ಗುಡುಗುಮಿಂಚು (@guduguminchu) header
ಗುಡುಗುಮಿಂಚು (@guduguminchu) profile picture

ಕಾವೇರಿಯಿಂದಮಾ ಗೋದಾವರಿವರಂ ಇರ್ಪ ನಾಡು ಅದು ಆ ಕನ್ನಡದೊಳ್‌ ಭಾವಿಸಿದ ಜನಪದಂ ವಸುಧಾ ವಲಯ ವಿಲೀನ, ವಿಶದ ವಿಷಯ ವಿಶೇಷಂ. https://nitter.gq/t.co/YGOIL6B6y5

ಬೆಂಗಳೂರು
Joined October 2009
Photo by ಗುಡುಗುಮಿಂಚು (@guduguminchu)Photo by ಗುಡುಗುಮಿಂಚು (@guduguminchu)Photo by ಗುಡುಗುಮಿಂಚು (@guduguminchu)Photo by ಗುಡುಗುಮಿಂಚು (@guduguminchu)Photo by ಗುಡುಗುಮಿಂಚು (@guduguminchu)Photo by ಗುಡುಗುಮಿಂಚು (@guduguminchu)Photo by ಗುಡುಗುಮಿಂಚು (@guduguminchu)Photo by ಗುಡುಗುಮಿಂಚು (@guduguminchu)Photo by ಗುಡುಗುಮಿಂಚು (@guduguminchu)Photo by ಗುಡುಗುಮಿಂಚು (@guduguminchu)
ಗುಡುಗುಮಿಂಚು retweeted
ರಾಷ್ಟ್ರೀಯತೆಯಿಂದ ಅಂತರಾಷ್ಟ್ರೀಯತೆಗೆ ಧಕ್ಕೆ .
12
54
3
228
4,794
ಗುಡುಗುಮಿಂಚು retweeted
ಜೆನ್ ಜ್ಹಿ ಕನ್ನಡತಿಯರು ಕನ್ನಡವನ್ನು ಇಂಗ್ಲಿಶ್ ಗಿಂತಲೂ ಹೆಚ್ಚು ನೆಚ್ಚಿಕೊಳ್ಳುತ್ತಿರುವುದು ನಲಿವಿನ ಸಂಗತಿ. ಕನ್ನಡ ನಮ್ಮ ಗುರುತು.
4
100
2
701
17,018
ಗುಡುಗುಮಿಂಚು retweeted
They are protesting to raise the minimum salary to ₹15,000 from the current ₹5,000. How is it possible to live on such a low wage, which doesn’t even cover the hike in milk prices?
101
896
40
7,264
357,659
ಗುಡುಗುಮಿಂಚು retweeted
ಧಾರವಾಡದ ವಿದ್ಯಾವರ್ಧಕ ಸಂಘವು ಕರ್ನಾಟಕದ ಏಕೀಕರಣದ ಹೋರಾಟದ ಕೇಂದ್ರ ಸ್ಥಾನವಾಗಿತ್ತು. ಅದರ ಹತ್ತಿರವೇ ಇರುವ ಈ ಜನ ನಿಬಿಡ ವೃತ್ತಕ್ಕೆ ರಾಣಾ ಪ್ರತಾಪ ಸಿಂಗ ಎಂಬ ಹೆಸರನ್ನು ಆಗಿನ BJP ಕಾರ್ಪೋರೇಟರ್ ಗಳು ಆಕ್ರಮವಾಗಿ ಇಟ್ಟಿದ್ದರು. ಈಗ ಯಾವಾಗೋ ಅಲ್ಲಿ ಅವನ ಪ್ರತಿಮೆಯನ್ನು ಸ್ಥಾಪಿಸಲಾಗಿದ್ದು, ಈ ವೃತ್ತವು ಧಾರವಾಡದ ಕೇಂದ್ರಬಿಂದು.
11
25
3
74
1,877
ಇದು ನಮ್ಮ ಕನ್ನಡಿಗರಲ್ಲಿ ಬೆಳೆಯಬೇಕಾಗಿರೋ ಮನೋಭಾವ. 🟨 🟥
14
137
7
855
25,558
ಗುಡುಗುಮಿಂಚು retweeted
Replying to @ClosedDomain
No one has the authority to dictate how or where Kannadigas should conduct themselves. It is in your own best interest to recognize your respective limits and act accordingly.
1
1
22
554
ಗುಡುಗುಮಿಂಚು retweeted
ಸರ್ಕಾರ ನಡೆಸುತ್ತಿರುವುದು ಮುಖ್ಯಮಂತ್ರಿಗಳಾ, ಮಂತ್ರಿಗಳಾ, ಶಾಸಕರಾ ಅಥವಾ ಕಾರ್ಪೊರೇಟ್ ಕಂಪನಿಗಳಾ? ಕನ್ನಡಿಗರ ಉದ್ಯೋಗದ ಲೆಕ್ಕ ಕೇಳಿದರೆ ನಮಗೆ ಉಪದೇಶ ಮಾಡುವ ಸರ್ಕಾರ, ಕಂಪನಿಗಳ ಮುಂದೆ ಮಾತ್ರ ಮೌನವಾಗಿರುವುದೇಕೆ? ಹೊಟ್ಟೆಗೆ ಹಿಟ್ಟಿಲ್ಲ, ಜುಟ್ಟಿಗೆ ಮಲ್ಲಿಗೆ ಹೂವು! #ಕರವೇ #ಕನ್ನಡಿಗರಿಗೆಉದ್ಯೋಗ #krv
4
30
1
93
1,962
ಗುಡುಗುಮಿಂಚು retweeted
Replying to @ClosedDomain
Wherever we may be, we are Kannadigas first. That is our identity. Everything else comes later.
1
4
100
4,312
ಗುಡುಗುಮಿಂಚು retweeted
ಚುನಾವಣಾ ಪ್ರಣಾಳಿಕೆಯಲ್ಲಿ ಶೇ.80ರಷ್ಟು ಉದ್ಯೋಗಗಳನ್ನು ಸ್ಥಳೀಯರಿಗೆ ಮೀಸಲಿಡುತ್ತೇವೆ ಎಂದು ಘೋಷಿಸಿದ್ದ ಕಾಂಗ್ರೆಸ್ ಸರ್ಕಾರಕ್ಕೆ ಈಗ ನಾಲ್ಕು ವರ್ಷಗಳಾಗಿವೆ. ಹಾಗಾದರೆ ಆ ಭರವಸೆ ಎಲ್ಲಿ ಹೋಯಿತು? ಕನ್ನಡಿಗರ ಉದ್ಯೋಗದ ಹಕ್ಕು ಚುನಾವಣೆಯ ಗೆಲುವಿಗಾಗಿ ಬಳಸಿದ ಘೋಷಣೆಯಷ್ಟೇನಾ? ಉತ್ತರ ಕೊಡಿ, ಕಾಂಗ್ರೆಸ್ ನಾಯಕರೇ!
4
65
3
214
2,415
ಗುಡುಗುಮಿಂಚು retweeted
Request authorities to save one of the most beautifully carved 8-9 CE Rashtrakuta era Veeragallus and rare Gosasa stone in need of urgent attention in Mavali Village , Soraba Taluk of Shivamogga PC: My friend Ramesh B Hirejamburu @ZP_Shivamogga @DeputyCommissi8 @HKPatilINC
9
118
4
320
22,773
ಮುಂದಿನ ವರ್ಷ ವಿಶ್ವ ಕನ್ನಡ ಸಮ್ಮೇಳನವನ್ನು ನಡೆಸುವುದಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಘೋಷಿಸಿದ್ದಾರೆ. ಕನ್ನಡಿಗರ ಬದುಕು ನಾಶವಾಗುತ್ತಿರುವಾಗ 'ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂವು' ಎಂಬಂತೆ ಈ ಸಮ್ಮೇಳನ ನಡೆಸುವ ಔಚಿತ್ಯ ನನಗೆ ಅರ್ಥವಾಗುತ್ತಿಲ್ಲ. ಕನ್ನಡ ಎಂದರೆ ನನ್ನ ದೃಷ್ಟಿಯಲ್ಲಿ ಕೇವಲ ಒಂದು ನುಡಿಯಲ್ಲ, ಕನ್ನಡಿಗರ ಬದುಕು ಕೂಡ ಹೌದು. ಅಂಥ ಕನ್ನಡಿಗರೇ ಸೋತು ಹೋಗಿರುವಾಗ ಈ ಸಂಭ್ರಮಕ್ಕೆ ಯಾವ ಅರ್ಥವಿದೆ? ವಿಶ್ವ ಕನ್ನಡ ಸಮ್ಮೇಳನವನ್ನು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಯವರ ನೇತೃತ್ವದಲ್ಲಿ ನಡೆಸುವುದಾಗಿಯೂ ಮುಖ್ಯಮಂತ್ರಿಗಳು ಹೇಳಿದ್ದಾರೆ. ವೀರಪ್ಪ ಮೊಯ್ಲಿಯವರು ತ್ರಿಭಾಷಾ ನೀತಿಯ ಪರವಾಗಿ ಇರುವವರು, ಕನ್ನಡಿಗರ ಮೇಲಿನ ಬಲವಂತದ ಹಿಂದಿ ಕಲಿಕೆಯ ಪರವಾಗಿ ಇರುವವರು. ಇಂಥವರು ವಿಶ್ವ ಕನ್ನಡ ಸಮ್ಮೇಳನದ ವೇದಿಕೆ ಮೇಲೆ ನಿಂತು ಏನನ್ನು ಹೇಳುತ್ತಾರೆ? ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಆಸಕ್ತಿಯಿಂದ ಎಸ್ ಎಸ್ ಎಲ್ ಸಿ ಯಲ್ಲಿ ಮೂರನೇ ಭಾಷೆಗೆ ಅಂಕ ನೀಡದೆ ಇರುವ ತೀರ್ಮಾನವನ್ನು ಸರ್ಕಾರ ಕೈಗೊಂಡಿತ್ತು. ಆದರೆ ಪರೀಕ್ಷೆ ನಡೆಯುತ್ತಿದ್ದ ಸಮಯದಲ್ಲಿ ಈ ಸುತ್ತೋಲೆ ಹೊರಡಿಸಿದ್ದರಿಂದಾಗಿ ಹೈಕೋರ್ಟ್ ರದ್ದು ಪಡಿಸಿತ್ತು. ಆದರೆ ಈಗ ಸರ್ಕಾರ ಎರಡು ನುಡಿ ನೀತಿಯ ಬಗ್ಗೆ ತುಟಿ ಎರಡು ಮಾಡುತ್ತಿಲ್ಲ. ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದ್ವಿಭಾಷಾ ನೀತಿಯ ಪರವಾಗಿ ಇರುವುದಾಗಿಯೂ, ಆದರೆ ಇದಕ್ಕೆ ವೀರಪ್ಪ ಮೊಯ್ಲಿ ಸೇರಿದಂತೆ ಹಲವರ ವಿರೋಧ ಇರುವುದಾಗಿಯೂ ಸ್ವತಃ ನನ್ನ ಬಳಿಯೇ ಹೇಳಿದ್ದರು. ಉತ್ತರದ ರಾಜ್ಯಗಳ ಮಕ್ಕಳು ಎರಡೇ ಭಾಷೆ ಕಲಿಯುತ್ತ, ಮೂರನೇ ಭಾಷೆಯ ಬದಲಿಗೆ ಅವರ ಭವಿಷ್ಯಕ್ಕೆ ಪೂರಕವಾದ ತಾಂತ್ರಿಕ ಕೌಶಲ್ಯದ ಪಾಠಗಳನ್ನು ಕಲಿಯುತ್ತಿರುವಾಗ ಕನ್ನಡದ ಮಕ್ಕಳು ಏಕೆ ಮೂರನೇ ಭಾಷೆಯ ಹೊರೆ ಹೊರಬೇಕು? ತಲೆತಲಾಂತರಗಳಿಂದ ನಡೆಯುತ್ತಿರುವ ಈ ಅನ್ಯಾಯ ನಿಲ್ಲಿಸಿ ಎಂದರೆ ಅದು ಸರ್ಕಾರದ ಕಿವಿಗೆ ಹೋಗುತ್ತಿಲ್ಲ. ಎಂಥ ದುಸ್ಥಿತಿ ಬಂದಿದೆ ನೋಡಿ, ಸರ್ಕಾರದ ನೀತಿಗಳನ್ನು ಕನ್ನಡ ದ್ರೋಹಿಗಳೇ ನಿರ್ಧರಿಸುತ್ತಿದ್ದಾರೆ. ಕರ್ನಾಟಕವನ್ನು ವಲಸಿಗರ ಸ್ವರ್ಗವನ್ನಾಗಿ ಮಾಡಿ ಅದನ್ನೇ ರಾಜ್ಯದ ಅಭಿವೃದ್ಧಿ ಎಂದು ನಮ್ಮ ಜನಪ್ರತಿನಿಧಿಗಳು ಎದೆ ಉಬ್ಬಿಸಿಕೊಂಡು ಓಡಾಡುತ್ತಿದ್ದಾರೆ. ಸರ್ಕಾರದ ಉನ್ನತ ಮಟ್ಟದ ಸಮಿತಿ ಒಂದು ನೀಡಿದ ಮಾಹಿತಿ ಪ್ರಕಾರ ರಾಜ್ಯದ ಎಂಜಿನಿಯರ್ ಪದವೀಧರರ ಪೈಕಿ ಶೇ. 17ರಷ್ಟು ಮಂದಿ ಮಾತ್ರ ಉದ್ಯೋಗ ಪಡೆದಿದ್ದಾರೆ. ಉಳಿದ ಶೇ.83 ರಷ್ಟು ಮಂದಿ ಎಲ್ಲಿಗೆ ಹೋದರು? ಸರ್ಕಾರಕ್ಕೆ ಕಿಂಚಿತ್ ಕಾಳಜಿ ಇದ್ದಿದ್ದರೆ ನಮ್ಮ ಮಕ್ಕಳು ಪದವಿ ಪಡೆದೂ ನಿರುದ್ಯೋಗಿಗಳಾಗಿ ಬೀದಿ ಬೀದಿ ಅಲೆಯುತ್ತಿರುವುದನ್ನು ಗಂಭೀರವಾಗಿ ಪರಿಗಣಿಸುತ್ತಿತ್ತು. ರಾಜ್ಯದ ಬಹುತೇಕ ಐಟಿ ಬಿಟಿ ಸೇರಿದಂತೆ ಖಾಸಗಿ ಸಂಸ್ಥೆಗಳು ಹೊರರಾಜ್ಯಗಳಿಂದ ಜನರನ್ನು ತಂದು ತುಂಬಿಕೊಳ್ಳುತ್ತಿವೆ. ಕರ್ನಾಟಕ ಈಗ ಕಸದ ತೊಟ್ಟಿ ಆಗಿ ಹೋಗಿದೆ. ಹೊರಗಿನಿಂದ ಬಂದವರ ಉದ್ದಾರಕ್ಕೆ ಸರ್ಕಾರವೇ ತೊಂಕ ಕಟ್ಟಿ ನಿಂತ ಮೇಲೆ ಯಾರೇನು ಮಾಡಲು ಆಗುತ್ತದೆ? ಕರ್ನಾಟಕದ ಉದ್ಯಮವೂ ನಮ್ಮ ಕೈಯಲ್ಲಿ ಇಲ್ಲ, ಉದ್ಯೋಗವೂ ನಮ್ಮ ಕೈಯಲ್ಲಿ ಇಲ್ಲ. ಕನಿಷ್ಟ ಪಕ್ಷ ಎಷ್ಟು ಮಂದಿ ಕನ್ನಡಿಗರಿಗೆ ಉದ್ಯೋಗ ಕೊಟ್ಟಿದ್ದೀರಿ ಎಂದು ಖಾಸಗಿ ಸಂಸ್ಥೆಗಳಿಗೆ ಕೇಳುವ ಧೈರ್ಯವೂ ಸರ್ಕಾರಕ್ಕೆ ಇಲ್ಲ. ಇಂಥ ಸಮೀಕ್ಷೆ ನಡೆಸಲು ಕಾರ್ಮಿಕ ಇಲಾಖೆ ಮೂರು ಬಾರಿ ಪ್ರಯತ್ನ ಪಟ್ಟು ವಿಫಲವಾಗಿದೆ. ಸರ್ಕಾರ ಈ ಕಾರ್ಪರೇಟ್ ಗೂಂಡಾಗಳಿಗೆ ಬೆದರಿ ಸಮೀಕ್ಷೆಗೆ ಅನುಮತಿಯನ್ನೇ ನೀಡಲಿಲ್ಲ. ಈಗ ನಾವು, ಕರ್ನಾಟಕ ರಕ್ಷಣಾ ವೇದಿಕೆಯವರು ಐಟಿ ಬಿಟಿ ಸಂಸ್ಥೆಗಳಿಗೆ ತೆರಳಿ 'ಕನ್ನಡಿಗರ ಲೆಕ್ಕ ಕೊಡಿ' ಎಂದು ಅಭಿಯಾನ ಆರಂಭಿಸಿದರೆ 'ಮಾರಲ್ ಪೋಲೀಸಿಂಗ್' ಮಾಡಬೇಡಿ ಎಂದು ಮುಖ್ಯಮಂತ್ರಿಗಳು ಉಪದೇಶ ಮಾಡುತ್ತಾರೆ. ಸರ್ಕಾರವನ್ನು ಮುಖ್ಯಮಂತ್ರಿಗಳು, ಮಂತ್ರಿಗಳು, ಶಾಸಕರು ನಡೆಸುತ್ತಿದ್ದಾರಾ ಅಥವಾ ಈ ಕಾರ್ಪರೇಟ್ ಕಂಪನಿಗಳು ನಡೆಸುತ್ತಿವೆಯಾ? ಸಾರ್ವಜನಿಕ ಮತ್ತು ಖಾಸಗಿ ವಲಯಗಳ ಎಲ್ಲಾ ಹಂತಗಳ ಉದ್ಯೋಗಗಳಲ್ಲಿ ಶೇ. 80 ರಷ್ಟನ್ನು ಕನ್ನಡಿಗರಿಗೆ ಮೀಸಲಾಗಿ ಇಡುವುದಾಗಿ ನಿಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ನೀವೇ ಹೇಳಿಕೊಂಡಿದ್ದಿರಿ. ಈಗ ಕಾರ್ಪರೇಟ್ ಕುಳಗಳಿಗೆ ಹೆದರಿ ಕಾಯ್ದೆ ಜಾರಿಗೆ ತರದೆ ಹೇಡಿಗಳಂತೆ ಕುಳಿತಿದ್ದೀರಿ. ರಾಜ್ಯ ಸರ್ಕಾರದ ಇಲಾಖೆಗಳ ಉದ್ಯೋಗಗಳನ್ನು ಒದಗಿಸುವ KPSC ಎಂಬ ವ್ಯವಸ್ಥೆಯನ್ನು ಎಲ್ಲಾ ರಾಜಕೀಯ ಪಕ್ಷಗಳು ಸೇರಿ ಸರ್ವನಾಶ ಮಾಡಿವೆ. ಭ್ರಷ್ಟಾಚಾರದ ಕೂಪವಾದ KPSC ನಡೆಸುವ ಪರೀಕ್ಷೆಗಳನ್ನು ನಂಬಿಕೊಂಡು ವರ್ಷಗಟ್ಟಲೆ ಊಟ, ನಿದ್ದೆ ಬಿಟ್ಟು ಓದಿದ ಕನ್ನಡದ ಮಕ್ಕಳ ಬದುಕು ನರಕ ಆಗಿದೆ. ಮನೆಯವರ ಪಾಲಿಗೆ ಈ ಮಕ್ಕಳು ಈಗ ಜೀವಂತ ಹೆಣಗಳಾಗಿದ್ದಾರೆ. ಎಷ್ಟೋ ಪರೀಕ್ಷೆಗಳು ನಡೆಯಲೇ ಇಲ್ಲ, ನಡೆದ ಪರೀಕ್ಷೆಗಳು ರದ್ದಾದವು. ಈ ಚಂದಕ್ಕೆ ನಮ್ಮ ತೆರಿಗೆ ಹಣದಲ್ಲಿ ಒಂದು ಸಂಸ್ಥೆ ಬೇಕಿತ್ತೆ? ಸಾವಿರಾರು ಕನ್ನಡ ಶಾಲೆಗಳನ್ನು ಈಗಾಗಲೇ ಮುಚ್ಚಿದ್ದೀರಿ. ಸಾಲದಕ್ಕೆ ಈಗ ಉಳಿದ ಶಾಲೆಗಳನ್ನು ಕನ್ನಡ ವಿರೋಧಿ ಖಾಸಗಿ ಸಂಸ್ಥೆಗಳಿಗೆ ಚಿನ್ನದ ತಟ್ಟೆಯಲ್ಲಿ ಇಟ್ಟು ಕೊಡುತ್ತಿದ್ದೀರಿ. ಶಾಲೆ ನಡೆಸುವ ಯೋಗ್ಯತೆ ಸರ್ಕಾರಕ್ಕೆ ಇಲ್ಲ ಎನ್ನುವುದನ್ನೂ ಅದು ಹೇಗೆ ಹೆಮ್ಮೆಯಿಂದ ಹೇಳಿಕೊಳ್ಳುತ್ತೀರಿ? ಏನಾಗಿದೆ ನಿಮಗೆ? ಅದರಲ್ಲೂ ಸರ್ಕಾರಿ ಶಾಲಾ ಶಿಕ್ಷಕರ ಮೇಲೆ ಗೂಬೆ ಕೂರಿಸುವ ಕುತಂತ್ರಗಳು ಬೇರೆ. ಖಾಸಗಿ ಶಾಲೆಗಳ ಮಟ್ಟದಲ್ಲೇ ಫಲಿತಾಂಶ ನೀಡುತ್ತಿರುವ ಸರ್ಕಾರಿ ಶಾಲಾ ಶಿಕ್ಷಕರು ಈ ಕೊಂಕು ಮಾತು ಬೇರೆ ಕೇಳಬೇಕು. ಇಷ್ಟೆಲ್ಲಾ ಇರುವಾಗ ನೀವು ಮಾಡಲು ಹೊರಟ ವಿಶ್ವ ಕನ್ನಡ ಸಮ್ಮೇಳನಕ್ಕೆ ಏನಾದರೂ ಅರ್ಥವಿದೆಯೇ? ಕನ್ನಡಿಗರ ಬದುಕನ್ನು ಶವ ಪೆಟ್ಟಿಗೆಯಲ್ಲಿ ಇಟ್ಟು ಅದರ ಮೇಲೆ ಎಷ್ಟು ಹೂವು ಸುರಿದರೆ ಏನು ಪ್ರಯೋಜನ? ಈ ಬೂಟಾಟಿಕೆ ಬಿಟ್ಟು ಕನ್ನಡದ ಮಕ್ಕಳ ರಕ್ಷಣೆಗೆ ಕಾಯ್ದೆಗಳನ್ನು ರೂಪಿಸುವ ಶಕ್ತಿ ನಿಮಗಿಲ್ಲವೇ? ಅದ್ಯಾವುದನ್ನೂ ಮಾಡದೇ ನಡೆಸುವ ವಿಶ್ವ ಕನ್ನಡ ಸಮ್ಮೇಳನ ನಿಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಇನ್ನೊಂದು ರಾಜಕೀಯ ಸಮಾವೇಶವಾಗುತ್ತದೆ ಅಷ್ಟೆ.
32
197
12
682
21,174
ಗುಡುಗುಮಿಂಚು retweeted
ಈ ಚಾನೆಲ್ ನೆಡೆಸುವ RSS ನವರ ಒಂದೇ ಉದ್ದೇಶ;ಕನ್ನಡ ಭಾಷೆಗೆ ನಿಧಾನವಾಗಿ ವಿಷ ಸೇವನೆ ಮಾಡಿಸಿ"ಒಂದು ದೇಶ ಒಂದು ಭಾಷೆ" ಎಂಬ ವಾತಾವರಣ ನಿರ್ಮಾಣ ಮಾಡಿ ಹಿಂದಿ ಮತ್ತು ಸಂಸ್ಕೃತವನ್ನು ಮುನ್ನೆಲೆಗೆ ತರೋದು? ಉತ್ತರ ಭಾರತದಿಂದ ಕರ್ನಾಟಕಕ್ಕೆ ಬರುತ್ತಿರುವ ಅನಿಯಂತ್ರಿತ ವಲಸಿಗರಿಗೆ ಕನ್ನಡ ಕಲಿಯಲು ಎಂದಾದ್ರು ಹೇಳ್ತಾರ ಇವರು?
Here are children from Bengaluru to Bidar, eager to learn more languages at school, contrary to what Congress and other vested interests want to restrict. The government must listen to parents, teachers and students before making decisions that affect their education and future.
3
19
83
969
ಗುಡುಗುಮಿಂಚು retweeted
Replying to @ChekrishnaCk
ನಂದಿನಿ ಮೊಸರು ನವೆಂಬರ್ 1ರಿಂದ ₹54ರಿಂದ ₹68ಕ್ಕೆ ಏರಿಕೆಯಾಗಿದೆ (ನಂತರ ₹2 ಕಡಿತ ಪ್ರಸ್ತಾಪ). ಅಮುಲ್ 900ಗ್ರಾಂ ಪ್ಯಾಕೆಟ್ ಮಾರುಕಟ್ಟೆಯಲ್ಲಿ ₹58ಕ್ಕೆ ಲಭ್ಯವಿದೆ. ಸ್ಥಳೀಯ ಮಾಧ್ಯಮಗಳು ಇದನ್ನು ₹10 ಇಳಿಕೆ ಮತ್ತು ಬೆಲೆ ಸಮರ ಎಂದು ಚಿತ್ರಿಸುತ್ತಿವೆ. ಅಮುಲ್ ಅಧಿಕೃತವಾಗಿ ಯಾವುದೇ ಬೆಲೆ ಕಡಿತ ಘೋಷಣೆ ಮಾಡಿಲ್ಲ. ಇದು ರಿಟೇಲ್ ಬೆಲೆ ವ್ಯತ್ಯಾಸದ ಆಧಾರದ ಸುದ್ದಿ.
2
8
1
36
2,661
ಕರ್ನಾಟಕ ಕೇವಲ ರಾಜರಷ್ಟೇ ಅಲ್ಲ, ವೀರ ರಾಣಿಯರ ನಾಡೂ ಹೌದು. ಬೆಳಗಾವಿ ಜಿಲ್ಲೆಯ ಬೆಳವಡಿ ಸಂಸ್ಥಾನದ ರಾಣಿ ಬೆಳವಡಿ ಮಲ್ಲಮ್ಮ 17ನೇ ಶತಮಾನದಲ್ಲಿ ಮಹಿಳೆಯರ ಸೈನ್ಯವನ್ನು ಕಟ್ಟಿ, ಛತ್ರಪತಿ ಶಿವಾಜಿ ಮಹಾರಾಜರ ಸೈನ್ಯದ ವಿರುದ್ಧ ಧೈರ್ಯದಿಂದ ಹೋರಾಡಿದರು. ಅದಕ್ಕೂ ಒಂದು ಶತಮಾನ ಮುಂಚೆ, 16ನೇ ಶತಮಾನದಲ್ಲಿ, ಮಂಗಳೂರಿನ ಬಳಿಯ ಉಳ್ಳಾಲದ ತುಳುನಾಡಿನ ರಾಣಿ ಅಬ್ಬಕ್ಕ ಚೌಟ ಪೋರ್ಚುಗೀಸರ ದಾಳಿಗಳನ್ನು ಹಲವು ದಶಕಗಳ ಕಾಲ ಎದುರಿಸಿ ತಮ್ಮ ನಾಡನ್ನು ಕಾಪಾಡಿದರು. ಅಗ್ನಿಬಾಣಗಳನ್ನು ಬಳಸಿ ಶತ್ರುಗಳನ್ನು ಬೆದರಿಸಿದ ಅವರನ್ನು 'ಅಭಯ ರಾಣಿ' ಎಂದು ಕರೆಯಲಾಯಿತು. ಈ ಇಬ್ಬರು ವೀರನಾರಿಯರ ಧೈರ್ಯ ಕನ್ನಡಿಗರಿಗೆ ಮಾತ್ರವಲ್ಲ, ಪ್ರತಿಯೊಬ್ಬರಿಗೂ ಪ್ರೇರಣೆ. Karnataka is not only a land of kings, but also a land of heroic queens. Rani Belavadi Mallamma of the Belavadi principality in Belagavi district raised an army of women in the 17th century and fought bravely against the army of Chhatrapati Shivaji Maharaj. A century before her, in the 16th century, Rani Abbakka Chowta of Ullal near Mangaluru, the queen of Tulunadu, resisted Portuguese attacks for several decades and protected her land. Known for using fire arrows to terrify her enemies, she came to be called “Abhaya Rani,” the fearless queen. The courage of these two valiant women is an inspiration not only to Kannadigas, but to everyone. #RaniAbbakka #BelawadiMallamma #WomenWarriors #Ullal #Belagavi #PortugueseRebellion #FearlessQueens #Rajyotsava2026 #Rajyotsava #KannadaRajyotsava #Shalashikshana
3
29
701
ಗುಡುಗುಮಿಂಚು retweeted
The Jobs for Kannadigas campaign has reached out to 400+ companies from Google to Wipro. Both sides have engaged civilly, without a single complaint. Why are people who aren't even stakeholders in this issue fear-mongering & calling for a crackdown? Yen nim problem? #Bengaluru
53
280
14
1,267
42,314
ಗುಡುಗುಮಿಂಚು retweeted
Yes. Early Seunas (9th–mid-13th c.) had clear predominant Kannada markers: Kannada personal names/titles (Bhillama, Rajugi, Sellavidega), Chalukya-Rashtrakuta marriages, majority of ~500 inscriptions in Kannada (esp. Karnataka ones from Bhillama II onward), and Kannada coin legends. This continued past independence under Bhillama V and Singhana II. Marathi appears earlier as additions/curses but only becomes the dominant epigraphic language in the final ~50 years (late 13th–early 14th c., mainly Ramachandra’s reign).
1
8
1
20
360
ಗುಡುಗುಮಿಂಚು retweeted
ಮುಚ್ಚಿ ವಿಲೀನ ಎಂದರೆ ಕೊಂದು ಸ್ವರ್ಗಕ್ಕೆ ಕಳುಹಿಸಲಾಯಿತು ಎಂದಂತೆ. ಈಗ ಮೂರು ಸಾವಿರ ಚಿಲ್ಲರೆ ಸರ್ಕಾರಿ ಶಾಲೆಗಳನ್ನು ಮುಚ್ಚಲು ಸರ್ಕಾರ ತುದಿಗಾಲಲ್ಲಿ ನಿಂತಿದೆ. ಇದನ್ನು ಸರ್ಕಾರ ಮುಚ್ಚುವುದಲ್ಲ ಬದಲಿಗೆ ವಿಲೀನ ಎಂದು ಕರೆಯುತ್ತದೆ. ಇದು ಕೊಂದದ್ದನ್ನು ಕೊಲೆಯಲ್ಲ, ಬದಲಿಗೆ ಸ್ವರ್ಗಕ್ಕೆ ಕಳುಹಿಸುವುದು ಎಂದಂತೆ. - ದೇವನೂರು ಮಹಾದೇವ (ಎದೆಗೆ ಬಿದ್ದ ಅಕ್ಷರದಲ್ಲಿ)
9
72
5
259
7,824
ಮಾನ್ಯ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ @CMofKarnataka @DKShivakumar ಅವರೇ, ದಯಮಾಡಿ 2023ರಲ್ಲಿ ಚುನಾವಣೆ ಪೂರ್ವದಲ್ಲಿ ಹೊರಡಿಸಿದ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯನ್ನು ಈಡೇರಿಸಿ ಎಂದು ಕೋರುತ್ತೇನೆ. ಸಾರ್ವಜನಿಕ ಹಾಗೂ ಖಾಸಗಿ ವಲಯದಲ್ಲಿ ಎಲ್ಲ ಹಂತದ ಉದ್ಯೋಗಾವಕಾಶಗಳಲ್ಲಿ ಶೇ.80ರಷ್ಟು ಹುದ್ದೆಗಳನ್ನು ಸ್ಥಳೀಯರಿಗೆ ನೀಡುತ್ತೇವೆ ಎಂಬ ಭರವಸೆಯನ್ನು ನೀಡಿದ್ದಿರಿ. ನಾಲ್ಕು ವರ್ಷಗಳಾದರೂ ಅದು ಈಡೇರಿಲ್ಲ. ಇದಕ್ಕಿಂತ ದೊಡ್ಡ ಆದ್ಯತೆಯ ವಿಷಯ ಇನ್ನೊಂದಿರಲು ಸಾಧ್ಯವಿಲ್ಲ. ಯಾಕೆಂದರೆ ಇದು ಕನ್ನಡದ ಮಕ್ಕಳ ಭವಿಷ್ಯದ ಪ್ರಶ್ನೆ. ನೀವು ಈ ಬೇಡಿಕೆಯನ್ನು ಈಡೇರಿಸಿದರೆ ಕರ್ನಾಟಕ ರಕ್ಷಣಾ ವೇದಿಕೆ ಅಭಿಯಾನ ನಡೆಸುವ ಅಗತ್ಯವೂ ಇರುವುದಿಲ್ಲ. ಕೂಡಲೇ ಸಚಿವ ಸಂಪುಟ ಸಭೆಯಲ್ಲಿ ಈ ವಿಷಯವನ್ನು ಇಟ್ಟು ನೀವೇ ನೀಡಿದ ಭರವಸೆಯನ್ನು ಈಡೇರಿಸಿಬಿಡಿ. ನಾವು ಲಕ್ಷಾಂತರ ಕನ್ನಡದ ಮಕ್ಕಳನ್ನು ಸೇರಿಸಿ ಇಡೀ ಸರ್ಕಾರಕ್ಕೆ ಒಂದು ಅಭಿನಂದನಾ ಸಭೆ ನಡೆಸುತ್ತೇವೆ. ನೀವು ಕಾಂಗ್ರೆಸ್ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಾಗಿದ್ದಾಗಲೇ ಈ ಪ್ರಣಾಳಿಕೆ ರೂಪುಗೊಂಡಿದೆ. ನೀವು ಅಪಾರವಾದ ಕನ್ನಡ ಪ್ರೇಮವನ್ನು ಇಟ್ಟುಕೊಂಡವರು ಎಂಬುದು ನನಗೆ ಖಚಿತವಾಗಿ ಗೊತ್ತಿದೆ. ಈ ಕಾರಣದಿಂದಲೇ ನಿಮ್ಮ ಪ್ರಣಾಳಿಕೆಯಲ್ಲಿ ಈ ಅಂಶವನ್ನು ಸೇರಿಸಲಾಗಿತ್ತು ಎಂಬುದನ್ನೂ ನಾನು ಬಲ್ಲೆ. ಚುನಾವಣೆಗೆ ಮುನ್ನ ಪ್ರಣಾಳಿಕೆಯಲ್ಲಿ ನೀವು ಕೊಟ್ಟ ಭರವಸೆಗಳೇ ನಿಮ್ಮ ಸರ್ಕಾರದ ಪ್ರಮುಖ ಧ್ಯೇಯವಾಕ್ಯಗಳಾಗಬೇಕು. ಕೊಟ್ಟ ಭರವಸೆಗಳನ್ನು ಈಡೇರಿಸುವುದು ಸಾಂವಿಧಾನಾತ್ಮಕ ಕರ್ತವ್ಯ ಮಾತ್ರವಲ್ಲ, ನೈತಿಕ ಕರ್ತವ್ಯವೂ ಕೂಡ ಹೌದು. ನಾಲ್ಕು ವರ್ಷಗಳಾದರೂ ಈ ಬೇಡಿಕೆ ಈಡೇರಿಲ್ಲ. ಸಿದ್ಧರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ತಮ್ಮ ಸರ್ಕಾರದ ಸಚಿವ ಸಂಪುಟ ಈ ಕಾಯ್ದೆಗೆ ಅನುಮೋದನೆ ನೀಡಿತ್ತು. ಆದರೆ ಮುಂದಿನ ಪ್ರಕ್ರಿಯೆ ನಡೆಯಲಿಲ್ಲ. ದಯಮಾಡಿ ಈ ಭರವಸೆ ಈಡೇರಿಸಿಬಿಡಿ, ಕರ್ನಾಟಕದ ಜನತೆಗೆ ಇದೇ ನೀವು ಕೊಡುವ ದೀಪಾವಳಿಯ ಕೊಡುಗೆಯಾಗುತ್ತದೆ. ಕನ್ನಡಿಗರಿಗೆ ಖಾಸಗಿ ವಲಯದಲ್ಲಿ ಶೇ.80 ರಷ್ಟು ಉದ್ಯೋಗ ಕೊಡುವ ವಿಷಯದಲ್ಲಿ ನಿಮಗೆ ಯಾರ ವಿರೋಧವೂ ಇರಲು ಸಾಧ್ಯವಿಲ್ಲ. ಸ್ವತಃ ನಿಮ್ಮ ಸಂಪುಟದ ಸದಸ್ಯರಾದ ಮಾನ್ಯ ಐಟಿಬಿಟಿ, ಗೃಹ ಸಚಿವರಾದ ಪ್ರಿಯಾಂಕ್ ಖರ್ಗೆಯವರು @PriyankKharge ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಕಾಯ್ದೆ ಜಾರಿಗೆ ತರುವುದು ನಮ್ಮ ಬದ್ಧತೆ, ಅದನ್ನು ತಂದೇ ತರುತ್ತೇವೆ ಎಂದು ಇತ್ತೀಚಿಗೆ ಹೇಳಿದ್ದಾರೆ. ಮಾನ್ಯ ಕಾರ್ಮಿಕ ಸಚಿವರಾದ ಸಂತೋಷ್ ಲಾಡ್ @SantoshSLadINC ಅವರೂ ಕೂಡ ಇದೇ ಮಾತನ್ನು ಹೇಳಿದ್ದಾರೆ. ವಿರೋಧ ಪಕ್ಷಗಳ ನಾಯಕರೂ ಸಹ ಇದೇ ಮಾತುಗಳನ್ನು ಹಿಂದೆ ಹೇಳಿದ್ದಾರೆ. ಭಾರತೀಯ ಜನತಾ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಾದ ಮಾನ್ಯ ಬಿ.ವೈ.ವಿಜಯೇಂದ್ರ @BYVijayendra ಅವರು ನಮ್ಮ ಆಗ್ರಹ ಅಭಿಯಾನವನ್ನು ಬೆಂಬಲಿಸಿರುವುದನ್ನು ನೀವು ಗಮನಿಸಿರುತ್ತೀರಿ ಎಂದು ಭಾವಿಸುತ್ತೇನೆ. ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿಯವರೂ @BSBommai ಸಹ ಹಿಂದೆ ಖಾಸಗಿ ವಲಯದಲ್ಲಿ ಶೇ. 80ರಷ್ಟು ಹುದ್ದೆಗಳನ್ನು ಕನ್ನಡಿಗರಿಗೆ ಕಾಯ್ದಿರಿಸುವ ವಿಷಯದಲ್ಲಿ ತಮ್ಮ ಪಕ್ಷ ಬದ್ಧವಾಗಿದೆ ಎಂದು ಹೇಳಿದ್ದರು. ಇಷ್ಟಾದ ಮೇಲೂ ಯಾರಿಗಾದರೂ ತಕರಾರು ಇದ್ದರೆ ನಾನು ವಿರೋಧ ಪಕ್ಷದ ನಾಯಕರ ಬಳಿಗೆ ತೆರಳಿ ಅವರಿಗೆ ಕನ್ನಡಿಗರ ಪ್ರಾತಿನಿಧ್ಯದ ಕಾಯ್ದೆ ವಿಷಯದಲ್ಲಿ ಮನವಿ ಮಾಡುವ, ಮನವೊಲಿಸುವ ಕಾರ್ಯ ಮಾಡುತ್ತೇನೆ. ಅವರೂ ಸಹ ಖಂಡಿತವಾಗಿಯೂ ಇದನ್ನು ಬೆಂಬಲಿಸುತ್ತಾರೆ. ಇಷ್ಟೆಲ್ಲ ಇರುವಾಗ ಕೆಲವೇ ಕೆಲವು ಬೆರಳೆಣಿಕೆಯ, ಬ್ಲಾಕ್ ಮೇಲ್ ಕೂಗುಮಾರಿ ಉದ್ಯಮಿಗಳ ಒತ್ತಡಕ್ಕೆ ನೀವು ಮಣಿಯಕೂಡದು. ನಿಮ್ಮ ಹಠ, ಛಲವನ್ನು ನಾನು ಬಲ್ಲೆ. ಇಂಥ ಬ್ಲಾಕ್ ಮೇಲ್ ಗಳನ್ನು ನೀವು ಮೆಟ್ಟಿನಿಲ್ಲುವ ಶಕ್ತಿ, ಸ್ಥೈರ್ಯ ಹೊಂದಿದವರು. ನಿಮ್ಮ ಕಾಲದಲ್ಲಿ ಈ ಕಾಯ್ದೆ ಜಾರಿಗೆ ಬಂದರೆ ಕನ್ನಡಿಗರು ನಿಮ್ಮನ್ನು ಹೃದಯದಲ್ಲಿ ಇಟ್ಟುಕೊಂಡು ಆರಾಧಿಸುತ್ತಾರೆ. ಇತಿಹಾಸದ ಪುಟಗಳಲ್ಲಿ ನಿಮ್ಮ ಹೆಸರು ಚಿರಸ್ಥಾಯಿಯಾಗುತ್ತದೆ. ಕನ್ನಡದ ಮಕ್ಕಳಿಗೆ ಅತಿದೊಡ್ಡ ಸಾಕ್ಷಿಗುಡ್ಡೆಯನ್ನು ನೀವು ಬಿಟ್ಟು ಹೋದಂತೆ ಆಗುತ್ತದೆ. ನವೆಂಬರ್ 1ರಿಂದ ಕರ್ನಾಟಕ ರಕ್ಷಣಾ ವೇದಿಕೆ ನಡೆಸುತ್ತಿರುವ ʻಆಗ್ರಹ ಅಭಿಯಾನʼದ ಭಾಗವಾಗಿ ದೊಡ್ಡ ಸಂಸ್ಥೆಗಳಿಂದ ಹಿಡಿದು ಸಣ್ಣ ಸಂಸ್ಥೆಗಳವರೆಗೆ ಈವರೆಗೆ ಸುಮಾರು ಮುನ್ನೂರೈವತ್ತಕ್ಕೂ ಹೆಚ್ಚು ಸಂಸ್ಥೆಗಳನ್ನು ನಾವು ತಲುಪಿದ್ದೇವೆ. ಎಲ್ಲೂ ಕೂಡ ಒಂದೇ ಒಂದು ಕಹಿ ಘಟನೆ ನಡೆದಿಲ್ಲ. ಎಲ್ಲ ಕಡೆಯಲ್ಲೂ ನಮ್ಮ ಮುಖಂಡರು ಗೌರವಯುತವಾಗಿ ನಡೆದುಕೊಂಡಿದ್ದಾರೆ, ಖಾಸಗಿ ಸಂಸ್ಥೆಗಳ ಮುಖಂಡರೂ ಸಹ ನಮ್ಮನ್ನು ಪ್ರೀತಿ, ಗೌರವದಿಂದಲೇ ನಡೆಸಿಕೊಂಡಿದ್ದಾರೆ. ಹಿಂದೆ ತಮ್ಮ ಸರ್ಕಾರದ ಕಾರ್ಮಿಕ ಇಲಾಖೆ ಇಂಥದ್ದೇ ಒಂದು ಸಮೀಕ್ಷೆ ನಡೆಸಲು ಮುಂದಾದಾಗ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಸಮೀಕ್ಷೆ ನಡೆಯದಂತೆ ತಡೆದವು ಎಂಬುದನ್ನು ನಾನು ಕೇಳಿದ್ದೇನೆ. ನಾವು ಈಗ ಸರ್ಕಾರಕ್ಕೆ ಶಕ್ತಿ ತುಂಬುವ ಕೆಲಸವನ್ನಷ್ಟೇ ಮಾಡುತ್ತಿದ್ದೇವೆ. ನಮ್ಮ ಸಮೀಕ್ಷೆಯಲ್ಲಿ ದೊರೆಯುವ ನೈಜ ಅಂಕಿ ಅಂಶಗಳನ್ನು ನಾವು ವರದಿಯ ರೂಪದಲ್ಲಿ ತಮಗೇ ಸಲ್ಲಿಸುತ್ತೇವೆ. ಈಗ ನಮ್ಮ ಅಭಿಯಾನಕ್ಕೆ ಖಾಸಗಿ ಸಂಸ್ಥೆಗಳ ಮುಖ್ಯಸ್ಥರುಗಳು ಆಶಾದಾಯಕವಾಗಿ ಸ್ಪಂದಿಸುತ್ತಿರುವಾಗ, ಕನ್ನಡಿಗರ ಪ್ರಾತಿನಿಧ್ಯದ ಕಾಯ್ದೆಯನ್ನು ಜಾರಿಗೆ ತರಲು ಇದು ಸಕಾಲ. ದಯಮಾಡಿ ತಾವು ಈ ಕಾಯ್ದೆಯನ್ನು ಜಾರಿಗೊಳಿಸಿ ಎಂದು ಮತ್ತೊಮ್ಮೆ ವಿನಮ್ರವಾಗಿ ಮನವಿ ಮಾಡುತ್ತೇನೆ. -ಟಿ.ಎ.ನಾರಾಯಣಗೌಡ ರಾಜ್ಯಾಧ್ಯಕ್ಷರು ಕರ್ನಾಟಕ ರಕ್ಷಣಾ ವೇದಿಕೆ
29
248
11
777
14,084