
Official Twitter account of Halasuru Police Station (080-22942540) | Dial Namma -112 in case of emergency. | Help us to serve you better | @BlrCityPolice
India
Joined November 2015
- Tweets8.4K
- Following228
- Followers798
- Likes2.7K
ಹಲಸೂರು ಪೊಲೀಸ್ ಠಾಣೆ Halasuru Police Station retweeted
ಈ ದಿನ ಪೊಲೀಸ್ ಆಯುಕ್ತರು (ಉತ್ತರ) ರವರು ಮೇಕ್ರಿ ಸರ್ಕಲ್ ಹಾಗೂ ಜಯಮಹಲ್ ರಸ್ತೆಯಲ್ಲಿ ಸಂಚಾರ ವ್ಯವಸ್ಥೆಯನ್ನು ಖುದ್ದಾಗಿ ಪರಿಶೀಲಿಸಿದರು. ಈ ಸಂದರ್ಭದಲ್ಲಿ ವಾಹನಗಳ ಸುಗಮ ಸಂಚಾರ ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಹಲಸೂರು ಪೊಲೀಸ್ ಠಾಣೆ Halasuru Police Station retweeted
ದಿನಾಂಕ 25/11/2026 ರಂದು ಉತ್ತರ ವಿಭಾಗದ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ರಾತ್ರಿ ಫುಟ್ ಪೆಟ್ರೋಲಿಂಗ್ ನಡೆಸಿ, ಅಪರಾಧ ತಡೆಗಟ್ಟುವಿಕೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ತಪಾಸಣೆ ಕೈಗೊಳ್ಳಲಾಯಿತು.
ಈ ವೇಳೆ 31 ಲಘು ಪ್ರಕರಣಗಳು, 45 COTPA ಪ್ರಕರಣಗಳು ಹಾಗೂ 02 COTPA FIR ಗಳನ್ನು ದಾಖಲಿಸಲಾಯಿತು.
ಹಲಸೂರು ಪೊಲೀಸ್ ಠಾಣೆ Halasuru Police Station retweeted
#OperationBrokenWindow | Day 3
ಇಂದಿರಾನಗರ ವಿಭಾಗದಾದ್ಯಂತ ಅಪರಾಧ ತಡೆಗೆ ವಿಶೇಷ ಕಾರ್ಯಾಚರಣೆ ನಡೆಸಿ, ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.
ಕಾನೂನು ಪಾಲಿಸುವ ನಾಗರಿಕರಿಗೆ ರಕ್ಷಣೆ, ಕಾನೂನು ಉಲ್ಲಂಘಿಸುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ – ಇದೇ ನಮ್ಮ ಬದ್ಧತೆ.
ಹಲಸೂರು ಪೊಲೀಸ್ ಠಾಣೆ Halasuru Police Station retweeted
ಭಾರತಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿ, 150.43 ಗ್ರಾಂ MDMA ವಶಪಡಿಸಿಕೊಳ್ಳಲಾಗಿದ್ದು, ಇದರ ಅಂದಾಜು ಮೌಲ್ಯ ₹15 ಲಕ್ಷ ಹಾಗೂ ಮಾರುಕಟ್ಟೆ ಮೌಲ್ಯ ಸುಮಾರು ₹30 ಲಕ್ಷವಾಗಿದೆ. ಮಾದಕ ವಸ್ತುಗಳ ವಿರುದ್ಧ ಕಾರ್ಯಾಚರಣೆ ಮುಂದುವರಿಸಲಾಗಿದೆ.
@CCP_Blr @DgpKarnataka @BlrCityPolice #SayNoToDrugs
ಹಲಸೂರು ಪೊಲೀಸ್ ಠಾಣೆ Halasuru Police Station retweeted
ಬೆಂಗಳೂರು ನಗರ ದಕ್ಷಿಣ ವಿಭಾಗದ ಆಡುಗೋಡಿ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯ ತ್ವರಿತ ಕಾರ್ಯಾಚರಣೆಯಿಂದ ಹಗಲು ವೇಳೆ ಮನೆ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಇಬ್ಬರು ಆರೋಪಿಗಳನ್ನು ದಸ್ತಗಿರಿ ಮಾಡಲಾಗಿದೆ.
ಕಾರ್ಯಾಚರಣೆಯ ವೇಳೆ ಆರೋಪಿಗಳಿಂದ ಒಟ್ಟು 447 ಗ್ರಾಂ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸಿದ್ದ ಒಂದು ದ್ವಿಚಕ್ರ ವಾಹನವನ್ನು ಜಪ್ತಿ ಮಾಡಲಾಗಿದ್ದು, ವಶಪಡಿಸಿಕೊಳ್ಳಲಾದ ಒಟ್ಟು ಸ್ವತ್ತುಗಳ ಅಂದಾಜು ಮೌಲ್ಯ ₹57 ಲಕ್ಷ ಆಗಿರುತ್ತದೆ.
ಆಡುಗೋಡಿ ಪೊಲೀಸ್ ಠಾಣೆಯ ತಂಡದ ಈ ಕರ್ತವ್ಯ ನಿಷ್ಠೆ ಹಾಗೂ ದಕ್ಷ ಕಾರ್ಯವೈಖರಿಯು ಪ್ರಶಂಸನೀಯವಾಗಿದೆ.
Swift action by Adugodi Police Station, Bengaluru City South Division, has led to the arrest of two persons involved in a daytime house burglary.
The police recovered 447 grams of gold jewellery and seized one two-wheeler, with the total value of the seized property amounting to ₹57 lakh.
Commendable work by the Adugodi Police team.
#SouthBengaluruPolice #BengaluruCityPolice #PublicSafety #pressconference
@BlrCityPolice @CCP_Blr @Vamsikrishnaips @KarnatakaCops
🤖 Made with AI
ಹಲಸೂರು ಪೊಲೀಸ್ ಠಾಣೆ Halasuru Police Station retweeted
ಉತ್ತರ ವಿಭಾಗದ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ “ರೈಸ್” ಮತ್ತು “ಬೇಡ ಬ್ರೋ” ಅಭಿಯಾನದಡಿ 36 ಶಾಲಾ-ಕಾಲೇಜುಗಳು ಹಾಗೂ 50 ಪಿಜಿಗಳಿಗೆ ಭೇಟಿ ನೀಡಿ ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಲಾಯಿತು.
ಇದೇ ವೇಳೆ, 162 ಅಂಗಡಿಗಳ ತಪಾಸಣೆ ನಡೆಸಿ 153 ಲಘು ಪ್ರಕರಣಗಳು, 346 COTPA ಪ್ರಕರಣಗಳು ಹಾಗೂ 13 COTPA FIR ದಾಖಲಿಸಲಾಯಿತು.
ಹಲಸೂರು ಪೊಲೀಸ್ ಠಾಣೆ Halasuru Police Station retweeted
#ಬೆಂಗಳೂರು ನಗರದ ನೂತನ ಕೇಂದ್ರ ಪೊಲೀಸ್ ಆಯುಕ್ತರಾದ ಮಾನ್ಯ ಶ್ರೀ ಲಾಭು ರಾಮ್, IPS ರವರಿಗೆ ಹೃತ್ಪೂರ್ವಕ ಅಭಿನಂದನೆಗಳು ಹಾಗೂ ಸ್ವಾಗತ.
ಇಂದು ನೂತನ ಕೇಂದ್ರ ಪೊಲೀಸ್ ಆಯುಕ್ತರಾದ ಶ್ರೀ ಲಾಭುರಾಮ್,IPS ರವರು ಇಂದಿರಾನಗರ ವಿಭಾಗದ ಅಧಿಕಾರಿಗಳೊಂದಿಗೆ ಅಪರಾಧ ತಡೆ,ಪತ್ತೆ ಹಾಗೂ ತನಿಖೆ ಕುರಿತು ಪರಿಶೀಲಿಸಿ ಅಗತ್ಯ ಸಲಹೆ-ಸೂಚನೆಗಳನ್ನು ನೀಡಿದರು.
ಹಲಸೂರು ಪೊಲೀಸ್ ಠಾಣೆ Halasuru Police Station retweeted
#ಮಾನ್ಯ ಉಪ ಪೊಲೀಸ್ ಆಯುಕ್ತರು, ಕೇಂದ್ರ ವಿಭಾಗ, ಬೆಂಗಳೂರು ನಗರ ರವರ ಮಾರ್ಗದರ್ಶನದಲ್ಲಿ ಎಂ.ಜಿ. ರಸ್ತೆ, ಚರ್ಚ್ ಸ್ಟ್ರೀಟ್ ಹಾಗೂ #ಬ್ರಿಗೇಡ್ ರಸ್ತೆಗಳ ವ್ಯಾಪ್ತಿಯಲ್ಲಿ ಮಾದಕ ವಸ್ತುಗಳ ವಿರುದ್ಧ ಜಾಗೃತಿ ಮೂಡಿಸುವ ಕಾರ್ಯಾಚರಣೆ ಮುಂದುವರಿದಿದೆ.
#ಯುವಜನತೆಯನ್ನು ಮಾದಕ ವ್ಯಸನದಿಂದ ದೂರವಿರಿಸಿ, ಆರೋಗ್ಯಕರ ಹಾಗೂ ಮಾದಕ ವಸ್ತು ಮುಕ್ತ ಸಮಾಜ ನಿರ್ಮಿಸುವುದು ನಮ್ಮೆಲ್ಲರ ಸಂಕಲ್ಪ.
#ಮಾದಕ ವಸ್ತುಗಳ ಸೇವನೆ, ಮಾರಾಟ ಮತ್ತು ಸಾಗಾಣಿಕೆಯ ವಿರುದ್ಧ ಜಾಗೃತರಾಗಿರಿ. ಇಂತಹ ಚಟುವಟಿಕೆಗಳ ಕುರಿತು ಯಾವುದೇ ಮಾಹಿತಿ ಲಭ್ಯವಿದ್ದಲ್ಲಿ ಪೊಲೀಸರಿಗೆ ತಿಳಿಸಿ.
#DRUGSಬೇಡBRO – SAY NO TO DRUGS, YES TO LIFE!
#DrugsBedaBro #DrugFreeSociety #SayNoToDrugs #BengaluruCityPolice #CentralDivision
ಹಲಸೂರು ಪೊಲೀಸ್ ಠಾಣೆ Halasuru Police Station retweeted
ಬೆಂಗಳೂರು ನಗರ ಮುಖ್ಯ ಪೊಲೀಸ್ ಆಯುಕ್ತರಾಗಿ ಅಧಿಕಾರ ಸ್ವೀಕರಿಸಲು ನನಗೆ ಅತೀವ ಗೌರವ ಮತ್ತು ಹೆಮ್ಮೆ ಎನಿಸುತ್ತಿದೆ.
ಆಳವಾದ ಜವಾಬ್ದಾರಿಯ ಅರಿವಿನೊಂದಿಗೆ, ಬೆಂಗಳೂರಿನ ಜನತೆಯ ಸೇವೆ ಮಾಡಲು, ಸಾರ್ವಜನಿಕರ ವಿಶ್ವಾಸವನ್ನು ಮತ್ತಷ್ಟು ಗಟ್ಟಿಗೊಳಿಸಲು, ಪ್ರತಿಯೊಬ್ಬ ನಾಗರಿಕನ ಸುರಕ್ಷತೆ ಮತ್ತು ಭದ್ರತೆಯನ್ನು ಖಚಿತಪಡಿಸಲು ಹಾಗೂ ಸುರಕ್ಷಿತ, ಭದ್ರ ಮತ್ತು ನಾಗರಿಕ ಸ್ನೇಹಿ ನಗರವನ್ನಾಗಿ ರೂಪಿಸುವ ನಿಟ್ಟಿನಲ್ಲಿ ಶ್ರಮಿಸಲು ನಾನು ಎದುರು ನೋಡುತ್ತಿದ್ದೇನೆ.
ನಾವೆಲ್ಲರೂ ಒಟ್ಟಾಗಿ, ಸುರಕ್ಷತೆ, ವಿಶ್ವಾಸ ಮತ್ತು ಸೇವೆಗೆ ಮೊದಲ ಆದ್ಯತೆ ನೀಡುವ ಬೆಂಗಳೂರನ್ನು ನಿರ್ಮಿಸುವುದನ್ನು ಮುಂದುವರಿಸೋಣ.
I am honoured and privileged to assume charge as the Chief Commissioner of Police, Bengaluru City.
With a deep sense of responsibility, I look forward to serving the people of Bengaluru, strengthening public trust, ensuring the safety and security of every citizen, and working towards a safer, more secure and citizen-friendly city.
Together, let us continue building a Bengaluru where safety, trust and service remain our foremost priorities.
#HonouredToServe #ServingBengaluru #BengaluruCityPolice #PublicSafety #PeopleFirst
ಹಲಸೂರು ಪೊಲೀಸ್ ಠಾಣೆ Halasuru Police Station retweeted
ನಾಗರಿಕ ಬಂಧುಗಳಿಗೆ ಗೌರವಪೂರ್ವಕ ನಮಸ್ಕಾರ. 🙏🏽
ಸದ್ಯ ಬೆಂಗಳೂರಿನ ಇಂದಿರಾನಗರ ವಿಭಾಗದ ಡೆಪ್ಯುಟಿ ಕಮಿಷನರ್ ಆಫ್ ಪೊಲೀಸ್ ಆಗಿ ದಿನಾಂಕ 19/11/26 ರಂದು ಅಧಿಕಾರ ವಹಿಸಿಕೊಂಡಿದ್ದೇನೆಂದು ತಮಗೆ ತಿಳಿಸಲು ನನಗೆ ಸಂತೋಷವಾಗುತ್ತಿದೆ.
ಹಲಸೂರು ಪೊಲೀಸ್ ಠಾಣೆ Halasuru Police Station retweeted
ಇನ್‌ಸ್ಟಾಗ್ರಾಮ್ ವಿಡಿಯೋ ಒಂದರಲ್ಲಿ ಹಸುವೊಂದು ಠಾಣಾ ವ್ಯಾಪ್ತಿಯ ಕಸದ ರಾಶಿಯಲ್ಲಿ ಮಲಗಿದ್ದ ಹಸುವನ್ನು ಗಮನಿಸಿದ ತಕ್ಷಣ ಸ್ಥಳಕ್ಕೆ ಧಾವಿಸಿ ಹಸುವನ್ನು ಸುರಕ್ಷಿತವಾಗಿ ರಕ್ಷಿಸಿಸಿ ಬಳಿಕ ಹೆಚ್ಚಿನ ಆರೈಕೆ ಮತ್ತು ಪೋಷಣೆಗಾಗಿ ಮಹಾದೇವಪುರದ ಗೋಶಾಲೆಗೆ ಕಳುಹಿಸಿಕೊಡಲಾಯಿತು.@acppnagar @DcpEastBcp @CPBlr @AddlCPEast @CCBBangalore
ಹಲಸೂರು ಪೊಲೀಸ್ ಠಾಣೆ Halasuru Police Station retweeted
ಪೂರ್ವ ವಿಭಾಗದ ಉಪ ಪೊಲೀಸ್ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡಿದ್ದೇನೆ. ಸಾರ್ವಜನಿಕರ ಸುರಕ್ಷತೆ, ಪರಿಣಾಮಕಾರಿ ಪೊಲೀಸ್ ಸೇವೆ ಹಾಗೂ ಸಾರ್ವಜನಿಕರ ವಿಶ್ವಾಸವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಸಮರ್ಪಣೆ ಮತ್ತು ಕರ್ತವ್ಯನಿಷ್ಠೆಯಿಂದ ಕಾರ್ಯನಿರ್ವಹಿಸಲಿದ್ದೇನೆ.
– ಡಾ. ಗೀತ.ಎಂ.ಎಸ್.IPS
@DgpKarnataka @BlrCityPolice @CPBlr
ಹಲಸೂರು ಪೊಲೀಸ್ ಠಾಣೆ Halasuru Police Station retweeted
ದೀಪಗಳೊಂದಿಗೆ ದೀಪಾವಳಿಯ ಸಂಭ್ರಮ, ನಗು ಮತ್ತು ಒಗ್ಗಟ್ಟಿನ ಕ್ಷಣಗಳು!
ದಕ್ಷಿಣ ಪಶ್ಚಿಮ ವಿಭಾಗದ ಡಿಸಿಪಿ ಡಾ. ಎಸ್. ಕೆ. ಸೌಮ್ಯಲತಾ, ಐಪಿಎಸ್ ಅವರು ಇತರ ಪೊಲೀಸ್ ಅಧಿಕಾರಿಗಳೊಂದಿಗೆ ಸಿಎಆರ್ (CAR) ಪ್ರಧಾನ ಕಚೇರಿಯಲ್ಲಿ ಪೊಲೀಸ್ ಸಿಬ್ಬಂದಿ ಹಾಗೂ ಅವರ ಕುಟುಂಬದವರೊಂದಿಗೆ ಸೇರಿ ದೀಪಾವಳಿ ಹಬ್ಬವನ್ನು ಆಚರಿಸಿದರು.
ಸಾಂಪ್ರದಾಯಿಕ ದೀಪಗಳನ್ನು ಬೆಳಗಿಸುವುದರಿಂದ ಹಿಡಿದು ಮಕ್ಕಳೊಂದಿಗೆ ಹಬ್ಬದ ಸಂತೋಷವನ್ನು ಹಂಚಿಕೊಳ್ಳುವವರೆಗೆ, ಈ ಆಚರಣೆಯು ಕಳಕಳಿ, ಸಂತೋಷ ಮತ್ತು ಒಗ್ಗಟ್ಟಿನಿಂದ ಕಂಗೊಳಿಸಿತು.
ಒಂದೇ ಪೊಲೀಸ್ ಕುಟುಂಬ, ಅಸಂಖ್ಯಾತ ನಗುಗಳು ಮತ್ತು ಎಂದೆಂದೂ ನೆನಪಿನಲ್ಲಿ ಉಳಿಯುವಂತಹ ಆಚರಣೆ!
Lighting Up Diwali with Smiles and Togetherness!
Dr. S. K. Soumyalatha, IPS, DCP South West, along with other police officers, joined police personnel and their families at CAR Headquarters to celebrate the festival of lights.
From lighting traditional lamps to sharing festive joy with children, the celebration was filled with warmth, happiness and togetherness.
One police family, countless smiles and a celebration to remember!
#DiwaliCelebrations #PoliceFamily #BengaluruCityPolice
@CPBlr
@seemantsingh96
@DgpKarnataka
@KarnatakaCops
@Jointcptraffic
@CMofKarnataka
@PriyankKharge
ಹಲಸೂರು ಪೊಲೀಸ್ ಠಾಣೆ Halasuru Police Station retweeted
ದೀಪಾವಳಿ ಹಬ್ಬವನ್ನು ಸುರಕ್ಷಿತವಾಗಿ ಹಾಗೂ ಜವಾಬ್ದಾರಿಯುತವಾಗಿ ಆಚರಿಸೋಣ. ಪಟಾಕಿ ಮಾರಾಟಗಾರರು ಮತ್ತು ಸಾರ್ವಜನಿಕರು ಕಡ್ಡಾಯ ಸುರಕ್ಷತಾ ಮಾರ್ಗಸೂಚಿಗಳನ್ನು ಪಾಲಿಸುವ ಮೂಲಕ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದಿರಲಿ. ಎಲ್ಲರಿಗೂ ಸುರಕ್ಷಿತ ಹಾಗೂ ಸಂತೋಷದ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು! 🪔
#HappyDeepavali @DgpKarnataka
ಹಲಸೂರು ಪೊಲೀಸ್ ಠಾಣೆ Halasuru Police Station retweeted
ಪೂರ್ವ ವಿಭಾಗದ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಸಾರ್ವಜನಿಕರು ಕಳೆದುಕೊಂಡಿದ್ದ ಮೊಬೈಲ್ ಫೋನ್‌ಗಳನ್ನು 📱 #CEIR ಪೋರ್ಟಲ್ ಮೂಲಕ ಪತ್ತೆಹಚ್ಚಿ, ಸರಳ ಕಾನೂನು ಕ್ರಮಗಳನ್ನು ಪೂರ್ಣಗೊಳಿಸಿದ ಬಳಿಕ ಸಂಬಂಧಿತ ಮಾಲೀಕರಿಗೆ ಹಿಂದಿರುಗಿಸಲಾಗಿರುತ್ತದೆ.
@DgpKarnataka #MobileRecovery #PublicAwareness #StayAlert
@CPBlr
ಹಲಸೂರು ಪೊಲೀಸ್ ಠಾಣೆ Halasuru Police Station retweeted
ಈ ದಿನ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ತನಿಖಾ ಕೌಶಲ್ಯ ವೃದ್ಧಿ ಹಾಗೂ ಆಧುನಿಕ ತನಿಖಾ ವಿಧಾನಗಳ ಅಳವಡಿಕೆಗೆ ವಿಶೇಷ ತರಬೇತಿ ಕಾರ್ಯಾಗಾರ ಆಯೋಜಿಸಲಾಯಿತು. SOCO, ಸೈಬರ್, ಸಾಮಾಜಿಕ ಮಾಧ್ಯಮ, NDPS ಹಾಗೂ ವರದಕ್ಷಿಣೆ ಪ್ರಕರಣಗಳ ತನಿಖೆ ಕುರಿತು ಪ್ರಾಯೋಗಿಕ ತರಬೇತಿ ನೀಡಲಾಯಿತು.
@BlrCityPolice
@DgpKarnataka
@AddlCPEast
@CPBlr
ಹಲಸೂರು ಪೊಲೀಸ್ ಠಾಣೆ Halasuru Police Station retweeted
ಪೊಲೀಸ್ ಹುತಾತ್ಮರ ದಿನದಂದು, ಕರ್ತವ್ಯದ ಹಾದಿಯಲ್ಲಿ ಪ್ರಾಣತ್ಯಾಗ ಮಾಡಿದ ವೀರ ಪೊಲೀಸ್ ಸಿಬ್ಬಂದಿಗೆ ಗೌರವಪೂರ್ವಕ ನಮನಗಳು. ಅವರ ಧೈರ್ಯ, ತ್ಯಾಗ ಮತ್ತು ಸೇವೆ ಸದಾ ಸ್ಮರಣೀಯ. ವೀರರ ತ್ಯಾಗ ಎಂದೆಂದಿಗೂ ನಮ್ಮ ಸ್ಫೂರ್ತಿ. 🙏
ಹಲಸೂರು ಪೊಲೀಸ್ ಠಾಣೆ Halasuru Police Station retweeted
ರೌಡಿಶೀಟರ್‌ಗಳ ಕಾನೂನುಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸಿಸಿಬಿ ಸಂಘಟಿತ ಅಪರಾಧ ದಳದ ವಿಶೇಷ ಕಾರ್ಯಾಚರಣೆ ಮುಂದುವರಿದಿದೆ.
ಈ ಕಾರ್ಯಾಚರಣೆಯಲ್ಲಿ ಹತ್ತಾರು ವರ್ಷಗಳಿಂದ ಪೊಲೀಸರಿಗೆ ಸಿಗದೆ ಹಾಗೂ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಇಬ್ಬರು ರೌಡಿಶೀಟರ್‌ಗಳನ್ನು ಹೆಡೆಮುರಿ ಕಟ್ಟುವ ಮೂಲಕ ಸಂತ್ರಸ್ತರಿಗೆ ನ್ಯಾಯ ಒದಗಿಸಲಾಗಿದೆ.
The CCB Organised Crime Wing’s special operation to curb the illegal activities of rowdy-sheeters continues.
As part of the operation, two rowdy-sheeters who had been absconding for years, evading the police and failing to appear before the court, were finally apprehended, bringing them to justice and ensuring justice for the victims.
@CPBlr @seemantsingh96 @DgpKarnataka @KarnatakaCops
ಹಲಸೂರು ಪೊಲೀಸ್ ಠಾಣೆ Halasuru Police Station retweeted
112 ಕರೆ. ತಕ್ಷಣದ ಸ್ಪಂದನೆ. ಸಕಾಲಿಕ ಕ್ರಮದಿಂದ ಅಮೂಲ್ಯ ಜೀವ ರಕ್ಷಣೆ.
ಮಾದನಾಯಕನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಕಿತ್ತನಹಳ್ಳಿಯಲ್ಲಿ ಮಹಿಳೆಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಕುರಿತು ಮಾಹಿತಿ ಲಭ್ಯವಾದೊಡನೆ, ಹೊಯ್ಸಳ 122 ವಾಹನದ ಸಿಬ್ಬಂದಿ ತಕ್ಷಣವೇ ಸ್ಥಳಕ್ಕೆ ತಲುಪಿದ್ದಾರೆ.
ಬಾಧಿತ ಮಹಿಳೆಯನ್ನು ತಡಮಾಡದೆ ಮಾಗಡಿ ರಸ್ತೆಯ ಜೆ.ಎಂ. ಆಸ್ಪತ್ರೆಗೆ ಸೇರಿಸಿ, ಅಗತ್ಯ ತುರ್ತು ವೈದ್ಯಕೀಯ ಚಿಕಿತ್ಸೆ ದೊರೆಯುವಂತೆ ಕ್ರಮ ವಹಿಸಲಾಗಿದೆ.
ಅಪಾಯದ ಸಮಯದಲ್ಲಿ ಪ್ರತಿಯೊಂದು ಕ್ಷಣವೂ ಅಮೂಲ್ಯ. ತುರ್ತು ನೆರವಿಗೆ 112 ಕರೆ ಮಾಡಿ.
A call to 112. A swift response. A life saved through timely intervention.
In Kithanhalli, within Madanayakanahalli Police Station limits, Hoysala 122 responded promptly after a woman was reported to have attempted suicide by consuming poison.
The police personnel rushed her to J M Hospital, Magadi Road, ensuring she received timely medical attention.
When every second matters, dial 112.
#BengaluruCityPolice #WeServeWeProtect
@CPBlr @seemantsingh96 @DgpKarnataka @KarnatakaCops


















