸುವ 1, 2, 3, ಇತ್ಯಾದಿ ಎಲ್ಲ ಅಂಕೆಗಳೂ - 0 ಯನ್ನೂ ಒಳಗೊಂಡು - ಎಲ್ಲವೂ ಶುದ್ಧ ಭಾರತೀಯ. ಅವನ್ನು ಸೃಷ್ಟಿಸಿದವರು ನಮ್ಮವರೇ. ಇಂಗ್ಲೀಷಿನವರದ್ದು ಎಂಬ ಅಂಕೆಗಳು ಯಾವುದೂ ಇಲ್ಲ. ರೋಮನ್ ಲಿಪಿಯಲ್ಲಿ ಅಕ್ಷರಗಳಿಗೂ ಸಂಖ್ಯೆಗಳಿಗೂ ಒಂದೇ ರೀತಿಯ ಸಂಕೇತಗಳನ್ನು ಬಳಸಿ ಅವರು ಸಿಕ್ಕಾಪಟ್ಟೆ ಗೊಂದಲ ಮಾಡಿಕೊಂಡರು (V ಎಂಬ ಸಂಕೇತ - ಅಕ್ಷರವೂ ಆಗಬಹುದು, 5 ಎಂಬ ಸಂಖ್ಯಾವಾಚಕವೂ ಆಗಬಹುದು). ಆದರೆ ಕನ್ನಡದವರು ಬುದ್ಧಿವಂತರು. ನಮ್ಮವರು ಅಕ್ಷರಗಳನ್ನಲ್ಲ - ಅವುಗಳ ಒತ್ತಕ್ಷರಗಳನ್ನು ಸಂಖ್ಯಾ ಸಂಕೇತಗಳಾಗಿ ಬಳಸಿಕೊಂಡು (ರೋಮನ್ನರಿಗೆ ಹುಟ್ಟಿದ್ದ) ಗೊಂದಲ ಇಲ್ಲದೆ ಕೆಲಸವನ್ನು ಸುಲಭ ಮಾಡಿಕೊಂಡರು. ಒಟ್ಟಿನಲ್ಲಿ 1, 2, 3, 4 ಇತ್ಯಾದಿಯೂ ನಮ್ಮವೇ; ೧, ೨, ೩, ೪ ಇತ್ಯಾದಿಯೂ ನಮ್ಮವೇ' ಎಂದೆ. "
1
2
15
623
ಕಾಪಿ ಚಿರಾಯು... retweeted
7
54
2
177
2,071
Except that they did the same iconoclasm under wraps.
Replying to @razibkhan
I think Sufism is very different from Islam
2
8
311
ನಮ್ಮ ರಾಜ್ಯದ ಭಾಜಪ ಮುಖಂಡರ ನೋಡಿ ಸ್ಕೂಲಲ್ಲಿ ಓದಿದ್ದ "ಇಕ್ಕಳ" ಪದ್ಯ ನೆನಪಾಯಿತು ಬುಕ್ ಫೋಟೋ ನೋಡಿ ಇನ್ನೂ ಓದಿಲ್ವಾ ಎಂದರು ಅರ್ಧ ಓದಿದರೆಂದರೆ ಪೂರ್ತಿ ಆಗಿಲ್ವಾ ಎಂದರು, ಪೂರ್ತಿ ಓದಿದವರ ನೋಡಿ ಇದು ಅಸಾಧ್ಯ ಎಂದರು, ಇವರ ಈ ಪುಸ್ತಕದ ಜಂಜಾಟದಲ್ಲಿ ಬೆಲೆಯೇರಿಕೆಯ ವಿಷಯವನ್ನೇ ಮರೆತರು🤷‍♂️ ಬೆಲೆಏರಿಕೆಯಿಂದ ಜನ ಸಾಯ್ತಾವ್ರೆ, ಅದರ ಬಗ್ಗೆ ಪ್ರತಿಭಟನೆ ಮಾಡ್ರೋ ಅಂದ್ರೆ ಅದ್ಯಾವ್ದೋ ಊಟಕ್ಕಿಲ್ಲದ ಉಪ್ಪಿನಕಾಯಿ, ಸೀಮೆಗಿಲ್ಲದ ಬದನೆಕಾಯಿ ತರ ಇರೋ ಆಟೋ ಬಯಾಗ್ರಫಿ ಬಗ್ಗೆ ಮಾತಾಡಿಕೊಂಡು ಕುಂತವ್ರೆ🤦‍♂️🤦‍♂️ ಇದನ್ನ ಬಿಟ್ಟು ಬೀದಿಗಿಳಿದು ಜನರ ಕಷ್ಟ ಕೇಳಿ, ಜನರಿಗೋಸ್ಕರ ಮಾತನಾಡಿ🤷‍♂️
5
3
11
528
ಕಾಪಿ ಚಿರಾಯು... retweeted
Had enough of the social media madness in last few days, signing off to layer in generous amounts of body lotion, cosy up, look like glazed doughnut, bake all the saved recipes and run Hallmark Christmas movies marathon. See you in another universe. ✨
3
1
39
871
ಕಾಪಿ ಚಿರಾಯು... retweeted
ஒப்புயர் வில்லா வொருமந்தி ரந்தனைச் செப்பெனச் செவியில் சிரித்துரைத் தப்பன்றன் தோளே யமரந்து துயர்தீர்க்கும் சுப்பாநின் தானே யெமக்குச் சரண்
கந்த சஷ்டி விரதம் அனுஷ்டிக்கும் அனைவருக்கும் எனது நமஸ்காரங்கள்
2
3
7
208
ಕಾಪಿ ಚಿರಾಯು... retweeted
And then Jayant Kaykini wrote - ಕವಿತೆಯನ್ನು ಅರಸಿಕೊಂಡು ಎಲ್ಲಿ ಅಲೆದಿರುವೆ.. ಪದಗಳನ್ನು ಹಿಡಿದು ನಾನು ಇಲ್ಲೇ ಕೂತಿರುವೆ..
true lovers are leavers
3
2
61
1,549
ಕಾಪಿ ಚಿರಾಯು... retweeted
Rangoli in a temple...Sita Rama
6
13
207
1,775
ಕಾಪಿ ಚಿರಾಯು... retweeted
ಅಲ್ಲ, ಹೀಗ್ ಕೇಳ್ತೀನಿ ಅಂತ ತಪ್ ತಿಳ್ಕೋಬೇಡಿ.. But why does such large section of the population in OMR districts remain so unaware of cultural, linguistic and geographical diversity that exists within their own state??
ಅಲ್ಲ, ಹೀಗ್ ಕೇಳ್ತೀನಿ ಅಂತ ತಪ್ ತಿಳ್ಕೋಬೇಡಿ; ಸಾಧಾರಣ, ನಮ್ ಕರ್ನಾಟಕದಲ್ಲಿ ಮಹಾನವಮಿ (ಆಯುಧಪೂಜೆ) ದಿನ ಗಾಡಿಗಳ್ನ ತೊಳೆದು ಪೂಜೆ ಮಾಡೋದು ವಾಡಿಕೆ. ಈ ದೀಪಾವಳಿ ಅಮಾವಾಸ್ಯೆ ದಿನ ಪೂಜೆ ಮಾಡೋದು ಯಾವಾಗಿಂದಾಯ್ತು? ಅಥವಾ, ಇದೂ Instagram ಟ್ರೆಂಡ್ ಥರಾನಾ? ಈ ವರ್ಷ ನಾನು ಗಮನಿಸ್ತಿದೀನಿ.
18
35
4
251
9,381
ಕಾಪಿ ಚಿರಾಯು... retweeted
A heart long silent, Feelings lost along the way, You led them home. #HaikuNovember #Home
2
6
276
ಕಾಪಿ ಚಿರಾಯು... retweeted
Karnataka’s Police Social Media Monitoring Cell and Fact Check Agency are quick to register cases even for political criticism, and get pulled up regularly by the Karnataka High Court. But when Home Minister @PriyankKharge himself spreads fake news, these agencies have suddenly gone silent. Someone should file a missing complaint against these agencies and the officers monitoring social media. Where have they disappeared? Are they hiding in their holes, or do their rules apply only to those who criticise the government? @DgpKarnataka @BlrCityPolice
17
229
2
689
8,462
ಕಾಪಿ ಚಿರಾಯು... retweeted
I wonder if even she has read the book as much as these people who are quoting excepts from it.
3
4
26
795
ಕಾಪಿ ಚಿರಾಯು... retweeted
Half the people around are intentionally bursting more crackers just to rebel against the ones who preach during festivals!😂🤦‍♀️
27
30
8
309
4,347
ಕಾಪಿ ಚಿರಾಯು... retweeted
This kowtv admin prolly has some personal beef with that Jensen guy, man🤣🤣🤣🤣repeat mele repeat repeat mele repeat avnde edits haakond kuntavne🤣🤣🤣🙏🏻🙏🏻🙏🏻
3
2
28
853
ಕಾಪಿ ಚಿರಾಯು... retweeted
ವೀರವನಿತೆ ಒನಕೆ ಓಬವ್ವನವರ ಜಯಂತಿಯಂದು ಶತ ಶತ ನಮನಗಳು. Humble tributes to the brave warrior woman Onake Obavva on her birth anniversary. Her extraordinary courage, valour and sacrifice in defending Chitradurga Fort against the invading forces remain an eternal inspiration.
1
67
1
217
1,757
ಕಾಪಿ ಚಿರಾಯು... retweeted
#Day8 #Haikunovember #cosmos Paradox of love..to love infinite in finite!
2
1
1
28
828
ಕಾಪಿ ಚಿರಾಯು... retweeted
I find myself, In all your poetry.. What shall I name it? #Day9 #Haikunovember
2
2
4
231
ಇಂತಹ ಟಿಪ್ಪಣಿಗಳನ್ನ ಆಗಿಂದಾಗ್ಗೆ ನಾನು ಹಾಕುತ್ತಿರುತ್ತೇನೆ - ಉದ್ದೇಶ ಬೇರೆಯವರು ಓದಲೇಬೇಕೆಂದಲ್ಲ, ಆದರೆ, ನಾನು ಇನ್ನೆಲ್ಲೋ ಮಾಡಿರುವ ಟಿಪ್ಪಣಿಗಳು , ಯೋಚನಾ ಸರಣಿ ಕಳೆದು ಹೋಗಬಾರದು ಎಂದಷ್ಟೇ. ಏಕೆಂದರೆ, ಬಹಳ ಹಿಂದೆ ಕರ್ನಾಟಕ ಸಂಗೀತ ದ ಬಗ್ಗೆ ಚರ್ಚಿಸುತ್ತಿದ್ದ ಹಲವಾರು ಸೈಟ್ ಗಳು ಇಂದಿಲ್ಲ ( ಸಂಗೀತಂ.ಕಾಂ. ಕಾರ್ನಾಟಿಕಾ, ಫೋರಂ ಹಬ್, ರಸಿಕಾಸ್.ಆರ್ಗ್ ಹೀಗೆ) - ಹಾಗಾಗಿ ನಾನು ಬರೆದದ್ದೆಲ್ಲ ನನಗೇ ಸಿಕ್ಕದೇ ಹೋದವು. ಅದಿರಲಿ. ಇದು #ಪೆಗ್ಗಿಮೋಹನ್ ಅವರ ಪುಸ್ತಕದ ಬಗ್ಗೆ, ಮತ್ತು ಅದರ ಬಗ್ಗೆ #ವಸುಧೇಂದ್ರ ಅವರು ಮಾತಾಡಿದ್ದ ಬಗ್ಗೆ, ನಾನು ಫೇಸ್ ಬುಕ್ ನಲ್ಲಿ ಹಾಕಿದ್ದ ಟಿಪ್ಪಣಿಗಳು - (೧) ವಸುಧೇಂದ್ರ ಅವರೆ ನಮಸ್ಕಾರ. ನಿಮ್ಮ ಈ ವಿಡಿಯೋ ನೋಡಿದೆ. ಬಹಳ ನಿರಾಸೆ ಹಾಗೂ ಬೇಸರವಾಯಿತು. ನಿಮ್ಮ ಮಾತಿನಲ್ಲಿ (ಮತ್ತು ಅದು ಆಧರಿಸಿರುದ್ದ ಪೆಗ್ಗಿ ಮೋಹನ್ ಅವರ ಪುಸ್ತಕದಲ್ಲಿ) ಹಲವು ತಪ್ಪು ಅಭಿಪ್ರಾಯಗಳು, ಕಲ್ಪನೆಗಳು ಇವೆ. ಹೈಪಾಥೆಸಿಸ್ ಮತ್ತೆ ಸತ್ಯ ಒಂದೇ ಆಗಿರಬೇಕಿಲ್ಲ ಎಂಬ ತಾಂತ್ರಿಕ ವಿಷಯ ಎಂಜಿನಿಯರ್ ಆದ ನಿಮಗೆ ಗೊತ್ತಿಲ್ಲದ್ದೇನಲ್ಲ ಎಂದು ನಾನು ನಂಬಿದ್ದೇನೆ. ಆದರೆ ನಿಮ್ಮ ಮಾತಿನಲ್ಲಿ ಅದು ಮೂಡಿಬಂದಿಲ್ಲ. ನಿಮ್ಮಂತಹ ಪ್ರಸಿದ್ಧ ಲೇಖಕರು ಇಂಥ ವಿಷಯಗಳನ್ನು ಮಾತಾಡುವಾಗ ಇನ್ನೂ ಹೆಚ್ಚಿನ ಅಧ್ಯಯನ ಮತ್ತು ಎಚ್ಚರ ಅಗತ್ಯ. ಏಕೆಂದರೆ ನಿಮ್ಮ ಮಾತನ್ನು ಕೇಳುವವರು , ಅದನ್ನು ಪೂರ್ಣ ಸತ್ಯವೆಂದು ನಂಬುವವರು ಸಾವಿರಾರು ಜನರಿದ್ದಾರೆ. ಆ ಎಚ್ಚರವನ್ನು ನೀವಿಲ್ಲಿ ವಹಿಸಲಿಲ್ಲ. #ಸಂಸ್ಕೃತ ಕ್ಕೆ #ಲಿಪಿ ಇಲ್ಲ, ಎಂದೂ ಹೆಂಗಸರು ಸಂಸ್ಕೃತ ಅರಿಯಲಿಲ್ಲ, ಸಂಸ್ಕೃತವೇ ಬೇರೆ, #ಪ್ರಾಕೃತ ವೇ ಬೇರೆ, ಸಂಸ್ಕೃತದಿಂದ #ಮಲೆಯಾಳ ಭಾಷೆಯನ್ನು ಬಿಟ್ಟು ಬೇರಾವ ಭಾಷೆಗಳೂ ನೇರವಾಗಿ ಪದಗಳನ್ನು ತೆಗೆದುಕೊಳ್ಳಲಿಲ್ಲ ಎಂಬಂಥ ತಪ್ಪುತಪ್ಪಾದ ಸಿದ್ಧಾಂತಗಳನ್ನುಳ್ಳ ಪೆಗ್ಗಿ ಮೋಹನ್ ರ ಪುಸ್ತಕವನ್ನು ನೀವಿಷ್ಟು ನೆಚ್ಚಿದ್ದು ಬಹಳ ಆಘಾತಕಾರಿ ಸಂಗತಿ. #ವ್ಯಾಸ ರು ಹುಟ್ಟಿದ ಕಥೆಯನ್ನು ಹೇಳುವ ಮಹಾಭಾರತವೇ ಅದೇ ಸಮಯದಲ್ಲಿ ನಡೆದ ನೂರಾರು ವಿವಾಹಗಳ ಕಥೆಯನ್ನೂ ಹೇಳುತ್ತದೆ. ಅದನ್ನೆಲ್ಲ ಪೆಗ್ಗಿ ಮೋಹನ್ ಗಮನಿಸದೇ ಒಂದು ಠರಾವು ಕೊಟ್ಟು ಬಿಟ್ಟಿರಬಹುದು. ಆದರೆ ಮಹಾಭಾರತದ ಕಥೆಯನ್ನು ಬಲ್ಲ ನೀವು ಗಮನಿಸಲಿಲ್ಲವೇ? ವ್ಯಾಸರ ಸಮಯದಲ್ಲಿ ಹುಟ್ಟಿದ್ದು ಆತನೊಬ್ಬನೇ? ಉಳಿದವರದ್ದೆಲ್ಲ ಕಥೆ ಏನು? ಗಂಡು ಮಕ್ಕಳನ್ನೆಲ್ಲ ಐದು ವರ್ಷಗಳಿಗೆ ಎಲ್ಲೋ ಕರೆದುಕೊಂಡು ಹೋಗಿ ಅವರನ್ನು"ಆರ್ಯ"ರನ್ನಾಗಿ ಮಾಡುವ ಹುನ್ನಾರವಿತ್ತು ಅನ್ನುವ ರೀತಿ ನೀವು ಮಾತಾಡುವ ಮೊದಲು ಒಮ್ಮೆ ನೀವೇ ಯೋಚಿಸಬೇಕಿತ್ತಲ್ಲವೇ? ಇಂಗ್ಲಿಷ್ ನಲ್ಲಿ ಬಂದ ಮಾತ್ರಕ್ಕೆ, ಪೆಂಗ್ವಿನ್ ನವರು ಪ್ರಕಟಮಾಡಿದ್ದಕ್ಕೆ ಅಲ್ಲಿದ್ದದ್ದೆಲ್ಲ ನಿಜವಾಗಿರಬೇಕಿಲ್ಲ! ಅಂದಹಾಗೆ ಇನ್ನು ಈ "ಎಡಿಟಿಂಗ್" ಅನ್ನುವುದು ಇಂಗ್ಲಿಷ್ ನವರ ಸ್ವತ್ತೇನೂ ಅಲ್ಲ. #ಕುಮಾರವ್ಯಾಸ ನಂತಹ ಒಬ್ಬ ಕವಿ "ಹಲಗೆ ಬಳಪವ ಪಿಡಿಯದೊಂದಗ್ಗಳಿಕೆ, ಪದವಿಟ್ಟಳುಪದೊಂದಗ್ಗಳಿಕೆ" ಎಂದು ಹೇಳಿರಬಹುದು. ಆದರೆ ಕುಮಾರವ್ಯಾಸನಂಥವರು ಭಾರತೀಯ ಸಾಹಿತ್ಯವೊಂದೇ ಅಲ್ಲ ಪ್ರಪಂಚದಲ್ಲಿ ಎಲ್ಲೂ ವಿರಳವೇ. ನಮ್ಮ ಕವಿಗಳೂ , ವಿದ್ವಾಂಸರೂ ತಮ್ಮ ರಚನೆಗಳನ್ನು ಇತರ ವಿದ್ವಾಂಸರಲ್ಲಿ ಓದಿಸಿ, ತಿದ್ದಿ ತೀಡುತ್ತಿದ್ದ ವಿಷಯ ನಮಗೆ ಅವರವರ ಪುಸ್ತಕಗಳಲ್ಲೇ ತಿಳಿಯುತ್ತದೆ. ಇದು ಎಡಿಟಿಂಗ್ ಅಲ್ಲದೆ ಮತ್ತೇನು? ಇನ್ನು ತಮ್ಮ"ಸಾಹಿತ್ಯವನ್ನು ಬೇರೆಯವರಿಗೆ ತಿಳಿಸಬಾರದೆಂದು" ಬರೆಯದೇ ಇದ್ದ "ಆರ್ಯರು" ಅದೇ ವೇದದಲ್ಲಿ "ಆರ್ಯವಲ್ಲದ" ಟ ಠ ಡ ಢ ಣ ಗಳನ್ನು ಸೇರಿಸಿಕೊಂಡು, ಉಳಿಸಿಕೊಂಡರು ಅನ್ನುವುದು ನಂಬುವ ಮಾತೇ? ಬಹಳ ಹಿಂದೆ ಲಿಪಿ ಇರಲಿಲ್ಲ. ಲಿಪಿ ಬಂದ ನಂತರವೂ ಅದನ್ನು ಉಳಿಸಿಕೊಳ್ಳುವ ಬರೆಯುವ ಸಾಮಗ್ರಿಯ ಕೊರತೆ ಇತ್ತು. ಹಾಗಾಗಿ ಬರಹ ಬಂದ ನಂತರವೂ ಪದ್ಯ ಮಾರ್ಗದಲ್ಲಿ ಸೂತ್ರ ಮಾರ್ಗದಲ್ಲಿ ಪುಸ್ತಕಗಳನ್ನು ನೆನಪಿನಲ್ಲಿ ಉಳಿಸಿಕೊಳ್ಳುವ ಪ್ರಯತ್ನ ನಮ್ಮವರು ಮಾಡಿದ್ದಾರೆ, ಎಲ್ಲ ಭಾಷೆಗಳಲ್ಲಿ. ನಿಮ್ಮದೇ ವಾದಸರಣಿಯನ್ನು ನೋಡಿದರೆ, ಕನ್ನಡದ ತ್ರಿಪದಿಗಳಲ್ಲಿರುವ ನೂರಾರು ಜನಪದ ಪದ್ಯಗಳನ್ನು ಕೂಡ, "ಬೇರೆಯವರು ಕಲಿಯಬಾರದೆಂದು" ಪದ್ಯಗಳಲ್ಲಿ ಕಟ್ಟಿ, ಅದನ್ನು ಬರೆಯದೇ ಇಟ್ಟು, ಬಾಯಿಂದ ಬಾಯಿಗೆ ಹೋಗುವಂತೆ ಮಾಡಿದರು ಎಂದು ಹೇಳಬಹುದಲ್ಲ? ಇಲ್ಲೇ ಈ ವಾದ ಟೊಳ್ಳು ಅನ್ನುವುದು ಪ್ರಕಟವಾಗುತ್ತೆ. ಅಲ್ಲವೇ? ಭಾಷೆ, ಸಾಹಿತ್ಯ, ಸಂಸ್ಕೃತಿಗಳ ವಿದ್ಯಾರ್ಥಿಯಾಗಿ, ಓದುಗನಾಗಿ, ಅಭಿಮಾನಿಯಾಗಿ ಈ ಮಾತುಗಳನ್ನು ಹೇಳಬೇಕೆನಿಸಿತು. ನೀವು ಹೇಳಿದ್ದನ್ನೇ ವೇದವಾಕ್ಯವೆಂದು ನಂಬಿ ಅದನ್ನು ಹಂಚುವ ಹಲವರಿರುತ್ತಾರೆ. ಏಕೆಂದರೆ ಎಲ್ಲರಿಗೂ ಸ್ವಂತ ಅಧ್ಯಯನ ಕಷ್ಟಸಾಧ್ಯ. ಹಾಗಾಗಿ, ಬೇರೆಯವರ ಒಳಿತಿಗಾಗಿಯಾದರೂ, ಬೇಕಾದ ಎಚ್ಚರಿಕೆಯನ್ನು ನೀವು ವಹಿಸುತ್ತೀರೆಂದು ನಾನು ನಂಬಿರುವೆ. (೨) ಸಂಸ್ಕೃತವೊಂದೇ ಏಕೆ, ಯಾವ ಭಾಷೆಗೂ ಮೊದಲು ಲಿಪಿಯಿರಲಿಲ್ಲ (ಇರುವುದಿಲ್ಲ) - ಏಕೆಂದರೆ ಮಾತು ಮೊದಲು ಬರೆಹ ನಂತರ. ಕನ್ನಡದ ಮೊದಲ ದಾಖಲೆ ಸಿಕ್ಕಿರುವುದು ಸಾಮಾನ್ಯಶಕ 2-3 ನೇ ಶತಮಾನದಲ್ಲಿ. ಅದಕ್ಕೆ ಮೊದಲು ಕನ್ನಡ ಇರಲಿಲ್ಲವೆಂದು ತಿಳಿಯೋಣವೇ? ಅಥವಾ ಆಗ ಬರವಣಿಗೆಗೆ ಕನ್ನಡವನು ಒಳಪಡಿಸಿದರು ಎಂದು ತಿಳಿಯೋಣವೇ? ಸಂಸ್ಕೃತಕ್ಕೂ ಹಾಗೇ. ಲಿಪಿಯಿಲ್ಲದ ಕಾಲ ಒಂದಿತ್ತು. ಒಂದು ಕಾಲದಲ್ಲಿ ಬರೆಹದ ಶಕ್ತಿಯನ್ನರಿತ ಮೇಲೆ, ಬರೆವಣಿಗೆ ಬಂದಿತು. ಅದು ಬಂದ ನಂತರವೂ ಮೌಖಿಕ ಪರಂಪರೆಯೂ ಜೊತೆಗೇ ಮುಂದುವರೆಯಿತು. ಮುದ್ರಣ ಸಾಧ್ಯವಾಗುವತನಕ ನೆನಪಿನಲ್ಲಿಡುವುದಕ್ಕೆ ಇರುತ್ತಿದ್ದ ಹೆಚ್ಚಾಯ ತಿಳಿದೇ ಇದೆ. #ಪಾಣಿನಿ ಯ ಕಾಲಕ್ಕಾಗಲೆ ಲಿಪಿ ಇತ್ತು ಎಂಬುದು ನಿರ್ವಿವಾದ. ಈ ಬಗ್ಗೆ ನೀವು ವಾಸುದೇವ ಶರಣ ಅಗ್ರವಾಲ ಅವರ India as known to Panini ಪುಸ್ತಕವನ್ನು ಓದಬಹುದು. ವ್ಯಾಸ #ವಾಲ್ಮೀಕಿ ಯರು ಬರಹವನ್ನು ಪ್ರಸ್ತಾಪ ಮಾಡಿಲ್ಲ -ಆರ್ಷ ಕವಿಗಳು ಪಾಣಿನಿಗೂ ಹಿಂದಿನವರಾದ್ದರಿಂದ ಅವರ ಕಾಲದಲ್ಲಿ ಬರವಣಿಗೆ ರೂಢಿಗೆ ಬಂದಿಲ್ಲದಿದ್ದಿರಬಹುದೆಂಬ ಊಹೆಯನ್ನು ನಾವು ಮಾಡಬಹುದು. #ಚಾಣಕ್ಯ ನ ಅರ್ಥಶಾಸ್ತ್ರವು ಲೆಕ್ಕ ಪತ್ರಗಳನ್ನು ಬರೆದಿಡುವ ವಿಷಯವನ್ನು ಹೇಳುತ್ತದೆ. ಲಿಪಿಯಿಲ್ಲದೇ ಇದು ಸಾಧ್ಯವೇ? ಹಾಗಾಗಿ ಭಾರತದ ಇನ್ನಾವ ಭಾಷೆಗೂ ಮೊದಲೇ ಸಂಸ್ಕೃತವನ್ನು ಬರೆಯುತ್ತಿದ್ದರು ಅಂತ ಖಚಿತವಾಗಿ ಹೇಳಬಹುದು. ಸಿಕ್ಕಿರುವ ಮೊದಮೊದಲ ಶಾಸನಗಳು ಪ್ರಾಕೃತದವು, ಆದರೆ ಪ್ರಾಕೃತವೂ ಸಂಸ್ಕೃತದ್ದೇ ಛಾಯೆ. ಖಾತ್ರಿಯಾಗಿ ಹೇಳಬಹುದೇನೆಂದರೆ ಮೊದಮೊದಲ #ಶಿಲಾಶಾಸನ ಗಳಲ್ಲಿ ಪ್ರಾಕೃತ ಬಳಸಿ ಒಂದೆರಡು ಶತಮಾನಗಳ ನಂತರ ಸಂಸ್ಕೃತ ಬಳಸಿದ್ದಾರೆ ಎಂದು ಅಷ್ಟೇ. ಅದಕ್ಕಿಂತ ಹೆಚ್ಚು ಏನು ಹೇಳಿದರೂ ಅದು ಊಹೆಯೇ. ಸಂಸ್ಕೃತಕ್ಕೂ #ದೇವನಾಗರಿ ಗೂ ಅಭೇದ ಕಲ್ಪಿಸಬೇಡಿ. ಸಂಸ್ಕೃತದ ಲಿಪಿಯೂ ದೇಶ ಕಾಲಗಳಿಗೆ ಬದಲಾಗುತ್ತಾ ಹೋಗಿದೆ. ದೊರಕಿರುವ ಇತಿಹಾಸವನ್ನು ನೋಡಿದರೆ ಮೊದಲು #ಬ್ರಾಹ್ಮೀ ( ಅದಕ್ಕೂ ಮೊದಲು ಯಾವುದಾದರೂ ಲಿಪಿ ಇದ್ದರೆ, ಪಾಣಿನಿಯ ಕಾಲದಲ್ಲಿ, ಅದು ನಮಗೆ ದೊರೆತಿಲ್ಲ. ಅಂದಹಾಗೆ ಬ್ರಾಹ್ಮೀ ಅನ್ನುವುದೂ ೧೯ನೇ ಶತಮಾನದಲ್ಲಿಟ್ಟ ಹೊಸ ಹೆಸರು, ೨0೦೦ ವರ್ಷಗಳ ಹಿಂದೆ ಆ ಲಿಪಿಗೆ ಹೆಸರಿತ್ತೇ, ಹೆಸರಿದ್ದರೆ ಏನು ಎಂಬುದೆಲ್ಲ ಊಹಾಪೋಹವಷ್ಟೇ). ನಂತರ #ಶಾರದಾ, #ವಂಗ, #ನಾಗರೀ, #ಸಿದ್ಧಂ, #ಗ್ರಂಥ, #ಕನ್ನಡ/#ತೆಲುಗು #ಮಲಯಾಳ #ತಿಗಳಾರಿ #ತಿಬೆಟ್ ಹೀಗೆ ಹತ್ತು ಹಲವು ಲಿಪಿಗಳಲ್ಲಿ ಬರೆದಿರುವುದು ಕಂಡುಬರುತ್ತರೆ. ಈ ಎಲ್ಲ ಲಿಪಿಗಳೂ ಬ್ರಾಹ್ಮಿಯು ಬದಲಾಗುತ್ತ ಬಂದ ಬೆಳವಣಿಗೆಯ ಹಂತಗಳೆಂದು ನೋಡಿದಾಗ ಸಂಸ್ಕೃತಕ್ಕೆ ಲಿಪಿಯಿಲ್ಲ ಎಂಬ ಮಾತಿಗೆ ಹುರುಳಿಲ್ಲವೆಂಬುದು ತಿಳಿಯುತ್ತದೆ. ಸಂಸ್ಕೃತವನ್ನು ಕೇವಲ ದೇವನಾಗರಿಯಲ್ಲಿ ಮಾತ್ರ ಬರೆಯುತ್ತಿರುವುದು ಇತ್ತೀಚಿನ ರೂಢಿ. ಏಕೆ ಸಂಸ್ಕೃತವನ್ನು ಹಲವು ಲಿಪಿಗಳಲ್ಲಿ ಬರೆವ ರೂಢಿ ಬಂತೆಂದರೆ ದೇಶ ವಿದೇಶಗಳ ವಿವಿಧ ಭಾಗಗಳಲ್ಲೂ ಸಂಸ್ಕೃತದಲ್ಲಿ ಉಪಯೋಗವೆನಿಸುವ ಶಾಸ್ತ್ರ-ಕಾವ್ಯ ಕೃತಿಗಳಿದ್ದದ್ದು. ಅಂಥ ಕೃತಿಗಳು ತಮಗೆ ಉಪಯುಕ್ತವೆಂದು ಸಂಸ್ಕೃತವನ್ನು (ಹೆಚ್ಚಾಗಿ) ಮಾತಾಡದ, ಅಥವಾ ಸಂಸ್ಕೃತ ಜನ್ಯವಾದ ಭಾಷೆಗಳನ್ನು ಮಾತಾಡ ಪ್ರದೇಶದ ಜನರೂ ಅರಿತಿದ್ದೇ ಅದಕ್ಕೆ ಕಾರಣ. ಆ ದಾರಿಯಲ್ಲಿ, ಒಂದೇ ಭಾಷೆಯನ್ನು ಬರೆಯಲು ತಮ್ಮ ತಮ್ಮ ಪ್ರದೇಶಗಳಲ್ಲಿ ಪ್ರಚಲಿತವಾದ ಲಿಪಿಗಳನ್ನು ಬಳಸಿದರು ಅಷ್ಟೇ. ಒಟ್ಟಿನಲ್ಲಿ ಹತ್ತು ಹನ್ನೆರಡನೇ ಶತಮಾನದವರೆಗೆ ದೇವನಾಗರಿ ಲಿಪಿ ಕಂಡುಬರುವುದಿಲ್ಲ ಎಂದ ಮಾತ್ರಕ್ಕೆ ಅಲ್ಲಿಯವರೆಗೆ ಸಂಸ್ಕೃತವನ್ನುಬರೆಯಲಿಲ್ಲ ಎಂದು ಅರ್ಥವಲ್ಲ. ಕನ್ನಡದ ಲಿಪಿಯೂ ಹೀಗೇ - ಮೊದಲಿಗೆ #ಕದಂಬ, ನಂತರ #ಚಾಲುಕ್ಯ , ನಂತರ #ಹೊಯ್ಸಳ, ನಂತರ #ವಿಜಯನಗರ ಹೀಗೆ ಕಾಲಕಾಲಕ್ಕೆ ಬದಲಾಗುತ್ತಬಂದದ್ದೇ. ಕದಂಬ ಚಾಲುಕ್ಯ ಲಿಪಿಗಳಲ್ಲಿ ಸಂಸ್ಕೃತ ತೆಲುಗು ಕನ್ನಡ ಮೂರೂ ಭಾಷೆಗಳನ್ನು ಬರೆದಿರುವುದನ್ನು ನೋಡುವಾಗ, ನಾವು ಐಹೊಳೆಯ ರವಿಕೀರ್ತಿ ಶಾಸನದ ಲಿಪಿಯನ್ನು "ಕನ್ನಡ" ಲಿಪಿ ಎಂದು ಹೇಳಿಕೊಳ್ಳುವುದು ಎಷ್ಟು ಸರಿ ಎಂಬ ಪ್ರಶ್ನೆ ನಾವೇ ಕೇಳಿಕೊಳ್ಳಬೇಕು! ಅದು ಒಂದುಸಾಮಾನ್ಯ ನೆಲೆಯಲ್ಲಿ ಸರಳವಾಗಿ ಹೇಳುವ ಮಾತಷ್ಟೇ. ಅದರಿಂದ ಸಂಸ್ಕೃತಕ್ಕೆ ಲಿಪಿಯಿರಲಿಲ್ಲವೆಂದಾಗಲಿ, ಸಂಸ್ಕೃತ ಬಲ್ಲವರು ಬರವಣಿಗೆಯನ್ನು ಧಿಕ್ಕರಿಸಿದರೆಂದಾಗಲೀ ಅಲ್ಲ. #PeggyMohan #WanderersKingsMerchants #Book #Review #Notes
1
11
2
22
1,391