ಹಲಸೂರು ಪೊಲೀಸ್ ಠಾಣೆ Halasuru Police Station (@halasoorps) header
ಹಲಸೂರು ಪೊಲೀಸ್ ಠಾಣೆ Halasuru Police Station (@halasoorps) profile picture

Official Twitter account of Halasuru Police Station (080-22942540) | Dial Namma -112 in case of emergency. | Help us to serve you better | @BlrCityPolice

India
Joined November 2015
ಹಲಸೂರು ಪೊಲೀಸ್ ಠಾಣೆ Halasuru Police Station retweeted
ಈ ದಿನ ಪೊಲೀಸ್ ಆಯುಕ್ತರು (ಉತ್ತರ) ರವರು ಮೇಕ್ರಿ ಸರ್ಕಲ್ ಹಾಗೂ ಜಯಮಹಲ್ ರಸ್ತೆಯಲ್ಲಿ ಸಂಚಾರ ವ್ಯವಸ್ಥೆಯನ್ನು ಖುದ್ದಾಗಿ ಪರಿಶೀಲಿಸಿದರು. ಈ ಸಂದರ್ಭದಲ್ಲಿ ವಾಹನಗಳ ಸುಗಮ ಸಂಚಾರ ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
1
8
7
2,197
ಹಲಸೂರು ಪೊಲೀಸ್ ಠಾಣೆ Halasuru Police Station retweeted
ದಿನಾಂಕ 25/11/2026 ರಂದು ಉತ್ತರ ವಿಭಾಗದ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ರಾತ್ರಿ ಫುಟ್ ಪೆಟ್ರೋಲಿಂಗ್ ನಡೆಸಿ, ಅಪರಾಧ ತಡೆಗಟ್ಟುವಿಕೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ತಪಾಸಣೆ ಕೈಗೊಳ್ಳಲಾಯಿತು. ಈ ವೇಳೆ 31 ಲಘು ಪ್ರಕರಣಗಳು, 45 COTPA ಪ್ರಕರಣಗಳು ಹಾಗೂ 02 COTPA FIR ಗಳನ್ನು ದಾಖಲಿಸಲಾಯಿತು.
5
4
958
ಹಲಸೂರು ಪೊಲೀಸ್ ಠಾಣೆ Halasuru Police Station retweeted
#OperationBrokenWindow | Day 3 ಇಂದಿರಾನಗರ ವಿಭಾಗದಾದ್ಯಂತ ಅಪರಾಧ ತಡೆಗೆ ವಿಶೇಷ ಕಾರ್ಯಾಚರಣೆ ನಡೆಸಿ, ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಕಾನೂನು ಪಾಲಿಸುವ ನಾಗರಿಕರಿಗೆ ರಕ್ಷಣೆ, ಕಾನೂನು ಉಲ್ಲಂಘಿಸುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ – ಇದೇ ನಮ್ಮ ಬದ್ಧತೆ.
7
6
610
ಹಲಸೂರು ಪೊಲೀಸ್ ಠಾಣೆ Halasuru Police Station retweeted
ಭಾರತಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿ, 150.43 ಗ್ರಾಂ MDMA ವಶಪಡಿಸಿಕೊಳ್ಳಲಾಗಿದ್ದು, ಇದರ ಅಂದಾಜು ಮೌಲ್ಯ ₹15 ಲಕ್ಷ ಹಾಗೂ ಮಾರುಕಟ್ಟೆ ಮೌಲ್ಯ ಸುಮಾರು ₹30 ಲಕ್ಷವಾಗಿದೆ. ಮಾದಕ ವಸ್ತುಗಳ ವಿರುದ್ಧ ಕಾರ್ಯಾಚರಣೆ ಮುಂದುವರಿಸಲಾಗಿದೆ. @CCP_Blr @DgpKarnataka @BlrCityPolice #SayNoToDrugs
8
5
392
ಹಲಸೂರು ಪೊಲೀಸ್ ಠಾಣೆ Halasuru Police Station retweeted
ಬೆಂಗಳೂರು ನಗರ ದಕ್ಷಿಣ ವಿಭಾಗದ ಆಡುಗೋಡಿ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯ ತ್ವರಿತ ಕಾರ್ಯಾಚರಣೆಯಿಂದ ಹಗಲು ವೇಳೆ ಮನೆ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಇಬ್ಬರು ಆರೋಪಿಗಳನ್ನು ದಸ್ತಗಿರಿ ಮಾಡಲಾಗಿದೆ. ಕಾರ್ಯಾಚರಣೆಯ ವೇಳೆ ಆರೋಪಿಗಳಿಂದ ಒಟ್ಟು 447 ಗ್ರಾಂ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸಿದ್ದ ಒಂದು ದ್ವಿಚಕ್ರ ವಾಹನವನ್ನು ಜಪ್ತಿ ಮಾಡಲಾಗಿದ್ದು, ವಶಪಡಿಸಿಕೊಳ್ಳಲಾದ ಒಟ್ಟು ಸ್ವತ್ತುಗಳ ಅಂದಾಜು ಮೌಲ್ಯ ₹57 ಲಕ್ಷ ಆಗಿರುತ್ತದೆ. ಆಡುಗೋಡಿ ಪೊಲೀಸ್ ಠಾಣೆಯ ತಂಡದ ಈ ಕರ್ತವ್ಯ ನಿಷ್ಠೆ ಹಾಗೂ ದಕ್ಷ ಕಾರ್ಯವೈಖರಿಯು ಪ್ರಶಂಸನೀಯವಾಗಿದೆ. Swift action by Adugodi Police Station, Bengaluru City South Division, has led to the arrest of two persons involved in a daytime house burglary. The police recovered 447 grams of gold jewellery and seized one two-wheeler, with the total value of the seized property amounting to ₹57 lakh. Commendable work by the Adugodi Police team. #SouthBengaluruPolice #BengaluruCityPolice #PublicSafety #pressconference @BlrCityPolice @CCP_Blr @Vamsikrishnaips @KarnatakaCops
🤖 Made with AI
26
41
3,236
ಹಲಸೂರು ಪೊಲೀಸ್ ಠಾಣೆ Halasuru Police Station retweeted
ಉತ್ತರ ವಿಭಾಗದ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ “ರೈಸ್” ಮತ್ತು “ಬೇಡ ಬ್ರೋ” ಅಭಿಯಾನದಡಿ 36 ಶಾಲಾ-ಕಾಲೇಜುಗಳು ಹಾಗೂ 50 ಪಿಜಿಗಳಿಗೆ ಭೇಟಿ ನೀಡಿ ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಲಾಯಿತು. ಇದೇ ವೇಳೆ, 162 ಅಂಗಡಿಗಳ ತಪಾಸಣೆ ನಡೆಸಿ 153 ಲಘು ಪ್ರಕರಣಗಳು, 346 COTPA ಪ್ರಕರಣಗಳು ಹಾಗೂ 13 COTPA FIR ದಾಖಲಿಸಲಾಯಿತು.
2
6
4
822
ಮಾನ್ಯ ಡಿಸಿಪಿ ಸಾಹೇಬರು ಹಲಸೂರು ಪೊಲೀಸ್ ಠಾಣೆಗೆ ಭೇಟಿ ನೀಡಿ, ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಜನಸ್ನೇಹಿ ಪೊಲೀಸ್ ಸೇವೆ, ಸಾರ್ವಜನಿಕರ ದೂರುಗಳಿಗೆ ತ್ವರಿತ ಸ್ಪಂದನೆ, ಅಪರಾಧ ತಡೆ, ಸೈಬರ್ ಅಪರಾಧ ನಿಯಂತ್ರಣ, ರೌಡಿ ಚಟುವಟಿಕೆಗಳ ನಿಗ್ರಹ ಹಾಗೂ ಮಾದಕ ವಸ್ತುಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಕುರಿತು ಸೂಕ್ತ ಮಾರ್ಗದರ್ಶನ ನೀಡಿದರು
23
ಹಲಸೂರು ಪೊಲೀಸ್ ಠಾಣೆ Halasuru Police Station retweeted
#ಬೆಂಗಳೂರು ನಗರದ ನೂತನ ಕೇಂದ್ರ ಪೊಲೀಸ್ ಆಯುಕ್ತರಾದ ಮಾನ್ಯ ಶ್ರೀ ಲಾಭು ರಾಮ್, IPS ರವರಿಗೆ ಹೃತ್ಪೂರ್ವಕ ಅಭಿನಂದನೆಗಳು ಹಾಗೂ ಸ್ವಾಗತ. ಇಂದು ನೂತನ ಕೇಂದ್ರ ಪೊಲೀಸ್ ಆಯುಕ್ತರಾದ ಶ್ರೀ ಲಾಭುರಾಮ್,IPS ರವರು ಇಂದಿರಾನಗರ ವಿಭಾಗದ ಅಧಿಕಾರಿಗಳೊಂದಿಗೆ ಅಪರಾಧ ತಡೆ,ಪತ್ತೆ ಹಾಗೂ ತನಿಖೆ ಕುರಿತು ಪರಿಶೀಲಿಸಿ ಅಗತ್ಯ ಸಲಹೆ-ಸೂಚನೆಗಳನ್ನು ನೀಡಿದರು.
1
10
12
1,610
ಹಲಸೂರು ಪೊಲೀಸ್ ಠಾಣೆ Halasuru Police Station retweeted
#ಮಾನ್ಯ ಉಪ ಪೊಲೀಸ್ ಆಯುಕ್ತರು, ಕೇಂದ್ರ ವಿಭಾಗ, ಬೆಂಗಳೂರು ನಗರ ರವರ ಮಾರ್ಗದರ್ಶನದಲ್ಲಿ ಎಂ.ಜಿ. ರಸ್ತೆ, ಚರ್ಚ್ ಸ್ಟ್ರೀಟ್ ಹಾಗೂ #ಬ್ರಿಗೇಡ್ ರಸ್ತೆಗಳ ವ್ಯಾಪ್ತಿಯಲ್ಲಿ ಮಾದಕ ವಸ್ತುಗಳ ವಿರುದ್ಧ ಜಾಗೃತಿ ಮೂಡಿಸುವ ಕಾರ್ಯಾಚರಣೆ ಮುಂದುವರಿದಿದೆ. #ಯುವಜನತೆಯನ್ನು ಮಾದಕ ವ್ಯಸನದಿಂದ ದೂರವಿರಿಸಿ, ಆರೋಗ್ಯಕರ ಹಾಗೂ ಮಾದಕ ವಸ್ತು ಮುಕ್ತ ಸಮಾಜ ನಿರ್ಮಿಸುವುದು ನಮ್ಮೆಲ್ಲರ ಸಂಕಲ್ಪ. #ಮಾದಕ ವಸ್ತುಗಳ ಸೇವನೆ, ಮಾರಾಟ ಮತ್ತು ಸಾಗಾಣಿಕೆಯ ವಿರುದ್ಧ ಜಾಗೃತರಾಗಿರಿ. ಇಂತಹ ಚಟುವಟಿಕೆಗಳ ಕುರಿತು ಯಾವುದೇ ಮಾಹಿತಿ ಲಭ್ಯವಿದ್ದಲ್ಲಿ ಪೊಲೀಸರಿಗೆ ತಿಳಿಸಿ. #DRUGSಬೇಡBRO – SAY NO TO DRUGS, YES TO LIFE! #DrugsBedaBro #DrugFreeSociety #SayNoToDrugs #BengaluruCityPolice #CentralDivision
9
1
19
1,284
EMERGENCY HELPLINE 112 ತುರ್ತು ಪರಿಸ್ಥಿತಿಯಲ್ಲಿ ತಕ್ಷಣ ಕರೆ ಮಾಡಿ!
9
ಹಲಸೂರು ಪೊಲೀಸ್ ಠಾಣೆ Halasuru Police Station retweeted
11
13
2,401
ಈ ದಿನ ಹಗಲು ಕರ್ತವ್ಯದ ಅಧಿಕಾರಿ ಮತ್ತು ಸಿಬ್ಬಂದಿಗಳ ಹಾಜರಾತಿ ಪಡೆದುಕೊಂಡು ಹಿರಿಯ ಅಧಿಕಾರಿಗಳ ಸಲಹೆ ಸೂಚನೆಗಳನ್ನು ಹಾಗೂ ಠಾಣಾ ಸರಹದ್ದಿನಲ್ಲಿ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ನೋಡಿಕೊಳ್ಳುವಂತೆ ತಿಳಿಸಲಾಯಿತು. @BlrCityPolice @DcpIndiranagar @AcpHalasuru
25
ತುರ್ತು ಸಂದರ್ಭಗಳಲ್ಲಿ ತಕ್ಷಣದ ನೆರವು ಪಡೆಯಲು ಈ ಪ್ರಮುಖ ಸಹಾಯವಾಣಿ ಸಂಖ್ಯೆಗಳನ್ನು ಸದಾ ನೆನಪಿನಲ್ಲಿಟ್ಟುಕೊಳ್ಳಿ: 📞 112 – ತುರ್ತು ಪೊಲೀಸ್ ಸಹಾಯವಾಣಿ 📞 1930 – ಸೈಬರ್ ಹಣಕಾಸು ವಂಚನೆ ಸಹಾಯವಾಣಿ 📞 1933 (MANAS) – ಮಾದಕ ವಸ್ತುಗಳಿಗೆ ಸಂಬಂಧಿಸಿದ ಮಾಹಿತಿ ಹಾಗೂ ನೆರವಿಗಾಗಿ ಸಹಾಯವಾಣಿ.
13
ಮಾದಕ ವಸ್ತುಗಳು ಜೀವನಕ್ಕೆ ಚೈತನ್ಯ ನೀಡುವುದಿಲ್ಲ; ಬದಲಾಗಿ ಅವು ನಿಮ್ಮ ಕನಸುಗಳು, ಆರೋಗ್ಯ ಮತ್ತು ಭವಿಷ್ಯವನ್ನು ನಿಧಾನವಾಗಿ ನಾಶಪಡಿಸುತ್ತವೆ. ವ್ಯಸನವು ನಿಮ್ಮ ಜೀವನವನ್ನು ನಿಯಂತ್ರಿಸಲು ಅವಕಾಶ ನೀಡಬೇಡಿ. ಮಾದಕವಸ್ತುಗಳ ಬದಲಾಗಿ, ಆಶಾದಾಯಕ ಭವಿಷ್ಯವನ್ನು ಆಯ್ಕೆ ಮಾಡಿಕೊಳ್ಳಿ. ಮಾದಕವಸ್ತುಗಳನ್ನು ತಿರಸ್ಕರಿಸಿ, ಜೀವನವನ್ನು ಸ್ವೀಕರಿಸಿ.
5
ನಮ್ಮ ಠಾಣಾ ವ್ಯಾಪ್ತಿಯಲ್ಲಿ ಕಳೆದುಹೋದ ಮೊಬೈಲ್ ಫೋನ್‌ಗಳನ್ನು #CEIR_Portal ಮೂಲಕ ಪತ್ತೆ ಮಾಡಿದ ಮೊಬೈಲ್‌ಗಳನ್ನು ಈ ದಿನ ಮೂಲ ವಾರಸುದಾರರನ್ನು ಸಂಪರ್ಕಿಸಿ ಅವರಿಗೆ ಹಸ್ತಾಂತರಿಸಲಾಯಿತು.@BlrCityPolice @DcpEastBcp @AcpHalasuru #halasurupolice #CEIR #LostMobileRecovery #BengaluruPolice #PublicService
23